

ಬೆಂಗಳೂರು: ಕರೊನಾ ಬಂದಿದ್ದೇ ಬಂದಿದ್ದು, ನಮಗೆ ಪರಿಚಯ ಇರುವವರನ್ನೇ ಗುರುತಿಸುವುದು ತುಂಬ ಕಷ್ಟ. ಏಕೆಂದರೆ ಎಲ್ಲರ ಮುಖಕ್ಕೂ ಮಾಸ್ಕ್. ಆದರೆ, ಈ ಫೋಟೋದಲ್ಲಿರುವವರನ್ನು ನೋಡಿದರೆ ಒಂದೇ ಸಲಕ್ಕೆ ಗುರುತಿಸಬಹುದು. ಹೌದು, ಕನ್ನಡದ ಸೆಂಚುರಿಸ್ಟಾರ್ ಶಿವರಾಜ್ಕುಮಾರ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎದುರಾಗಿದ್ದಾರೆ. ಅವಶ್ಯಕ ಸಾಮಗ್ರಿಕೊಳ್ಳಲು ಸಾಧ್ಯವಾದಷ್ಟು ಮಾಸ್ಕ್ ಇಲ್ಲದೆ ಹೊರಬರಬೇಡಿ ಎಂದಿದ್ದಾರೆ. ಅಷ್ಟೇ ಅಲ್ಲ ಹೋಮ್ ಮೇಡ್ ಮಾಸ್ಕ್ ತಯಾರಿಸಿ ಅದನ್ನೇ ಬಳಸಿ ಎಂದೂ ಸಲಹೆ ನೀಡಿದ್ದಾರೆ. ಸದ್ಯ ಅವರ ಮಾಸ್ಕ್ ಧರಿಸಿರುವ ಲುಕ್ ಎಲ್ಲೆಡೆ ಸಖತ್ ವೈರಲ್ ಆಗಿದೆ.