Shivarajkumar Interview : ಮಾಸ್​ನಿಂದ ಬೇಲ್​ ಪಡೆದ ಶಿವಣ್ಣ

ಈ ವರ್ಷ ತೆಲುಗಿನ "ಪೆದ್ದಿ' ಚಿತ್ರದಲ್ಲಿ ನಟಿಸಿದ ಬಳಿಕ ನಟ ಶಿವರಾಜಕುಮಾರ್​ ಬ್ಯಾಕ್​ ಟು ಬ್ಯಾಕ್​ ಎರಡು ಸಿನಿಮಾಗಳ ರಿಲೀಸ್​ಗೆ ಎದುರು ನೋಡುತ್ತಿದ್ದಾರೆ. ಒಂದು ಪವನ್​ ಒಡೆಯರ್​ ನಿರ್ದೇಶನ, ಕೆವಿಎನ್​ ಪ್ರೊಡಕ್ಷನ್ಸ್​ ನಿರ್ಮಾಣದಲ್ಲಿ ಮೂಡಿಬಂದಿರುವ "ಬೇಲ್​' ಮತ್ತೊಂದು "ಜೈಲರ್​ 2'. "ಬೇಲ್​' ಇದೇ ಅ. 2ರಂದು ರಿಲೀಸ್​ ಆಗಲಿದೆ.
ನಟ ಶಿವರಾಜಕುಮಾರ್ ಸಂದರ್ಶನ
ನಟ ಶಿವರಾಜಕುಮಾರ್ ಸಂದರ್ಶನ
Published on: 

| ಹರ್ಷವರ್ಧನ್​ ಬ್ಯಾಡನೂರು

ಈ ವರ್ಷ ತೆಲುಗಿನ "ಪೆದ್ದಿ' ಚಿತ್ರದಲ್ಲಿ ನಟಿಸಿದ ಬಳಿಕ ನಟ ಶಿವರಾಜಕುಮಾರ್​ ಬ್ಯಾಕ್​ ಟು ಬ್ಯಾಕ್​ ಎರಡು ಸಿನಿಮಾಗಳ ರಿಲೀಸ್​ಗೆ ಎದುರು ನೋಡುತ್ತಿದ್ದಾರೆ. ಒಂದು ಪವನ್​ ಒಡೆಯರ್​ ನಿರ್ದೇಶನ, ಕೆವಿಎನ್​ ಪ್ರೊಡಕ್ಷನ್ಸ್​ ನಿರ್ಮಾಣದಲ್ಲಿ ಮೂಡಿಬಂದಿರುವ "ಬೇಲ್​' ಮತ್ತೊಂದು "ಜೈಲರ್​ 2'. "ಬೇಲ್​' ಇದೇ ಅ. 2ರಂದು ರಿಲೀಸ್​ ಆಗಲಿದ್ದು ಶಿವಣ್ಣ, "ನಾನು ಆಪರೇಷನ್​ಗೆ ತೆರಳುವ ಮುನ್ನ ಪವನ್​ ಬಂದು ಕಥೆ ಹೇಳಿದರು. ಆಗ ಅನಾರೋಗ್ಯವಿದ್ದ ಕಾರಣ ಸಿನಿಮಾ ಮಾಡಬೇಕಾ ಎಂಬ ಡೌಟ್​ ನನ್ನಲ್ಲಿತ್ತು. ಬ್ಲಾಡರ್​ ಕ್ಯಾನ್ಸರ್​ ಇದ್ದ ಕಾರಣ ನನ್ನಲ್ಲೂ ಭಯ ಇದ್ದೇ ಇತ್ತು. ನಾನು ಅಮೆರಿಕಗೆ ತೆರಳುವ ಎರಡು ದಿನ ಮುಂಚೆ ಬಂದು ಶಿವಣ್ಣ ನಾವು ಕಾಯುತ್ತೇವೆ, ನೀವೇ ಈ ಸಿನಿಮಾ ಮಾಡಬೇಕು ಅಂತ ಪವನ್​ ಮತ್ತವರ ಪತ್ನಿ ಅಪೇಾ ಬೇಡ ಅಂದರೂ ಕೇಳದೇ ಒತ್ತಾಯ ಮಾಡಿ ಅಡ್ವಾನ್ಸ್​ ನೀಡಿದರು. ಆಪರೇಷನ್​ ಮುಗಿದ ಎರಡೇ ತಾಸಿನಲ್ಲಿ ಪವನ್​ಗೆ ಕರೆ ಮಾಡಿ ತಿಳಿಸಿದೆ' ಎನ್ನುತ್ತಾರೆ. ಹಾಗೇ "ಬೇಲ್​' ಕಥೆಯ ಬಗ್ಗೆ, "ನನಗೆ ಕಥೆಯ ಲೈನ್​ ತುಂಬ ಇಷ್ಟವಾಯಿತು. ಈ ರೀತಿಯ ಕಥೆಗಳು ಇದುವರೆಗೂ ಬಂದಿಲ್ಲ ಅಂತಲ್ಲ. ಟ್ರೀಟ್ಮೆಂಟ್​ ತುಂಬ ಚೆನ್ನಾಗಿದೆ. ಡ್ರಾಮಾ, ಕೆಮ್​, ಸೋಷಿಯಲ್​ ಎಲಿಮೆಂಟ್ಸ್​, ಥ್ರಿಲ್ಲರ್​, ಕಾಮಿಡಿ... ಹೀಗೆ "ಬೇಲ್​' ಒಂದು ಜಾನರ್​ಗೆ ಸೀಮಿತವಲ್ಲ. ಕುತೂಹಲದಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ನೋಡಿಸಿಕೊಂಡು ಹೋಗುವ ಗಟ್ಟಿ ಕಂಟೆಂಟ್​ ಚಿತ್ರದಲ್ಲಿದೆ. ನನ್ನ ಗೆಟಪ್​ ನನಗಂತೂ ಇಷ್ಟವಾಯಿತು. "ಪೆದ್ದಿ' ಶೂಟಿಂಗ್​ ವೇಳೆ ರಾಮಚರಣ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಜಯರಾಮ್​, ಸಾಯಿಕುಮಾರ್​, ಸಂಗೀತಾ, ಸಂಜನಾ, ಯೋಗಿ, ದೀತ್​ ಹೀಗೆ ಹಲವರು ನಟಿಸಿದ್ದು, ಎಲ್ಲ ಪಾತ್ರಗಳಿಗೂ ಪ್ರಾಮುಖ್ಯವಿದೆ. ವೈದಿ ಛಾಯಾಗ್ರಹಣ, ಅಜನೀಷ್​ ಲೋಕನಾಥ್​ ಸಂಗೀತ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ' ಎಂದು ಮಾಹಿತಿ ನೀಡುತ್ತಾರೆ ಶಿವರಾಜಕುಮಾರ್​.

ಬೇಲ್​ ಚಿತ್ರದ ಪೋಸ್ಟರ್
ಬೇಲ್​ ಚಿತ್ರದ ಪೋಸ್ಟರ್

ಮಾಸ್​ ನನಗೂ ಸಾಕಾಗಿದೆ...

"ಓಂ', "ಎಕೆ 47', "ಜೋಗಿ'ಯಂತಹ ಹಲವು ಹಿಟ್​ ಮಾಸ್​ ಸಿನಿಮಾಗಳನ್ನು ನೀಡಿರುವ ಶಿವಣ್ಣಗೆ ಈಗ ಮಾಸ್​ ಸಾಕಾಗಿದೆಯಂತೆ. ಹೀಗಾಗಿಯೇ ಭಿನ್ನ, ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದು, "ಡೈಲಾಗ್​ಗಿಂತ ಭಾವನೆಗಳ ಮೂಲಕ ವ್ಯಕ್ತಪಡಿಸಬೇಕು. ಆ ಪಾತ್ರದ ನೋಟವೇ ಎಮೋಷನ್​ ಆಗಿರಬೇಕು. ಹಾಗೆ ಹೀರೋಯಿಸಂ ಇಮೇಜ್​ ಬಿಟ್ಟು ಮಾಡಿರುವ ಸಿನಿಮಾ "ಬೇಲ್​'. ಒಮ್ಮೆ ಡ್ಯೂಪ್​ ಬಳಸಿ ಚಿತ್ರೀಕರಣ ಮಾಡುತ್ತಿದ್ದರು. ಬೇಡ ನಾನೇ ಮಾಡುತ್ತೇನೆ ಅಂತ ನಟಿಸಿದೆ. ಡ್ಯೂಪ್​ ಚೆನ್ನಾಗಿ ಮಾಡುತ್ತಾರೆ. ಆದರೆ, ನನ್ನ ಸ್ಟೈಲ್​ ಮತ್ತು ಸ್ವ್ಯಾಗ್​​ ನಾನೇ ಮಾಡಬೇಕು ಅಂತ ನನ್ನಾಸೆ' ಎನ್ನುತ್ತಾರೆ.

ಶಿವರಾಜಕುಮಾರ್ ಸಂದರ್ಶನ
ಶಿವರಾಜಕುಮಾರ್ ಸಂದರ್ಶನ

ಡರ್ಟಿ ಗೇಮ್​ನಿಂದ ಹೊರಗೆ

ಕೆಲ ಸಿನಿಮಾಗಳು ಘೋಷಣೆಯಾಗಿ ಸ್ಥಗಿತಗೊಂಡಿದ್ದರ ಬಗ್ಗೆ ಶಿವರಾಜಕುಮಾರ್​, "ಕೆಲವೊಮ್ಮೆ ತಂಡಗಳು ಜೋಷ್​ನಲ್ಲಿ ಬರುತ್ತಾರೆ. ಆದರೆ, ಸಡನ್ನಾಗಿ ಜೋಷ್​ ಕಡಿಮೆಯಾಗಿಬಿಡುತ್ತದೆ. ಒಂದು ಡರ್ಟಿ ಗೇಮ್​ ನಡೆಯುತ್ತಿತ್ತು. ಅದರಿಂದ ನಾನು ಹೊರಗೆ ಬಂದೆ. ಮಧ್ಯದಲ್ಲಿದ್ದ ಕೆಲವರು ಆಟವಾಡುತ್ತಿದ್ದರು. ಅವರು ಯಾರು ಅಂತ ಹೇಳುವುದಿಲ್ಲ. ಆದರೆ, ಈಗ ನಾನೇ ತಂಡಗಳ ಜತೆ ನೇರವಾಗಿ ಮಾತನಾಡುತ್ತೇನೆ' ಎಂದು ಹೇಳಿಕೊಳ್ಳುತ್ತಾರೆ.

