

ಬೆಂಗಳೂರು: ‘ಬಿಗ್ಬಾಸ್’ ಮನೆಯಲ್ಲಿ ಈ ಸಲ ‘24X7’ ಸಂಭ್ರಮದ ಶೈನ್. ಏಕೆಂದರೆ ಅಲ್ಲಿದ್ದಿದ್ದು ಒಂದೇ ಖುಷಿ ಅಲ್ಲ. ಒಂದೆಡೆ ‘ಬಿಗ್ಬಾಸ್ ಸೀಸನ್ 7’ರ ವಿಜೇತರ ಹಾಗೂ ಸ್ಪರ್ಧಿಗಳ ಸಂಭ್ರಮವಾದರೆ ಮತ್ತೊಂದೆಡೆ ಅವರ ನಡುವೆ ಬಿಗ್ಬಾಸ್ ನಿರೂಪಕ ಕಿಚ್ಚ ಸುದೀಪ್ಗೂ ಸಂತೋಷದ ಸಂದರ್ಭ. ಸುದೀಪ್ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ 24 ವಸಂತಗಳು ಪೂರ್ಣಗೊಂಡು 25ನೇ ವರ್ಷದ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದ ಖುಷಿಯನ್ನೂ ಬಿಗ್ಬಾಸ್ ವಿಜೇತರು ಹಾಗೂ ಸ್ಪರ್ಧಿಗಳು ಅವರಿಗೆ ಶುಭಾಶಯ ಕೋರುವ ಮೂಲಕ ಸಂಭ್ರಮಿಸಿದರು. ಅತ್ತ ಸುದೀಪ್ ವಿಜೇತರು ಮತ್ತು ಸ್ಪರ್ಧಿಗಳಿಗೆ ಹಾರೈಸಿ ಶುಭ ಕೋರಿದರೆ, ಇತ್ತ ವಿಜೇತರು ಮತ್ತು ಸ್ಪರ್ಧಿಗಳೂ ಸುದೀಪ್ ಅವರಿಗೆ ತಾವೇ ಸಂಯೋಜಿಸಿದ ವಿಶೇಷವಾದ ನೃತ್ಯದ ಮೂಲಕ ಶುಭಾಶಯಗಳನ್ನು ಅರ್ಪಿಸಿದರು. ಬಿಗ್ಬಾಸ್ ಮನೆಯಲ್ಲಿ ವಿಜೇತರು ಸೇರಿ ಸ್ಪರ್ಧಿಗಳೆಲ್ಲ ದಿನದ 24 ಗಂಟೆ ಶ್ರಮಿಸಿದ್ದರೆ, ಸುದೀಪ್ ಕೂಡ ತಮ್ಮ ವೃತ್ತಿಜೀವನದಲ್ಲಿ ಹಗಲಿರುಳೆನ್ನದೆ ಶ್ರಮವಹಿಸಿದ್ದಾರೆ. ಮತ್ತೊಂದೆಡೆ ಈ ವೇದಿಕೆ ಸುದೀಪ್ ಚಿತ್ರರಂಗದಲ್ಲಿ ‘24’ ವರ್ಷಗಳನ್ನು ಪೂರೈಸಿದ, ಇನ್ನೊಂದೆಡೆ ಸೀಸನ್ ‘7’ ಸಮಾರೋಪ ಆದ ಎರಡೂ ಸಂತೋಷ ಸೇರಿ ‘24X7’ ಸಂಭ್ರಮದ ಹೊಳಪು ಹೊಮ್ಮಲು ಕಾರಣವಾಯಿತು.
ನಿಮ್ಮ ಸಂಭ್ರಮವೇ ಮುಖ್ಯ: ‘ಬರೀ ಥ್ಯಾಂಕ್ಸ್ ಹೇಳಿದರೆ ತುಂಬ ಕಡಿಮೆ ಎನಿಸುತ್ತದೆ..’ ಎನ್ನುತ್ತ ತಮ್ಮ 24 ವರ್ಷಗಳ ಸಿನಿಪ್ರಯಾಣದ ಹಿನ್ನೆಲೆಯಲ್ಲಿ ಬಿಗ್ಬಾಸ್ ಸ್ಪರ್ಧಿಗಳೆಲ್ಲ ಸೇರಿ ವಿಶೇಷವಾದ ನೃತ್ಯದ ಮೂಲಕ ಅಭಿನಂದನೆ ಸಲ್ಲಿಸಿ ಸಂತೋಷ ಹಂಚಿಕೊಂಡಿದ್ದಕ್ಕೆ ಸುದೀಪ್ ಸಂತೋಷದಿಂದ ಪ್ರತಿಕ್ರಿಯಿಸಿದರು. ‘ನಾವು ಚಿತ್ರರಂಗದಲ್ಲಿ ಎಷ್ಟು ವರ್ಷಗಳಿಂದ ಇದ್ದೇವೆ ಎನ್ನುವುದು ಮುಖ್ಯವಲ್ಲ. ನಾವು ಇದ್ದಿದ್ದನ್ನು ನೀವೆಲ್ಲ ಸಂಭ್ರಮಿಸುತ್ತಿರುವುದೇ ಅತ್ಯಂತ ಸಂತಸದ ಸಂಗತಿ. ನನ್ನ 24 ವರ್ಷಗಳ ಪ್ರಯಾಣ ಕೊಟ್ಟಷ್ಟೇ ಖುಷಿಯನ್ನು ನಿಮ್ಮ ಅಭಿನಂದನೆಯ ಈ ನೃತ್ಯ ಕೂಡ ನೀಡಿದೆ’ ಎಂದು ಧನ್ಯವಾದಗಳನ್ನು ತಿಳಿಸಿದರು ಸುದೀಪ್. ಸಾಮಾನ್ಯವಾಗಿ ಬಿಗ್ಬಾಸ್ ಮನೆಯಲ್ಲಿ ನಡೆಯುವ ಪ್ರತಿಯೊಂದೂ ನನಗೆ ತಿಳಿಯುತ್ತದೆ. ಆದರೆ ನೀವು ಗುಟ್ಟಾಗಿ ಆಯೋಜಿಸಿ ಮಾಡಿದ ಈ ನೃತ್ಯದ ಬಗ್ಗೆ ತಿಳಿಯಲೇ ಇಲ್ಲ. ಇದಕ್ಕೆಲ್ಲ ನೀವು ಮೂವರು (ಶೈನ್, ಕುರಿ ಪ್ರತಾಪ್, ವಾಸುಕೀ) ಕಾರಣ ಅಂತ ಗೊತ್ತು. ಹಾಗಂತ ಎಲಿಮಿನೇಷನ್ ತಪು್ಪವುದಿಲ್ಲ ಎಂದು ತಮಾಷೆಯಾಗಿಯೇ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶೈನ್ಗೆ ಗೆಲುವಿನ ಸ್ಪೂರ್ತಿ: ‘ಬಿಗ್ಬಾಸ್ ಕನ್ನಡ ಸೀಸನ್7’ರ ವಿಜೇತ ಶೈನ್ ಶೆಟ್ಟಿ ಮೂಲತಃ ಕುಂದಾಪುರದವರು. ಚಿತ್ರರಂಗದ ಸೆಳೆತದಿಂದ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಇವರು ‘ಲಕ್ಷೀ ಬಾರಮ್ಮ’, ‘ಮೀರಾ ಮಾಧವ’ ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಮಹದಾಸೆ ಹೊಂದಿರುವ ಇವರಿಗೆ ಅದೃಷ್ಟ ಸಹಕರಿಸದ್ದರಿಂದ ಅನಿವಾರ್ಯವಾಗಿ ಹೊಟೇಲ್ ಉದ್ಯಮದತ್ತ ಹೊರಳಬೇಕಾಯಿತು. ‘ಗಲ್ಲಿ ಕಿಚನ್’ ಎಂಬ ಫುಡ್ ಟ್ರಕ್ ಆರಂಭಿಸಿ ಜೀವನ ಸಾಗಿಸುತ್ತಿರುವಾಗ ಇವರಿಗೆ ‘ಬಿಗ್ಬಾಸ್’ ಸ್ಪರ್ಧಿ ಆಗುವ ಅವಕಾಶ ಒದಗಿ ಬಂತು. ಆಗಿದ್ದಾಗಲಿ ಎಂದು ಬಿಗ್ಬಾಸ್ ಮನೆಗೆ ಪ್ರವೇಶಿಸಿದ ಶೈನ್ ಈಗ ವಿನ್ನರ್ ಆಗಿ ಹೊರಹೊಮ್ಮಿ ಶೈನ್ ಆಗಿದ್ದಾರೆ.
