ಹೆಣ್ಣು ಮಗುವಿನ ತಾಯಿಯಾದ ಶಿಲ್ಪಾ ಶೆಟ್ಟಿ

shilpa sheet
Published on

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ದಂಪತಿ ಮಡಿಲಿಗೆ ಹೆಣ್ಣು ಮಗುವಿನ ಆಗಮನವಾಗಿದೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಂಡಿದ್ದು, ಆ ಖುಷಿಯ ವಿಚಾರವನ್ನು ಶಿವರಾತ್ರಿಯ ಶುಭ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ.

‘ನಮ್ಮ ಪ್ರಾರ್ಥನೆಗೆ ಅಚ್ಚರಿ ರೀತಿಯ ಫಲ ಸಿಕ್ಕಿದೆ. ಮನೆಗೆ ಮುದ್ದು ದೇವತೆ ಸಮಿಶಾ ಶೆಟ್ಟಿ ಕುಂದ್ರಾ ಆಗಮನವಾಗಿರುವ ವಿಷಯವನ್ನು ನಿಮ್ಮೆಲ್ಲರ ಜತೆಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಫೆ.15, 2020ಕ್ಕೆ ಜೂನಿಯರ್ ಶಿಲ್ಪಾ ಶೆಟ್ಟಿ ನಮ್ಮ ಮನೆಗೆ ಬಂದಿದ್ದಾಳೆ’ ಎಂದಿರುವ ಶಿಲ್ಪಾ, ಸಮಿಶಾ ಹೆಸರಿನ ಅರ್ಥವನ್ನೂ ತಿಳಿಸಿದ್ದಾರೆ. ‘ಸಂಸ್ಕೃತಿಯಲ್ಲಿ ‘ಸ’ ಎಂದರೆ ಪಡೆದುಕೊಳ್ಳುವುದು ಎಂದರ್ಥ. ರಷ್ಯನ್ ಭಾಷೆಯಲ್ಲಿ ‘ಮಿಶಾ’ ಎಂದರೆ ದೇವರ ರೂಪ. ಲಕ್ಷ್ಮೀಯ ಅವತಾರ’ ಎಂದು ಹೆಸರಿನ ಹಿನ್ನೆಲೆಯನ್ನು ಬಿಚ್ಚಿಟ್ಟಿದ್ದಾರೆ. 2009ರಲ್ಲಿ ವಿವಾಹವಾಗಿದ್ದ ಈ ಜೋಡಿಗೆ ವಿಯಾನ್ ಹೆಸರಿನ 8 ವರ್ಷದ ಪುತ್ರನಿದ್ದಾನೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net