ಕಾಲೆಳೆಯುತ್ತಿರುವವರೇ ಖಾಮೋಶ್ ... ಸೋನಾಕ್ಷಿ ಪರ ಬ್ಯಾಟಿಂಗ್ ಮಾಡಿದ ಶತ್ರುಘ್ನ ಸಿನ್ಹಾ

Shatrugan Sinha Final
Published on

ಹಿರಿಯ ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಭಯಂಕ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ, ಕೆಲವರು ಅವರ ಮಗಳ ಸೋನಾಕ್ಷಿ ಕಾಲೆಳೆಯುತ್ತಿರುವುದು. ಅಷ್ಟೇ ಅಲ್ಲ, ಆಕೆ ದಡ್ಡಿ ಎಂದು ಎಲ್ಲೆಡೆ ಬಿಂಬಿಸುತ್ತಿರುವುದನ್ನು ನೋಡಿದ ಶತ್ರುಘ್ನ ಸಿನ್ಹಾ, ತಮ್ಮ ಟಿಪಿಕಲ್ ಸ್ಟೈಲ್‌ನಲ್ಲಿ ಖಾಮೋಶ್ ಎಂದು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.

ಇಷ್ಟಕ್ಕೂ ಆಗಿದ್ದೇನೆಂದರೆ, ಅದಕ್ಕೊಂದು ್ಲಾಶ್‌ಬ್ಯಾಕ್‌ಗೆ ಹೋಗಬೇಕು. ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಸೋನಾಕ್ಷಿ ಸಿನ್ಹಾ ಒಮ್ಮೆ ಹಾಟ್‌ಸೀಟ್‌ನಲ್ಲಿ ಕುಳಿತಿದ್ದರು. ಆ ಸಂದರ್ಭದಲ್ಲಿ ಅವರಿಗೊಂದು ಪ್ರಶ್ನೆ ಕೇಳಲಾಯಿತು. ಹನುಮಂತ ಸಂಜೀವಿನಿ ಪರ್ವತವನ್ನು ತಂದಿದ್ದು ಯಾರ ಚಿಕಿತ್ಸೆಗಾಗಿ ಎಂಬುದು ಆ ಪ್ರಶ್ನೆ. ಉತ್ತರ ಗೊತ್ತಿಲ್ಲದ ಸೋನಾಕ್ಷಿ, ಲ್ೈಲೈನ್ ಬಳಸಿಕೊಂಡರು. ಅಷ್ಟೇ ಅಲ್ಲ, ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಇದು ಹಳೆಯ ಕಥೆ.

ಹೊಸ ಕಥೆ ಏನೆಂದರೆ, ಇತ್ತೀಚೆಗೆ ದೂರದರ್ಶನದಲ್ಲಿ ‘ರಾಮಾಯಣ’ ಮತ್ತು ‘ಮಹಾಭಾರತ’ ಧಾರಾವಾಹಿಗಳು ಪ್ರಸಾರವಾಗುತ್ತಿರುವ ಕುರಿತು ಹಿರಿಯ ನಟ ಮತ್ತು ‘ಮಹಾಭಾರತ’ದಲ್ಲಿ ಭೀಷ್ಮನಾಗಿ ಅಭಿನಯಿಸಿದ್ದ ಮುಖೇಶ್ ಖನ್ನಾ ಖುಷಿ ವ್ಯಕ್ತಪಡಿಸಿದ್ದರು. ಹಾಗೆಯೇ, ನಮ್ಮ ಪುರಾಣದ ಬಗ್ಗೆ ಗೊತ್ತಿಲ್ಲದಿರುವವರು, ಧಾರಾವಾಹಿ ನೋಡಿ ತಿಳಿದುಕೊಳ್ಳಬಹುದು ಎಂದು ಸೋನಾಕ್ಷಿ ಹೆಸರು ಹೇಳದೆಯೇ ಕಾಲೆಳೆದಿದ್ದರು. ಇದು ಮತ್ತಷ್ಟು ಟ್ರೋಲ್ ಆಗಿತ್ತು. ಮುಖೇಶ್ ಖನ್ನಾ ಮಾತಾಡಿದ್ದು, ಸೋನಾಕ್ಷಿಯನ್ನು ಗಮನದಲ್ಲಿಟ್ಟುಕೊಂಡು ಎಂದು ಮತ್ತೊಮ್ಮೆ ಸುದ್ದಿಯಾಯಿತು.

ಇದರಿಂದ ಶತ್ರುಘ್ನ ಸಿನ್ಹಾ ಸಿಟ್ಟಾಗಿದ್ದಾರೆ. ಕಾಲೆಳೆಯುತ್ತಿರುವವರಿಗೆ ತಮ್ಮದೇ ಶೈಲಿಯಲ್ಲಿ ಬಾಯಿ ಮುಚ್ಚಿಸಿದ್ದಾರೆ. ಮುಖೇಶ್ ಖನ್ನಾ ಹೆಸರನ್ನು ಪ್ರಸ್ಥಾಪಿಸದೆಯೇ, ಅವರೇನು ರಾಮಾಯಣದ ಬಗ್ಗೆ ತಜ್ಞರಾ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಹಿಂದು ಧರ್ಮದ ರಕ್ಷಕ ಎಂದು ಯಾರಾದರೂ ಜವಾಬ್ದಾರಿ ಕೊಟ್ಟಿದ್ದಾರಾ ಅಂತಲೂ ಪ್ರಶ್ನಿಸಿದ್ದಾರೆ.

‘ರಾಮಾಯಣದ ಕುರಿತಾಗಿ ಒಂದು ಪ್ರಶ್ನೆಗೆ ಸೋನಾಕ್ಷಿ ಉತ್ತರಿಸಲಿಲ್ಲ ಎಂದ ಮಾತ್ರಕ್ಕೆ ಆಕೆಗೆ ಏನೂ ಗೊತ್ತಿಲ್ಲ ಅಥವಾ ಆಕೆ ಒಳ್ಳೆಯ ಹಿಂದೂ ಅಲ್ಲ ಎನ್ನುವುದು ತಪ್ಪು. ಆಕೆಗೆ ಸರ್ಟಿಫಿಕೇಟ್‌ನ ಅವಶ್ಯಕತೆ ಇಲ್ಲ. ಆಕೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಸ್ವಸಾಮರ್ಥ್ಯದಿಂದ, ಸೋನಾಕ್ಷಿ ಇಷ್ಟು ಬೆಳೆದಿದ್ದಾಳೆ’ ಎಂದು ತಮ್ಮ ಮಗಳ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ ಶತ್ರುಘ್ನ ಸಿನ್ಹಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net