ಲಕ್ಷ ಲಕ್ಷ ರೂ. ಬಹುಮಾನ: ಗ್ರ್ಯಾಂಡ್ ಫಿನಾಲೆಯ ವಿಜೇತರಾಗಿ ಹೊರಹೊಮ್ಮಿರುವ ಶೈನ್ ಶೆಟ್ಟಿಗೆ ಬಿಗ್ಬಾಸ್ ವಿನ್ನರ್ ಟ್ರೋಫಿ ಜತೆಗೆ ಬಹುಮಾನದ 50 ಲಕ್ಷ ರೂ. ಚೆಕ್, ಕಾರ್ಯಕ್ರಮದ ಪ್ರಾಯೋಜಕರು ನೀಡಿದ 11 ಲಕ್ಷ ರೂ. ಹಾಗೂ ಟಾಟಾ ಮೋಟರ್ಸ್ನಿಂದ ಹೊಚ್ಚ ಹೊಸ ಟಾಟಾ ಅಲ್ಟ್ರೋಜ್ ಕಾರು ಬಹುಮಾನವಾಗಿ ಸಿಕ್ಕಿದೆ. ರನ್ನರ್ ಅಪ್ ಆಗಿರುವ ಹಾಸ್ಯನಟ ಕುರಿ ಪ್ರತಾಪ್ಗೆ 5 ಲಕ್ಷ ರೂ. ಬಹುಮಾನ ಲಭಿಸಿದೆ. ಗ್ರ್ಯಾಂಡ್ ಫಿನಾಲೆಗೆ ಆಯ್ಕೆ ಆಗಿದ್ದಕ್ಕಾಗಿ ಶೈನ್ ಶೆಟ್ಟಿ, ಕುರಿ ಪ್ರತಾಪ್, ವಾಸುಕೀ ವೈಭವ್, ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ತಲಾ 1 ಲಕ್ಷ ರೂ. ಬಹುಮಾನವಾಗಿ ಪಡೆದರು. ದೀಪಿಕಾ ದಾಸ್ ನೃತ್ಯ ಸ್ಪರ್ಧೆಯ ವಿಜೇತರಾಗಿರುವುದರಿಂದ ಇಂಡಿಯಾ ಗೇಟ್ ಅವರು ನೀಡಿದ 5 ಲಕ್ಷ ರೂ. ವಿಶೇಷ ಬಹುಮಾನ ಪಡೆದರು. ವಿನ್ನರ್ಗೆ ನೀಡುವ 10 ಲಕ್ಷ ರೂ. ಮತ್ತು ಮೊದಲ ರನ್ನರ್ ಅಪ್ಗೆ ನೀಡುವ 5 ಲಕ್ಷ ರೂ. 7 ಅಪ್ ಸಂಸ್ಥೆ ಕೊಟ್ಟಿದೆ. ವಿನ್ನರ್ ಮತ್ತು ಮೊದಲ ರನ್ನರ್ ಅಪ್ಗೆ ನೀಡುವ ತಲಾ 1 ಲಕ್ಷ ರೂ. ಇಂಡಸ್ 555 ಟಿಎಂಟಿ ಸಂಸ್ಥೆ ನೀಡಿದೆ. ಉಳಿದ ಮೂವರಿಗೆ ನೀಡುವ ತಲಾ 1 ಲಕ್ಷ ರೂ. ಬಹುಮಾನವನ್ನು ಅಯ್ಯಂಗಾರ್ ಪುಳಿಯೋಗರೆ ಮಸಾಲಾ, ಸುಪ್ರೀಂ ಸೋಲಾರ್ ಪ್ರಾಡಕ್ಟ್ಸ್ ಮತ್ತು ಮಲ್ಲೇಶ್ವರದ ಸುದರ್ಶನ್ ಸಿಲ್ಕ್ಸ್ರವರು ನೀಡಿದ್ದಾರೆ.
ಶೈನ್ ವಿನ್ನರ್ ಪ್ರತಾಪ್ ವಾಸುಕಿ ರನ್ನರ್ಸ್: ನೂರ ಹದಿಮೂರು ದಿನಗಳ ಕಾಲ ಪ್ರೇಕ್ಷಕರ ಕುತೂಹಲ ಉಳಿಸಿಕೊಂಡೇ ಬಂದಿದ್ದ ‘ಬಿಗ್ಬಾಸ್ ಕನ್ನಡ ಸೀಸನ್ 7’ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರಾಗಿ ನಟ ಶೈನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಅವರಿಗೆ ಪ್ರಬಲ ಸ್ಪಧಿಯಾಗಿದ್ದವರ ಪೈಕಿ ಕುರಿ ಪ್ರತಾಪ್ ಮೊದಲನೇ ಹಾಗೂ ವಾಸುಕೀ ವೈಭವ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಗ್ರ್ಯಾಂಡ್ ಫಿನಾಲೆಯ ವಿಜೇತರಾಗುವ ಮೂಲಕ ಶೈನ್ ಶೆಟ್ಟಿ ಬಹುಮಾನದ 50 ಲಕ್ಷ ರೂ. ಸೇರಿ ಒಟ್ಟು 61 ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ,