ಗಾಜನೂರಿನಲ್ಲಿ ಸವಿ ಸವಿ ನೆನಪು; ಕುಟುಂಬದೊಟ್ಟಿಗೆ ಶಿವಣ್ಣ-ಪುನೀತ್ ಭೇಟಿ..

SRK
Published on

ಬೆಂಗಳೂರು: ಗಾಜನೂರು ಎಂದಾಕ್ಷಣ ಮೊದಲಿಗೆ ನೆನಪಾಗುವುದು ಅಣ್ಣಾವ್ರು. ಅವರು ವಾಸವಿದ್ದ ಮನೆ, ಧ್ಯಾನಿಸುತ್ತಿದ್ದ ದೊಡ್ಡ ಆಲದ ಮರ.. ಹೀಗೆ ಅಲ್ಲಿ ಅವರ ನೂರಾರು ನೆನಪುಗಳಿವೆ. ಆಗಾಗ ಅವರ ಕುಟುಂಬದವರೂ ತೆರಳಿ ಒಂದಷ್ಟು ಕಾಲ ಕಳೆದು ಬರುತ್ತಾರೆ. ಅದೇ ರೀತಿ ಕಳೆದ ಎರಡು ದಿನಗಳ ಹಿಂದಷ್ಟೇ ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಕುಟುಂಬ ಸಮೇತ ಚಾಮರಾಜನಗರದ ಗಾಜನೂರಿಗೆ ಭೇಟಿ ನೀಡಿ ಹಳೇ ದಿನಗಳನ್ನು ಮತ್ತೆ ಮೆಲಕು ಹಾಕಿದ್ದಾರೆ.

ಯಾವಾಗ ಶಿವಣ್ಣ ಮತ್ತು ಪುನೀತ್ ಗಾಜನೂರಿಗೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿಯಿತೋ ಸಾಕಷ್ಟು ಜನ ಅವರನ್ನು ನೋಡಲು ಮನೆ ಬಳಿ ಆಗಮಿಸಿದ್ದರು. ಇನ್ನು ಕೆಲವರು ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಅಪ್ಪಾಜಿ ಧ್ಯಾನಿಸುತ್ತಿದ್ದ ಆಲದ ಮರದ ಕೆಳಗೆ ಕೆಲ ಹೊತ್ತು ವಿಶ್ರಾಂತಿ ಪಡೆದ ಶಿವರಾಜಕುಮಾರ್, ಬಳಿಕ ಅಂಗವಿಕಲ ಅಭಿಮಾನಿ ಜತೆ ಮಾತನಾಡಿ, ತಾವೂ ಸಹ ಮಂಡಿಯೂರಿ ಫೋಟೋ ತೆಗೆಸಿಕೊಂಡರು. ಇತ್ತ ಪುನೀತ್ ಸಹ ಅವರ ಸ್ನೇಹಿತರನ್ನು ಭೇಟಿಯಾಗಿ ಹಳೇ ದಿನಗಳನ್ನು ನೆನೆದರು. ಅಲ್ಲಿನ ಬಾಲ್ಯದ ಸ್ನೇಹಿತರ ಜತೆಗೆ ಸ್ವತಃ ಪುನೀತ್ ಸೆಲ್ಪಿ ತೆಗೆದುಕೊಂಡಿದ್ದಾರೆ.

ಸ್ಥಳೀಯ ಅಭಿಮಾನಿಗಳೊಂದಿಗೆ ಪುನೀತ್ ರಾಜಕುಮಾರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net