OTT ಗೆ ಬರ್ತಿದ್ದಾರೆ ಶ್ರದ್ಧಾ; ಶೀಘ್ರದಲ್ಲಿ ಕೃಷ್ಣ ಆಂಡ್ ಹಿಸ್ ಲೀಲಾ

State- Shraddha
Published on

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಇಂಡಸ್ಟ್ರಿ ಸಾಕಷ್ಟು ಬದಲಾವಣೆಗೆ ಒಗ್ಗಿಕೊಂಡಿದೆ. ಸಿನಿಮಾ ಚಿತ್ರಮಂದಿರದಲ್ಲೇ ನೋಡಬೇಕು ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ, ಒಟಿಟಿ (ಓವರ್ ದಿ ಟಾಪ್) ಕೈ ಬೆರಳಲ್ಲೇ ಸಿನಿಮಾ ತೋರಿಸುತ್ತಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳು ಈ ವೇದಿಕೆಯಲ್ಲಿ ತೆರೆಕಂಡಿದ್ದು, ನಿರ್ವಪಕರೂ ಸೇಫ್ ಝೋನ್​ನಲ್ಲಿದ್ದಾರೆ. ಇದೀಗ ನಟಿ ಶ್ರದ್ಧಾ ಶ್ರೀನಾಥ್ ಸಹ ಡಿಜಿಟಲ್ ವೇದಿಕೆ ಏರಲು ಸಜ್ಜಾಗಿದ್ದಾರೆ. ಅಂದರೆ, ತೆಲುಗಿನಲ್ಲಿ ಸಿದ್ಧವಾಗಿರುವ ‘ಕೃಷ್ಣ ಆಂಡ್ ಹಿಸ್ ಲೀಲಾ’ ಸಿನಿಮಾ ಶೀಘ್ರದಲ್ಲಿ ಒಟಿಟಿಯಲ್ಲಿ ನೋಡಲು ಲಭ್ಯವಾಗಲಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ ತಿಂಗಳಲ್ಲೇ ಈ ಸಿನಿಮಾ ತೆರೆಕಾಣಬೇಕಿತ್ತು. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಇಂಡಸ್ಟ್ರಿಯೇ ಸ್ತಬ್ಧವಾದ ಕಾರಣ, ಸದ್ಯ ಒಟಿಟಿ ಮೊರೆ ಹೋಗಿದೆ ಚಿತ್ರತಂಡ. ಈ ಮೂಲಕ ಶ್ರದ್ಧಾ ಶ್ರೀನಾಥ್ ಅಭಿನಯದ ಚಿತ್ರವೊಂದು ಚಿತ್ರಮಂದಿರದಲ್ಲಿ ತೆರೆಕಾಣದೆ, ನೇರವಾಗಿ ಒಟಿಟಿಯಲ್ಲಿ ತೆರೆಕಾಣುತ್ತಿರುವುದು ಇದೇ ಮೊದಲು. ರಾಣಾ ದಗ್ಗುಬಾಟಿ ಅರ್ಪಿಸಿರುವ, ರವಿಕಾಂತ್ ಪೆರೆಪು ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಸಿನಿಮಾ ತ್ರಿಕೋನ ಪ್ರೇಮಕಥಾನಕದ ಎಳೆ ಹೊಂದಿದೆ. ಸೀರಟ್ ಕಪೂರ್ ನಾಯಕನಾಗಿ ಕಾಣಿಸಿಕೊಂಡರೆ, ಸಿದ್ದು ಜೋನ್ನಲಗಡ್ಡ, ಶ್ರದ್ಧಾ ಶ್ರೀನಾಥ್ ಮತ್ತು ಶಾಲಿನಿ ವದ್ನಿಕಟ್ಟಿ ನಾಯಕಿಯರಾಗಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ ತಿಂಗಳಲ್ಲಿಯೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತು. ಇದೀಗ ಒಟಿಟಿ ಮೂಲಕ ಕೃಷ್ಣ ಆಂಡ್ ಹಿಸ್ ಲೀಲಾ ಚಿತ್ರ ಬಿಡುಗಡೆ ಆಗಲಿದೆ. ಯಾವಾಗ, ಯಾವ ಒಟಿಟಿ ಎಂಬುದು ಶೀಘ್ರ ಘೋಷಿಸಲಿದ್ದೇವೆ. | ಶ್ರದ್ಧಾ ಶ್ರೀನಾಥ್ ನಟಿ https://www.vijayavani.net/sushant-singhs-financial-condition-was-good-ex-manager-shares-his-monthly-expenses/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net