

ಬೆಂಗಳೂರು: ‘ದಿಯಾ’ ನಂತರ ಖುಷಿ ರವಿ ‘ಸ್ಪೂಕಿ ಕಾಲೇಜ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕೆಲವು ಚಿತ್ರಗಳ ಜತೆಗೆ ಅವರೊಂದು ಕಿರುಚಿತ್ರದಲ್ಲೂ ನಟಿಸಿದ್ದು, ಅದೀಗ ಅಮೇಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಗಿದೆ. ಈ ಕಿರುಚಿತ್ರದ ಹೆಸರು ‘ಎವರಿಥಿಂಗ್ ಈಸ್ ಪಾಸಿಬಲ್’. ಇಕ್ಷ್ವಾಕು ರಾಮ್ ನಿರ್ದೇಶಿ ಸಿರುವ ಈ ಸೈನ್ಸ್ ಫಿಕ್ಷನ್ ಚಿತ್ರರಲ್ಲಿ ಖುಷಿ ಜತೆಗೆ ಎಂ.ಕೆ. ಮಠ ಸಹ ಕಾಣಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಕಿರುಚಿತ್ರವೊಂದರಲ್ಲಿ ನಟಿಸಿರುವ ಕುರಿತು ಮಾತನಾಡುವ ಖುಷಿ, ‘ಎರಡನೆಯ ಲಾಕ್ಡೌನ್ ಸಮಯದಲ್ಲಿ ನಿರ್ದೇಶಕರು ಬಂದು ಕಥೆ ಹೇಳಿದರು. ನನಗೆ ತುಂಬಾ ಹಿಡಿಸಿತು. ಒಂದು ವಿಭಿನ್ನ ಕಾನ್ಸೆಪ್ಟ್ನ ಕಿರುಚಿತ್ರ ಇದಾಗಿದ್ದು, ಪ್ರೖೆಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ. ಎಲ್ಲರೂ ನೋಡಿ ಬೆಂಬಲ ಕೊಟ್ಟರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಯೋಗಗಳನ್ನು ಮಾಡುವ ಉತ್ಸಾಹ ಬರುತ್ತದೆ’ ಎನ್ನುತ್ತಾರೆ.