ಡಾ. ರಾಜ್ ಹುಟ್ಟುಹಬ್ಬ: ಸಿಹಿ ಹಂಚಿದ ಶಿವರಾಜಕುಮಾರ್

Dr Rajkumar Final 1
Published on

‘ಕನ್ನಡದ ಕಣ್ಮಣಿ’ ಡಾ. ರಾಜಕುಮಾರ್ ಅವರ 92ನೇ ಹುಟ್ಟುಹಬ್ಬ ಇಂದು. ಪ್ರತಿವರ್ಷ ಇದೇ ದಿನ ಇಡೀ ಕರ್ನಾಟಕದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಅಭಿಮಾನಿಗಳೆಲ್ಲಾ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಅವರ ಸ್ಮಾರಕಕ್ಕೆ ಭೇಟಿ ಕೊಡುತ್ತಾರೆ. ಆದರೆ, ಕರೋನಾ ಹಿನ್ನೆಲೆಯಲ್ಲಿ ಇಡೀ ದೇಶದಲ್ಲೇ ಲಾಕ್‌ಡೌನ್ ಘೋಷಿಸಿರುವುದರಿಂದ, ಈ ಬಾರಿ ರಾಜಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮ ಮಿಸ್ ಆಗಿದೆ.

ಈ ಮಧ್ಯೆ, ಶಿವರಾಜಕುಮಾರ್ ಇಂದು ಬೆಳಿಗ್ಗೆಯೇ ಸ್ಮಾರಕಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ಮಾರಕವನ್ನು ಅಲಂಕರಿಸುವುದರ ಜತೆಗೆ, ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಅಭಿಮಾನಿಗಳಿಗೆ ಸಿಹಿ ಹಂಚಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಗೀತಾ ಶಿವರಾಜಕುಮಾರ್, ಚೆನ್ನ ಸೇರಿದಂತೆ ಕೆಲವು ಮಂದಿಯಷ್ಟೇ ಹಾಜರಿದ್ದರು.

ಈ ಬಾರಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆಲ್ಲಾ ಮನೆಯಲ್ಲೇ ಇದ್ದು ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಎಂದು ಗುರುವಾರವೇ ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಮನವಿ ಮಾಡಿಕೊಂಡಿದ್ದರು. ಅದರಂತೆ, ಡಾ. ರಾಜಕುಮಾರ್ ಸ್ಮಾರಕದ ಬಳಿ ಇಂದು ಹೆಚ್ಚು ಜನರಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net