

ಬೆಂಗಳೂರು: ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರದ ಮೊದಲ ಹಂತದ ಚಿತ್ರೀಕರಣಮುಗಿದಿದ್ದು, ಸದ್ಯದಲ್ಲೇ ಎರಡನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು, ಬಳ್ಳಾರಿ ಹಾಗೂ ಸಂಡೂರಿನಲ್ಲಿ ಒಟ್ಟು 35 ದಿನಗಳ ಚಿತ್ರೀಕರಣ ನಡೆಯಲಿದ್ದು, 18 ವಿಭಿನ್ನ ಸೆಟ್ಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. 1950ರ ಕಾಲಘಟ್ಟದಲ್ಲಿದ್ದ ಹೂವಿನ ಮಾರುಕಟ್ಟೆ, ಜೈಲ್ ಕಟ್ಟಡ, ಆಸ್ಪತ್ರೆ, ಪೊಲೀಸ್ ಸ್ಟೇಶನ್ ಸೇರಿದಂತೆ 18 ಸೆಟ್ಗಳು ‘ಕೆಜಿಎಫ್’ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅವರ ಸಾರಥ್ಯದಲ್ಲಿ ನಿರ್ವಣವಾಗುತ್ತಿದೆ.
ಆರ್. ಚಂದ್ರ ನಿರ್ವಿುಸಿ-ನಿರ್ದೇಶಿಸುತ್ತಿರುವ ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ ಜೊತೆಗೆ ರಾಹುಲ್ ದೇವ್, ಜಗಪತಿ ಬಾಬು, ಕೋಟ ಶ್ರೀನಿವಾಸರಾವ್ ಮುಂತಾದವರು ಅಭಿನಯಿಸುತ್ತಿದ್ದು, ನಾಯಕಿಯ ಹುಡುಕಾಟ ನಡೆಯುತ್ತಿದೆ. ಚಿತ್ರಕ್ಕೆ ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದೆ.