ಭಜರಂಗಿ 2ಕ್ಕೆ ಹಲವು ತೊಡಕುಗಳು: ಫೆ. 15ರಿಂದ ಮತ್ತೆ ಶೂಟಿಂಗ್

Bajaramgi 2
Published on

ಬೆಂಗಳೂರು: ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ‘ಭಜರಂಗಿ-2’ ಸಿನಿಮಾದ ಬಿಡುಗಡೆ ಇನ್ನೂ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣ ಬೆಂಕಿ ಅನಾಹುತ.

‘ಭಜರಂಗಿ-2’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಉಂಟಾದ ಅಗ್ನಿ ಆಕಸ್ಮಿಕದ ಹಿನ್ನೆಲೆಯಲ್ಲಿ ಚಿತ್ರೀಕರಣ ಈ ಹಿಂದೆ ಹಾಕಿಕೊಂಡ ಯೋಜನೆಯಂತೆ ನಡೆಯದ್ದರಿಂದ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ. ‘ಜಯಣ್ಣ ಕಂಬೈನ್ಸ್’ ನಿರ್ಮಾಣದಲ್ಲಿ ಎ. ಹರ್ಷ ನಿರ್ದೇಶನದಲ್ಲಿ ನಟ ಶಿವರಾಜ್​ಕುಮಾರ್ ಅಭಿನಯಿಸುತ್ತಿರುವ ‘ಭಜರಂಗಿ-2’ ಚಿತ್ರದ ಶೂಟಿಂಗ್ ನೆಲಮಂಗಲದ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದ್ದಾಗ ಜ. 16ರಂದು ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಇದರಲ್ಲಿ ಯಾರಿಗೂ ಗಾಯಗಳಾಗಿದ್ದರೂ ಸೆಟ್​ಗೆ ಹಾನಿ ಆಗಿದೆ. ಈ ಸಂದರ್ಭದಲ್ಲಿ ಶೇ. 80 ಚಿತ್ರೀಕರಣ ಪೂರ್ಣಗೊಂಡಿದ್ದರಿಂದ ಚಿತ್ರದ ಬಿಡುಗಡೆ ಬೇಸಿಗೆ ಬದಲು ಮುಂದಕ್ಕೆ ಹೋಗಿದೆ.

ಸದ್ಯ ಸೆಟ್ ಮರು ನಿರ್ಮಾಣ ಆಗುತ್ತಿರುವುದರಿಂದ ಶೂಟಿಂಗ್ ಸ್ಥಗಿತಗೊಂಡಿದ್ದು, ಫೆ. 15ರಿಂದ ಮತ್ತೆ ಶೂಟಿಂಗ್ ಆರಂಭವಾಗಲಿದೆ. ಸದ್ಯ 16 ದಿನಗಳ ಟಾಕೀ ಭಾಗದ ಚಿತ್ರೀಕರಣ ಬಾಕಿ ಇದೆ. ಅದಲ್ಲದೆ 4 ದಿನ ವಿದೇಶದಲ್ಲಿಯೂ ಶೂಟಿಂಗ್ ನಡೆಯಬೇಕಿದೆ. ಅದಕ್ಕಾಗಿ ಇನ್ನಷ್ಟೇ ದಿನ ನಿಗದಿ ಆಗಬೇಕಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಬೇಸಿಗೆಗೆ ಬಿಡುಗಡೆ ಆಗಬೇಕಿದ್ದ ಭಜರಂಗಿ-2 ಸ್ವಲ್ಪ ತಡವಾಗಿ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net