ಶಿವಣ್ಣ ಮತ್ತು ದರ್ಶನ್ ಪಾಲಿಗೆ ಇಂದು ಮರೆಯಲಾಗದ ದಿನ!

Anniversary Final
Published on

ಕನ್ನಡದ ಜನಪ್ರಿಯ ಸ್ಟಾರ್‌ಗಳಾದ ಶಿವರಾಜಕುಮಾರ್ ಮತ್ತು ದರ್ಶನ್ ಅವರಿಗೆ ಇಂದು ಮರೆಯಲಾಗದ ದಿನ. ಈ ಇಬ್ಬರೂ ಸ್ಟಾರ್ ನಟರು, ಹಲವು ವರ್ಷಗಳ ಹಿಂದೆ ಇದೇ ದಿನ ಮದುವೆಯಾಗಿದ್ದು, ಇಂದು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

1986ರ ಮೇ 19ರಂದು ಶಿವರಾಜಕುಮಾರ್ ಮತ್ತು ಗೀತಾ ಅವರ ಮದುವೆಯಾಗಿತ್ತು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಮಗಳಾದ ಗೀತಾ ಮತ್ತು ಶಿವರಾಜಕುಮಾರ್ ಅವರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಾಗಿತ್ತು. ಈ ಮದುವೆಗೆ ದಕ್ಷಿಣ ಭಾರತದ ಜನಪ್ರಿಯ ನಟರಾದ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವರು ಆಗಮಿಸಿದ್ದರು. ಇನ್ನು ಡಾ. ರಾಜಕುಮಾರ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಇವರೆಲ್ಲರ ಸಮ್ಮುಖದಲ್ಲಿ ಶಿವರಾಜಕುಮಾರ್ ಅವರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಮದುವೆಯಾಗಿ ಇಂದಿಗೆ 34 ವಸಂತಗಳನ್ನು ಶಿವರಾಜಕುಮಾರ್ ಮತ್ತು ಗೀತಾ ಪೂರೈಸಿದ್ದಾರೆ.

ಇನ್ನು ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ಮದುವೆ ಬಹಳ ಸರಳ ರೀತಿಯಲ್ಲಿ 2003ರಲ್ಲಿ ನೆರವೇರಿತ್ತು. ಈ ಮದುವೆ ಧರ್ಮಸ್ಥಳದಲ್ಲಿ ನಡೆದಿತ್ತು, ಎರಡೂ ಕುಟುಂಬದವರು ಮತ್ತು ದರ್ಶನ್ ಅವರ ಹಿತೈಷಿಗಳು ಮಾತ್ರ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ವೈವಾಹಿಕ ಜೀವನದಲ್ಲಿ ಸಾಕಷ್ಟು ಕಷ್ಟ-ಸುಖ ಕಂಡಿರುವ ದರ್ಶನ್ ಮತ್ತು ವಿಜಯಲಕ್ಷ್ಮೀ ಅವರು ಇಂದಿಗೆ ಮದುವೆಯಾಗಿ 17 ವರ್ಷಗಳನ್ನು ಮುಗಿಸಿ, 18ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net