

ಇತ್ತೀಚೆಗಷ್ಟೇ ಪರಿಹಾರ ನಿಧಿಯ ಪ್ರಣಾಳಿಕೆಯನ್ನೇ ಬಿಡುಗಡೆ ಮಾಡಿ ಕರೊನಾ ವಿರುದ್ಧ ತೊಡೆ ತಟ್ಟಿದ್ದ ಬಾಲಿವುಡ್ ಬಾದ್ಶಾ ಶಾರುಖ್ ಖಾನ್, ಈಗ ಮತ್ತೆ ಕರೊನಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅಂದರೆ, ಕರೊನಾ ಕ್ವಾರಂಟೈನ್ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ತಮ್ಮ ನಾಲ್ಕು ಮಹಡಿಯ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆಗೆ ನೀಡುವುದಾಗಿ ಹೇಳಿದ್ದಾರೆ. ಈ ಕಟ್ಟಡದಲ್ಲಿ ಮಹಿಳೆ, ಮಕ್ಕಳು ಮತ್ತು ವೃದ್ಧರಿಗೆ ಚಿಕಿತ್ಸೆ ನೀಡಬಹುದು. ಜತೆಗೆ ಕ್ವಾರಂಟೈನ್ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಬಹುದು ಎಂದಿದ್ದಾರೆ. ಶಾರುಖ್ ಕಡೆಯಿಂದ ಈ ರೀತಿಯ ಉತ್ತರ ಬಂದಿದ್ದೇ ತಡ, ಮುಂಬೈ ಮಹಾನಗರ ಪಾಲಿಕೆ, ಸ್ಟಾರ್ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿದೆ. "ನಾಲ್ಕು ಮಹಡಿಯ ಕಟ್ಟಡ ನೀಡುತ್ತೇನೆ ಎಂದಿದ್ದಕ್ಕೆ ಶಾರುಖ್ ಮತ್ತು ಗೌರಿ ಖಾನ್ಗೆ ಧನ್ಯವಾದ. ಇದರಿಂದ ಕ್ವಾರಂಟೈನ್ ವ್ಯವಸ್ಥೆಗೆ ಅನುಕೂಲವಾಗಲಿದೆ' ಎಂದು ಟ್ವಿಟರ್ನಲ್ಲಿ ಧನ್ಯವಾದ ಅಪಿರ್ಸಿದೆ.
ಇನ್ನು ಮೊನ್ನೆಯಷ್ಟೇ, ಹತ್ತಾರು ಸಂಸ್ಥೆಗಳಿಗೆ ಶಾರುಖ್ ಒಡೆತನದ ರೆಡ್ ಚಿಲ್ಲಿಸ್ ಮತ್ತು ಮೀರ್ ಫೌಂಡೇಶನ್ನಿಂದ ಸರಣಿ ಕಾರ್ಯಗಳನ್ನು ಮಾಡಲು ಒಪ್ಪಿಕೊಂಡಿದೆ. ಸಿನಿಮಾ ಕಾಮಿರ್ಕರು ಸೇರಿ ಬಡವರಿಗಾಗಿಯೇ ಸಾಕಷ್ಟು ಹಣವನ್ನು ಕರೊನಾ ಸಂದರ್ಭದಲ್ಲಿ ವಿನಿಯೋಗಿಸುತ್ತಿದ್ದಾರೆ. ಇದೀಗ ಆ ಪಟ್ಟಿಗೆ ಸ್ವಂತ ಕಟ್ಟಡವನ್ನೇ ನೀಡಲು ಮುಂದಾಗಿದ್ದಾರೆ. ಅಂದಹಾಗೆ, ಇತ್ತೀಚೆಗಷ್ಟೇ ಕಾಲಿವುಡ್ ಸೂಪರ್ಸ್ಟಾರ್ ಕಮಲ್ ಹಾಸನ್ ಸಹ ಚೆನ್ನೆ$ನಲ್ಲಿನ ಬೃಹತ್ ಬಂಗಲೆಯನ್ನು ಕರೊನಾ ಚಿಕಿತ್ಸೆಗೆ ಬಳಸಿಕೊಳ್ಳುವಂತೆ ಹೇಳಿದ್ದರು. (ಏಜೆನ್ಸೀಸ್)