

ಮೃತ ನಟ ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಖುಷಿ ಕೊಡುವಂತ ವಿಚಾರವೊಂದು ಹೊರಬಿದ್ದಿದೆ. ಚಿರು ಪತ್ನಿ ಮೇಘನಾ ಕೂಡ ತಮ್ಮ ಇನ್ಸ್ಟಾ ಮೂಲಕ ಅದನ್ನು ಹೇಳಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಅವರ ಕೊನೇ ಸಿನಿಮಾ ಶಿವಾರ್ಜುನ ಅಕ್ಟೋಬರ್ 16ರಂದು ಮತ್ತೆ ಬಿಡುಗಡೆಯಾಗಲಿದೆ ಎಂಬ ಸಿಹಿ ಸುದ್ದಿ ಹೊರಬಿದ್ದಿದೆ. ಮಾರ್ಚ್ 12 ಅಂದರೆ ಲಾಕ್ಡೌನ್ ಆಗುವುದಕ್ಕೂ ಕೆಲವೇ ದಿನ ಮೊದಲು ತೆರೆ ಕಂಡಿದ್ದ ಸಿನಿಮಾ ಶಿವಾರ್ಜುನ. ಅದಾದ ಬಳಿಕ ಚಿರು ಮತ್ಯಾವ ಸಿನಿಮಾವನ್ನೂ ಮಾಡಲಿಲ್ಲ. ಮಾ.12ಕ್ಕೆ ಬಿಡುಗಡೆಯಾದರೂ ಒಂದು ವಾರದವರೆಗೆ ಮಾತ್ರ ಓಡಿತ್ತು. ನಂತರ ಸಿನಿಮಾ ಥಿಯೇಟರ್ಗಳೆಲ್ಲ ಬಂದ್ ಆಗಿದ್ದವು.
ಅಕ್ಟೋಬರ್ 15ಕ್ಕೆ ಚಿತ್ರಮಂದಿರಗಳು ಮತ್ತೆ ತೆರೆಯಲಿದ್ದು, ಅಗಲಿದ ನಟನಿಗೆ ಗೌರವ ಎಂಬಂತೆ ಮತ್ತೊಮ್ಮೆ ಅವರ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಮೇಘನಾ ರಾಜ್ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದು, ಚಿರಂಜೀವಿ ಮತ್ತೆ ಉದಯಿಸುತ್ತಿದ್ದಾರೆ...ಅದಕ್ಕೊಂದು ಕಾರಣವೂ ಇದೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಪತಿ ಚಿರು ಶಿವಾರ್ಜುನ ಸಿನಿಮಾದಲ್ಲಿ ಮೇಘನಾ ರೊಮ್ಯಾಂಟಿಕ್ ಹಾಡೊಂದನ್ನು ಹಾಡಿದ್ದಾರೆ. ಎ. ಆರ್.ಶಿವಾ ತೇಜಸ್ ನಿರ್ದೇಶನ ಮಾಡಿದ್ದಾರೆ.