ಯೋಧನಾಗಲಿರುವ ಶಿವರಾಜಕುಮಾರ್ ... ಅಣ್ಣಾವ್ರ ಹುಟ್ಟುಹಬ್ಬದಂದು ಹೊಸ ಚಿತ್ರದ ಘೋಷಣೆ

Shivarajakumar New Film - Final
Published on

ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಮಿನಿಮಮ್ ಮೂರು ಚಿತ್ರಗಳು ಯಾರದ್ದಾದರೂ ಬಿಡುಗಡೆಯಾಗುತ್ತದೆ ಎಂದರೆ ಅದು ಶಿವರಾಜಕುಮಾರ್ ಅವರದ್ದು ಮಾತ್ರ. ಶಿವಣ್ಣ ಈಗಲೂ ಫುಲ್ ಜೋಶ್‌ನಲ್ಲಿ ಸಿನಿಮಾ ಮೇಲೆ ಸಿನಿಮಾ ಒಪ್ಪುತ್ತಿದ್ದಾರೆ ಮತ್ತು ವರ್ಷಕ್ಕೆ ಅವರ ಅಭಿನಯದ ಮೂರ‌್ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತವೆ.

ಈಗ್ಯಾಕೆ ಈ ವಿಷಯ ಎಂದರೆ, ಶಿವರಾಜಕುಮಾರ್ ಸದ್ದಿಲ್ಲದೆ ಹೊಸ ಚಿತ್ರವೊಂದು ಒಪ್ಪಿಕೊಂಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ನಾಳೆ ಏಪ್ರಿಲ್ 24ರಂದು ಅಣ್ಣಾವ್ರ ಹುಟ್ಟುಹಬ್ಬವಿರುವುದರಿಂದ, ಚಿತ್ರದ ಅಧಿಕೃತ ಘೋಷಣೆ ಮಾಡಲಾಗುತ್ತದೆ.

ಈ ಹಿಂದೆ ತೆಲುಗಿನಲ್ಲಿ ಕೆಲವು ಚಿತ್ರಗಳಿಗೆ ಕೆಲಸ ಮಾಡಿರುವ ರಾಮ್ ಧುಲಿಪುಡಿ, ಇದೇ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಯೋಧನ ಪಾತ್ರ ಮಾಡುತ್ತಿದ್ದು, ಭಾವನಾತ್ಮಕ ವಿಚಾರಗಳೊಂದಿಗೆ ಪ್ರೀತಿಯನ್ನು ಎತ್ತಿಹಿಡಿಯುವ ಕಥೆ ಈ ಚಿತ್ರದಲ್ಲಿದೆಯಂತೆ. ಈ ಚಿತ್ರಕ್ಕೆ ರಾಮ್ ಅವರ ಕಥೆ ಬರೆದಿದ್ದು, ಕಥೆ ಕೇಳುತ್ತಿದ್ದಂತೆ ತಕ್ಷಣವೇ ಒಪ್ಪಿದರಂತೆ ಶಿವರಾಜಕುಮಾರ್. ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಚಾರಗಳು ಹೊರಬೀಳುವ ಸಾಧ್ಯತೆಗಳಿವೆ.

ಈ ಚಿತ್ರಕ್ಕೆ ಶ್ರೀಚರಣ್ ಪಕಲ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದು, ರವಿಕುಮಾರ್ ಸನಾ ಛಾಯಾಗ್ರಹಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ನರಲ ಶ್ರೀನಿವಾಸ ರೆಡ್ಡಿ ಪ್ರೊಡ್ಯೂಸ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net