ಮದ್ಯಪಾನ, ಧೂಮಪಾನಗಳಿಂದ ದೂರ

ಆಪರೇಷನ್​ ಬಳಿಕ ಶಿವಣ್ಣ ಆರೋಗ್ಯದ ಬಗ್ಗೆ ಶಿವಣ್ಣ, "ಮೊದಲಿನಂತೆಯೇ ವಾಕ್​ ಮಾಡುತ್ತೇನೆ, ವ್ಯಾಯಾಮ, ಡಯಟ್​ ಮಾಡುತ್ತೇನೆ. ಕಳೆದ ಎರಡು ವರ್ಷಗಳಿಂದ ಧೂಮಪಾನ, ಮದ್ಯಪಾನ ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಡಾ. ಮನೋಹರನ್​ ಎರಡು ವಾರಕ್ಕೊಮ್ಮೆ ಕರೆ ಮಾಡಿ ವಿಚಾರಿಸುತ್ತಿರುತ್ತಾರೆ. ಕೆಲವೊಮ್ಮೆ ಟೆಸ್ಟ್​, ಸ್ಕ್ಯಾನ್​ಗೆ ಹೇಳುತ್ತಾರೆ. 2015ರಲ್ಲಿ ಹೃದಯ ಸಂಬಂಧಿ ಸಮಸ್ಯೆ ಉಂಟಾಗಿದ್ದ ಕಾರಣ, ಕೆಲ ಮೆಡಿಸಿನ್​ ತೆಗೆದುಕೊಳ್ಳುತ್ತೇನೆ. ಅದನ್ನು ಹೊರತುಪಡಿಸಿದರೆ ಸಂಪೂರ್ಣ ಗುಣಮುಖನಾಗಿದ್ದೇನೆ' ಎನ್ನುತ್ತಾರೆ.

ಬೇಲ್ ಚಿತ್ರದ ಪೋಸ್ಟರ್
ಬೇಲ್ ಚಿತ್ರದ ಪೋಸ್ಟರ್

ಅನಂತ್​ ಸರ್​ ನನ್ನ ಫೇವರಿಟ್​

ಹಿರಿಯ ನಟ ಅನಂತ್​ ನಾಗ್​ ಅವರಿಗೆ ದಾದಾ ಸಾಹೇಬ್​ ಾಲ್ಕೆ ಪ್ರಶಸ್ತಿ ದೊರೆತ ಬಗ್ಗೆ ಶಿವಣ್ಣ, "ಅನಂತ್​ ಸರ್​ ನನ್ನ ಫೇವರಿಟ್​ ನಟರಲ್ಲಿ ಒಬ್ಬರು. "ಅಂಕುರ್​' ಚಿತ್ರದಿಂದ ಹಿಡಿದು ಅವರ ಬಹುತೇಕ ಎಲ್ಲ ಚಿತ್ರಗಳನ್ನೂ ನೋಡಿದ್ದೇನೆ. ಭಾರತೀಯ ಚಿತ್ರರಂಗದಲ್ಲೇ ಅತ್ಯುತ್ತಮ, ಸ್ಫುರದ್ರೂಪಿ ನಟರಲ್ಲೊಬ್ಬರು ಅವರು. ಸಿನಿಮಾ ಬಗ್ಗೆ ತಿಳಿದುಕೊಂಡಿರುವ ವ್ಯಕ್ತಿ. "ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಎಷ್ಟು ಅದ್ಭುತವಾಗಿ ನಟಿಸಿದ್ದರು. ಅವರ ಕಂಠ, ಭಾಷೆ ಎಲ್ಲವೂ ಅಂದ. ಅವರ ಜತೆ ಒಳ್ಳೆ ಬಾಂಡಿಂಗ್​ ಇದೆ. ಶಂಕರ್​ ನಾಗ್​, ಅಪ್ಪಾಜಿ ಜತೆಗಿನ ಒಡನಾಟದ ಬಗ್ಗೆ ಸಿಕ್ಕಾಗೆಲ್ಲ ಮಾತನಾಡುತ್ತಾರೆ. ಅವರ ಮಾತಿನಲ್ಲಿ ಕೇಳುತ್ತಿದ್ದರೆ ಕೇಳುತ್ತಿರಬೇಕು ಅಂತನ್ನಿಸುತ್ತದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಹಿರಿಯ ನಟ ಅನಂತ್ ನಾಗ್ ಜತೆ ಶಿವರಾಜಕುಮಾರ್
ಹಿರಿಯ ನಟ ಅನಂತ್ ನಾಗ್ ಜತೆ ಶಿವರಾಜಕುಮಾರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net