ತೆಲುಗು ಬಿಗ್​ಬಾಸ್​ನಿಂದ ಎಲಿಮಿನೇಟ್​ ಆದ ಕನ್ನಡತಿ ಶೋಭಾಗೆ ಸಿಕ್ಕ ಸಂಭಾವನೆ ಕೇಳಿದ್ರೆ ದಂಗಾಗ್ತೀರಿ!​

Shobhashetty
Published on

ಹೈದರಾಬಾದ್​: ಟಾಲಿವುಡ್​ ಸೂಪರ್​ ಸ್ಟಾರ್​ ನಾಗಾರ್ಜುನ್​ ನಿರೂಪಣೆ ಇರುವ ತೆಲುಗು ಬಿಗ್​ಬಾಸ್​ ರಿಯಾಲಿಟಿ ಶೋನ 7ನೇ ಆವೃತ್ತಿಯಲ್ಲಿ ತನ್ನದೇಯಾದ ವಿಶಿಷ್ಟ ಮ್ಯಾನರಿಸಂ ಮತ್ತು ಸ್ಪರ್ಧೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದ ಕನ್ನಡತಿ ಶೋಭಾ ಶೆಟ್ಟಿ 14 ವಾರದ ಬಳಿಕ ಎಲಿಮಿನೇಟ್​ ಆಗಿ ಮನೆಯಿಂದ ಹೊರಬಂದಿದ್ದಾರೆ.

ಮನೆಯಲ್ಲಿ ರಗಡ್​ ಲೇಡಿಯಾಗಿ ಅಬ್ಬರಿಸಿದ್ದ ಶೋಭಾ, ಫೈನಲ್​ ಹಂತಕ್ಕೇರುವ ಸ್ಪರ್ಧಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದರು. ಅಲ್ಲದೆ, ಫೈನಲ್​ನಲ್ಲಿಯೂ ಗೆಲ್ಲಬಹುದು ಎಂದು ಊಹಿಸಲಾಗಿತ್ತು. ಅನೇಕ ಬಾರಿ ಎಲಿಮಿನೇಟ್​ ಆಗಿದ್ದರೂ ಮೊದಲು ಉಳಿಯುತ್ತಿದ್ದದ್ದು ಮಾತ್ರ ಶೋಭಾ. ಎಲ್ಲ ಟಾಸ್ಕ್​​ಗಳಲ್ಲಿಯೂ ಅದ್ಭುತವಾಗಿ ಪ್ರದರ್ಶನ ನೀಡುವ ಮೂಲಕ ಎಲ್ಲ ಮನಸ್ಸನ್ನು ಸೆಳೆದಿದ್ದರು. ಆದರೆ, ಇದೀಗ ಅವರು ಎಲಿಮಿನೇಶನ್​ ಆಗಿರುವುದು ಅನೇಕರಿಗೆ ಶಾಕ್​ ಆಗಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ 6 ಮಂದಿ ಮಾತ್ರ ಉಳಿದಿದಿದ್ದಾರೆ.

ಕಳೆದ ಭಾನುವಾರದ ಎಪಿಸೋಡ್​ನಲ್ಲಿ ಶೋಭಾ ಎಲಿಮಿನೇಟ್​ ಆಗಿ ಮನೆಯಿಂದ ಹೊರಗಡೆ ಬಂದಿದ್ದಾರೆ. ಸ್ಪರ್ಧಿ ಅರ್ಜುನ್​ ಈಗಾಗಲೇ ಫೈನಲ್​ ತಲುಪಿದ್ದಾರೆ. ಇವರೊಂದಿಗೆ ಪ್ರಿಯಾಂಕಾ, ಪ್ರಶಾಂತ್​, ಅಮರ್​ದೀಪ್​, ಯವರ್​ ಮತ್ತು ಶಿವಾಜಿ ಕೂಡ ಫೈನಲ್​ ಪ್ರವೇಶ ಪಡೆದಿದ್ದಾರೆ. ಮಾಮೂಲಿಯಾಗಿ ಐದು ಮಂದಿ ಫೈನಲ್​ನಲ್ಲಿ ಇರುತ್ತಾರೆ. ಆದರೆ, ಈ ಬಾರಿ 6 ಮಂದಿ ಫೈನಲ್​ ಸುತ್ತಿಗೇರಿದ್ದಾರೆ. ಫೈನಲ್​ ಹೊಸ್ತಿಲಿನಲ್ಲಿ ಎಲಿಮಿನೇಟ್​ ಆದ ಶೋಭಾ ಶೆಟ್ಟಿ ವೇದಿಕೆ ಮೇಲೆಯೇ ಕಣ್ಣೀರಿಟ್ಟರು. ಆದರೂ, ಉಳಿದವರಿಗೆ ಆಲ್​ ದಿ ಬೆಸ್ಟ್​ ಹೇಳಿ ಮನೆಯಿಂದ ಹೊರಗಡೆ ಬಂದಿದ್ದಾರೆ.

ಇದೀಗ ಶೋಭಾ ಅವರ ಸಂಭಾವನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. 14 ವಾರಗಳ ಕಾಲ ಮನೆಯಲ್ಲಿದ್ದ ಶೋಭಾಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮೂಲಗಳ ಪ್ರಕಾರ ಶೋಭಾ ವಾರಕ್ಕೆ 2.5 ಲಕ್ಷ ರೂ.ನಂತೆ 14 ವಾರಕ್ಕೆ 35 ಲಕ್ಷ ರೂ. ಪಡೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಶೋ ಆಯೋಜಕರಾಗಲಿ ಅಥವಾ ಶೋಭಾ ಶೆಟ್ಟಿಯಾಗಲಿ ಅಧಿಕೃತವಾಗಿ ಹೇಳಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಹರಿದಾಡುತ್ತಿದೆ. ಆಪ್ತ ಮೂಲಗಳು ತಿಳಿಸಿವೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net