ದಾನ ಕೊಟ್ಟಿದ್ದನ್ನು ಹೇಳಿಕೊಳ್ಳಬಾರದು ... ಪಿಎಂ ಕೇರ್ಸ್‌ಗೆ 25 ಕೋಟಿ ಕೊಟ್ಟ ಅಕ್ಷಯ್‌ಗೆ ಕಾಲೆಳೆದ ಶತ್ರುಘ್ನ ಸಿನ್ಹಾ

Shatrughan Sinha Final
Published on

ಬಲಗೈಯಲ್ಲಿ ದಾನ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ಮಾತಿದೆ. ಆದರೆ, ಇವತ್ತಿನ ಸಂದರ್ಭದಲ್ಲಿ ದಾನ, ದೇಣಿಗೆ ಕೊಟ್ಟಿದ್ದು ದೊಡ್ಡ ದೊಡ್ಡ ಸುದ್ದಿಗಳಾಗುತ್ತಿವೆ. ಈಗ್ಯಾಕೆ ಈ ವಿಷಯ ಎಂದರೆ, ಹೀಗೆ ದಾನ ಕೊಟ್ಟು ಸುದ್ದಿಯಾಗುತ್ತಿರುವವರಿಗೆ ಹಿರಿಯ ನಟ ಶತ್ರುಘ್ನ ಸಿನ್ಹಾ ಟಾಂಗ್ ಕೊಟ್ಟಿದ್ದಾರೆ.

ಈ ವಿಷಯದಲ್ಲಿ ಶತ್ರುಘ್ನ ಸಿನ್ಹಾ ಯಾರನ್ನೂ ಪಿನ್‌ಪಾಯಿಂಟ್ ಮಾಡದಿದ್ದರೂ, ಅವರು ಟಾಂಗ್ ಕೊಟ್ಟಿದ್ದು ಅಕ್ಷಯ್ ಕುಮಾರ್‌ಗೆ ಎಂದು ಅವರ ಮಾತು ಕೇಳಿದ ಯಾರು ಬೇಕಾದರೂ ಊಹಿಸಬಹುದು. ಅದಕ್ಕೆ ಸರಿಯಾಗಿ, ಅಕ್ಷಯ್ ಕುಮಾರ್ ಇತ್ತೀಚೆಗೆ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಪಿಎಂ ಕೇರ್ಸ್‌ಗೆ 25 ಕೋಟಿ ದೇಣಿಗೆ ನೀಡಿದ್ದರು.

ಈ ಕುರಿತು ಮಾತನಾಡಿರುವ ಶತ್ರುಘ್ನ ಸಿನ್ಹಾ, ‘ದಾನ ಕೊಟ್ಟಿದ್ದು ಯಾರಿಗೂ ಹೇಳಬಾರದು ಎಂಬ ಮಾತಿದೆ. ಇಲ್ಲಿ ಹಣಕ್ಕಿಂತ ಕಾಳಜಿ ಬಹಳ ಮುಖ್ಯ. ದಾನ ಮಾಡುವುದು ಖಾಸಗಿ ವಿಷಯವಾಗಿರಬೇಕೇ ಹೊರತು, ಅದೊಂದು ಸಾರ್ವಜನಿಕ ವಿಷಯವಾಗಬಾರದು. ಅದನ್ನು ಎಲ್ಲಾ ಕಡೆ ಹೇಳಿಕೊಂಡು ಓಡಾಡಬಾರದು. ಚಿತ್ರರಂಗಕ್ಕೆ ಜನ ಶೋ ಬಿಝ್ ಎಂದು ಕರೆಯುತ್ತಾರೆ. ಅದು ಶೋ-ಆ್ ಬಿಝ್ ಆಗಬಾರದು. ಜನ 25 ಕೋಟಿ ದಾನ ಮಾಡಿದ ಮೇಲೆ, ನಾವು ಕೊಡುವ ದುಡ್ಡು ಉಪಯೋಗಕ್ಕೆ ಬರುತ್ತದಾ ಎಂಬ ಪ್ರಶ್ನೆ ಬರುತ್ತದೆ’ ಎಂದು ಅಕ್ಷಯ್ ಕುಮಾರ್ ಹೆಸರೇಳದೆ ಅವರ ಕಾಲಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net