ರೂಮ್ ಗಲೀಜಾಗಿದೆ, ಗ್ರೀನ್ ಸ್ಕ್ರೀನ್ ಬಳಸಬೇಕಿತ್ತು ಎಂದ ನೆಟ್ಟಿಗ: ರಿಯಲ್ ಐಡಿಯಿಂದ ಬನ್ನಿ ಎಂದು ಕ್ಲಾಸ್ ತಗೊಂಡ ಬಾಲಿವುಡ್​ ಕ್ಯೂಟಿ ಶ್ರದ್ಧಾ ಕಪೂರ್! Shraddha Kapoor

Shraddha Kapoor ಚಿತ್ರ Instagram
Shraddha Kapoor ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ ನಟಿ ಶ್ರದ್ಧಾ ಕಪೂರ್ ತಮ್ಮ ಸರಳ ಸ್ವಭಾವದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಗಮನ ಸೆಳೆಯುತ್ತಾರೆ
  • ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮೈಕಲ್​ ಜಾಕ್ಸನ್​ ಅವರ ಬ್ಯಾಡ್​ ಹಾಡಿಗೆ ನೃತ್ಯ ಮಾಡಿದ್ದು ಸಖತ್​ ವೈರಲ್ ಆಗಿದೆ
  • ರಾಹುಲ್ ಮೋದಿ ಚಿತ್ರೀಕರಿಸಿದ ಈ ವಿಡಿಯೋದಲ್ಲಿ, ಶ್ರದ್ಧಾ ಕಪೂರ್ ಯಾವುದೇ ಮುಜುಗರವಿಲ್ಲದೆ ನೃತ್ಯ ಮಾಡುತ್ತಿದ್ದಾರೆ
  • ಮನೆ ತುಂಬಾ ಅದ್ಭುತವಾಗಿದೆ. ಕನಿಷ್ಟ ನೀವು ಹಸಿರು ಪರದೆಯನ್ನಾದರೂ ಬಳಸಿ ವಿಡಿಯೋ ಮಾಡಬೇಕಿತ್ತು
ಮುಂಬೈ: ಬಾಲಿವುಡ್‌ನ ನಟಿ ಶ್ರದ್ಧಾ ಕಪೂರ್ (Shraddha Kapoor) ತಮ್ಮ ಸರಳ ಮತ್ತು ನೈಸರ್ಗಿಕ ಸ್ವಭಾವದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಗಮನ ಸೆಳೆಯುತ್ತಾರೆ. ಇದೀಗ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪಾಪ್ ಗಾಯಕ ಮೈಕಲ್​ ಜಾಕ್ಸನ್​ ಅವರ ಬ್ಯಾಡ್​ ಹಾಡಿಗೆ ನೃತ್ಯ ಮಾಡಿದ ವಿಡಿಯೋ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶ್ರದ್ಧಾ ಕಪೂರ್ ನೃತ್ಯ ವಿಡಿಯೋ ವೈರಲ್

ರಾಹುಲ್ ಮೋದಿ ಚಿತ್ರೀಕರಿಸಿದ ಈ ವಿಡಿಯೋದಲ್ಲಿ, ಶ್ರದ್ಧಾ ಕಪೂರ್ ಯಾವುದೇ ಮುಜುಗರವಿಲ್ಲದೆ ಮೈಕೆಲ್ ಜಾಕ್ಸನ್ ಹಾಡಿಗೆ ಅತ್ಯಂತ ಆರಾಮದಾಯಕವಾಗಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಅವರ ಪ್ರತಿ ಸ್ಟೆಪ್ಸ್​​ ಕೂಡಾ ಎನರ್ಜಿಟಿಕ್ ಆಗಿದ್ದವು.
ಆದರೆ, ಈ ವಿಡಿಯೋದಲ್ಲಿ ಎಲ್ಲರ ಗಮನ ಸೆಳೆದಿದ್ದು ರಾಹುಲ್​ ಮೋದಿ ಅವರ ಮಡಿಲಲ್ಲಿದ್ದ ಒಂದು ಚಿತ್ರಕಥೆಯ ಪುಸ್ತಕದ ಮೇಲೆ! ಇದನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು, "ಶ್ರದ್ಧಾ ಕಪೂರ್ ತಮ್ಮ ರಾಹುಲ್​ ಬರೆದಿರುವ ಮುಂದಿನ ಚಿತ್ರದ ಸ್ಕ್ರಿಪ್ಟ್ ಓದಿ, ಅದು ಅಂತಿಮಗೊಂಡ ಖುಷಿಯಲ್ಲಿ ಈ ರೀತಿ ಸ್ಟೆಪ್​ ಹಾಕುತ್ತಿದ್ದಾರಾ? ಎಂದು ಕಾಮೆಂಟ್​ ಬಾಕ್ಸ್​ನಲ್ಲಿ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ.
ಇನ್ನೊಬ್ಬ ಬಳಕೆದಾರರು ಮನೆ ತುಂಬಾ ಅದ್ಭುತವಾಗಿದೆ. ಕನಿಷ್ಟ ನೀವು ಹಸಿರು ಪರದೆಯನ್ನಾದರೂ ಬಳಸಿ ವಿಡಿಯೋ ಮಾಡಬೇಕಿತ್ತು ಎಂದು ಕಾಮೆಂಟ್​ ಮಾಡಿದ್ದರು. ಇದಕ್ಕೆ ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ ನಟಿ "ಪ್ರಿಯ ತಾಯಿ, ನಿಜವಾದ ಐಡಿಯಿಂದ ಬನ್ನಿ ಎಂದು ರಿಪ್ಲೈ ಮಾಡಿದ್ದಾರೆ.

ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಬಗ್ಗೆ

ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಕಳೆದ ಕೆಲವು ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಈ ಜೋಡಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಹಲವು ಕಡೆ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಆದಾಗ್ಯೂ, ಶ್ರದ್ಧಾ ಅವರ ಸಾಮಾಜಿಕ ವಿಡಿಯೋಗಳ ನಡುವೆ ರಾಹುಲ್​ ಮೋದಿ ಕ್ಯಾಮೆರಾ ಹಿಂದೆ ನೋಡುತ್ತಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ.
2024 ರ ಆರಂಭದಲ್ಲಿ ಮುಂಬೈನಲ್ಲಿ ಭೋಜನ ಕೂಟದ ನಂತರ ಇಬ್ಬರು ಒಟ್ಟಿಗೆ ಕಾಣಿಸಿಕೊಂಡ ನಂತರ ಅವರ ಸಂಬಂಧಗಳ ಬಗ್ಗೆ ವದಂತಿಗಳು ಹರಿದಾಡಲು ಪ್ರಾರಂಭಿಸಿದವು. ಶ್ರದ್ಧಾ ಅಥವಾ ರಾಹುಲ್ ಇಬ್ಬರೂ ತಾವು ಡೇಟಿಂಗ್ ಮಾಡುತ್ತಿರುವುದನ್ನು ಸಾರ್ವಜನಿಕವಾಗಿ ದೃಢಪಡಿಸದಿದ್ದರೂ, ಅವರಿಬ್ಬರ ಒಡನಾಟ ಮತ್ತು ಸಾಮಾಜಿಕ ಮಾಧ್ಯಮದ ಕ್ಷಣಗಳು ಅಭಿಮಾನಿಗಳನ್ನು ಮಾತನಾಡುವಂತೆ ಮಾಡುತ್ತಲೇ ಇವೆ.
ಈ ಹಿಂದೆ ಈ ಜೋಡಿ ಬೇರ್ಪಟ್ಟಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಶ್ರದ್ಧಾ ಡಿಸೆಂಬರ್ 2024 ರಲ್ಲಿ ರಾಹುಲ್ ಜೊತೆ ವಡಾ ಪಾವ್ ಡೇಟ್‌ನ ಸ್ನೇಹಶೀಲ ಚಿತ್ರವನ್ನು ಹಂಚಿಕೊಂಡಾಗ ಆ ಊಹಾಪೋಹಕ್ಕೆ ತೆರೆ ಎಳೆದರು. ಅಂದಿನಿಂದ ಈ ಜೋಡಿ ಕಾರ್ಯಕ್ರಮಗಳಾಗಲಿ, ವಿಹಾರಗಳಲ್ಲಾಗಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net