ತನ್ನ ಪುತ್ರಿ ಬಾಯ್​ಫ್ರೆಂಡ್​ ಆಗುವವನಿಗೆ ಷರತ್ತು ಅನ್ವಯ: ಶಾರೂಕ್​ ಖಾನ್ ಹಾಕಿರುವ 7 ಷರತ್ತುಗಳೇನು ಗೊತ್ತಾ?

Sharukhan
Published on

ಮುಂಬೈ: ತಂದೆ ಎಂದರೆ ಮಗಳಿಗೆ ಅಚ್ಚುಮೆಚ್ಚು, ಈ ಬಾಂಧವ್ಯವೇ ಹಾಗೆ. ಅದು ಬಡವರೇ ಇರಲಿ, ಶ್ರೀಮಂತರೇ ಆಗಿರಲಿ ತಮ್ಮ ಮಗಳ ಮದುವೆ ಬಗ್ಗೆ ಸದಾ ಯೋಚಿಸುವ ತಂದೆ, ಉತ್ತಮ ವರನನ್ನೇ ಹುಡುಕಬೇಕೆಂಬ ಕನಸು ಕಂಡಿರುತ್ತಾನೆ.

ಇದು ಸ್ಟಾರ್​ ನಟರಿಗೂ ಅನ್ವಯಿಸುತ್ತದೆ. ಬಾಲಿವುಡ್​ ನಟ ಶಾರೂಕ್​ ಖಾನ್​ ಕೂಡ ತಮ್ಮ ಮಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆಲ್ಲದೇ ಆಕೆಯ ಭವಿಷ್ಯದ ಬದುಕು ಚೆನ್ನಾಗಿರಬೇಕು ಎಂದು ಸದಾ ಕನಸು ಕಾಣುತ್ತಾರಂತೆ ಹೀಗೊಂದು ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ.

ಮಗಳು ಸುಹಾನಾ ಖಾನ್​ ಭಾನುವಾರ 22ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಮಾತನಾಡಿರುವ ಶಾರೂಕ್​ ಖಾನ್​, ತನ್ನ ಮಗಳ ಬಾಯ್​ಫ್ರೆಂಡ್​ ಆಗಿ ಬರುವವನು ಏಳು ಷರತ್ತನ್ನು ಪಾಲಿಸಲೇಬೇಕು ಎಂದಿದ್ದಾರೆ.

ಒಳ್ಳೆ ಕೆಲಸ ಮಾಡಬೇಕು, ಮಗಳ ಜತೆ ಸದಾ ಇರಬೇಕು, ಇನ್ನೂ ಒಬ್ಬ ವಕೀಲನನ್ನೂ ಇಟ್ಟುಕೊಳ್ಳಬೇಕು, ಇನ್ನು ಆಕೆಯೊಂದಿಗೆ ಏನಾದರೂ ಅನಾಹುತವಾದರೆ ಅದನ್ನೇ ನಾನು ಮರುಕಳಿಸುತ್ತೇನೆ ಎಂದು ಧಮ್ಕಿ ಕೂಡ ಹಾಕಿದ್ದಾರೆ.

ಕೆಲವು ವರ್ಷಗಳ ಹಿಂದೆ ಕಾಫಿ ವಿತ್​ ಕರಣ್​​ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾರೂಕ್​​, ತಮ್ಮ ಮಗಳಿಗೆ ಯಾರಾದರೂ ಕಿಸ್​ ಮಾಡಿದರೆ ಏನು ಮಾಡುತ್ತೀರಾ ಎಂಬ ಕರಣ್​ ಜೋಹರ್​ ಪ್ರಶ್ನೆಗೆ ಅವನ ತುಟಿಯನ್ನು ಕತ್ತರಿಸುತ್ತೇನೆ ಎಂದು ಹೇಳಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net