ಭೂತದಿಂದ ಭವಿಷ್ಯದವರೆಗೂ ಶಿವಾಜಿಯ ಸಾಹಸಗಳು

shivaji suratkal 6 mar 20
Published on

ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಮೂರನೆಯ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಚಿತ್ರವು ಭಾರತದಲ್ಲಷ್ಟೇ ಅಲ್ಲ, ಆಸ್ಟ್ರೇಲಿಯಾದಲ್ಲೂ ಬಿಡುಗಡೆಯಾಗಿದೆ.

ಇನ್ನು ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಮಾರ್ಚ್ 8 ಮತ್ತು 12ರಂದು ಕ್ರಮವಾಗಿ ಬಿಡುಗಡೆಯಾಗಲಿದೆ. ಈ ಮಧ್ಯೆ ಚಿತ್ರದ ಇನ್ನೊಂದು ಭಾಗದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಮುಂಚೆಯೇ ಚಿತ್ರತಂಡಕ್ಕೆ, ‘ಶಿವಾಜಿ ಸುರತ್ಕಲ್’ನ ಸಾಹಸವನ್ನು ಮುಂದುವರೆಸುವ ಯೋಚನೆ ಇತ್ತಂತೆ. ಈಗ ಚಿತ್ರ ನೋಡಿದವರೆಲ್ಲ, ಶಿವಾಜಿಯ ಚಾಕಚಕ್ಯತೆಗೆ ಮರುಳಾಗಿ ಮುಂದುವರೆದ ಭಾಗಗಳಿಗೆ ಬೇಡಿಕೆ ಇಟ್ಟಿರುವುದರಿಂದ, ಸದ್ಯದಲ್ಲೇ ಆ ಬಗ್ಗೆ ಚಿತ್ರತಂಡ ತೀರ್ಮಾನ ತೆಗೆದುಕೊಳ್ಳಲಿದೆ.

ಈ ಕುರಿತು ಮಾತನಾಡುವ ನಿರ್ದೇಶಕ ಆಕಾಶ್ ಶ್ರೀವತ್ಸ, ‘ನಾವು ‘ಶಿವಾಜಿ ಸುರತ್ಕಲ್’ ಮಾಡುವಾಗಲೇ ಚಿತ್ರದ ಮುಂದುವರೆದ ಭಾಗದ ಬಗ್ಗೆ ಯೋಚಿಸಿದ್ದೆವು. ಅಷ್ಟೇ ಅಲ್ಲ, ಈಗಾಗಲೇ ಒನ್​ಲೈನ್ ಸಹ ಇದೆ. ಹಿಂದಿಯಲ್ಲಿ ‘ಧೂಮ್, ‘ಗೋಲ್ಮಾಲ್’ ಸೀರೀಸ್​ನ ಹಲವು ಸಿನಿಮಾಗಳು ಬಂದಿವೆ. ‘ಶಿವಾಜಿ ಸುರತ್ಕಲ್’ ಹೆಸರಿನಲ್ಲೂ ಒಂದು ಫ್ರಾಂಚೈಸ್ ಮಾಡಬಹುದು. ಸದ್ಯಕ್ಕೆ ನಾವು ಒಂದು ಕಥೆ ಮಾತ್ರ ಹೇಳಿದ್ದೇವೆ. ಶಿವಾಜಿಯ ಸಾಹಸಗಳು ಒಂದು ಸಿನಿಮಾಗೆ ಮುಗಿಯುವಂತಹದಲ್ಲ. ಆತನ ಹಿನ್ನೆಲೆ ಏನು, ಈ ಹಿಂದೆ ಆತ ಬಗೆಹರಿಸಿರುವ ಕೇಸ್​ಗಳು, ಮುಂದೆ ಸವಾಲಾಗುವ ಕೇಸ್​ಗಳು... ಇವನ್ನೆಲ್ಲ ನಾವು ಬೇರೆಬೇರೆ ಭಾಗಗಳ ಮೂಲಕ ಹೇಳಬಹುದು. ಒಟ್ಟಾರೆ ಶಿವಾಜಿಯ ಭೂತ, ವರ್ತಮಾನ ಮತ್ತು ಭವಿಷ್ಯವನ್ನಿಟ್ಟುಕೊಂಡು ಇನ್ನಷ್ಟು ಚಿತ್ರಗಳನ್ನು ಮಾಡಬಹುದು’ ಎನ್ನುತ್ತಾರೆ ಅವರು.

ಈ ಚಿತ್ರವನ್ನೇ ಮೊದಲು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ನಿರ್ವಿುಸುವ ಯೋಚನೆ ಚಿತ್ರತಂಡಕ್ಕಿತ್ತಂತೆ. ‘ಮೊದಲು ಎರಡು ಭಾಷೆಗಳಲ್ಲಿ ಚಿತ್ರ ಮಾಡುವ ಯೋಚನೆ ಇತ್ತು. ಕಾರಣಾಂತರಗಳಿಂದ ಕನ್ನಡದಲ್ಲಿ ಮಾತ್ರ ನಿರ್ವಣವಾಗಿದ್ದು, ತಮಿಳಿಗೆ ಡಬ್ ಆಗುವ ಸಾಧ್ಯತೆ ಗಳಿವೆ. ಜತೆಗೆ ಹಿಂದಿ ಮತ್ತು ತೆಲುಗಿನಿಂದ ರೀಮೇಕ್ ಹಕ್ಕುಗಳಿಗೆ ಬೇಡಿಕೆ ಬಂದಿದೆ. ಬಾಲಿವುಡ್​ನ ಇರೋಸ್ ಇಂಟರ್​ನ್ಯಾಷನಲ್ ಮತ್ತು ತೆಲುಗಿನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಚಿತ್ರವನ್ನು ರೀಮೇಕ್ ಮಾಡುವುದಕ್ಕೆ ಮುಂದೆ ಬಂದಿವೆ. ಸದ್ಯದಲ್ಲೇ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವು ದು’ ಎನ್ನುತ್ತಾರೆ ಆಕಾಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net