ಸ್ಟೇ ಹೋಮ್, ಸ್ಟೇ ಸೇಫ್​ ಅಂದವರೇ ಯಾಕೆ ಹೀಗೆ ಮಾಡಿದರು?

Sharmila Mandre - Final
Published on

ಶನಿವಾರ ನಸುಕಿನ ಜಾವ ಶರ್ಮಿಳಾ ಮಾಂಡ್ರೆ ಇದ್ದ ಕಾರು ಅಪಘಾತಕ್ಕೀಡಾಕಿದ್ದು ಗೊತ್ತೇ ಇದೆ. ಆ ಹೊತ್ತಿನಲ್ಲಿ ಶರ್ಮಿಳಾ ಯಾಕೆ ಮನೆಯಿಂದ ಹೊರಕ್ಕೆ ಹೋಗಿದ್ದರು? ಅವರು ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದರಾ? ಅಥವಾ ಜಾಲಿರೈಡ್‌ಗೆ ಹೋಗಿದ್ದರಾ? ಎಂಬಂತಹ ಪ್ರಶ್ನೆಗಳು ಕೇಳಿ ಬರುತ್ತಲೇ ಇದೆ.

ಅದಕ್ಕೆ ಸರಿಯಾಗಿ ಶರ್ಮಿಳಾ ಅವರು, ತಾವು ಜಾಲಿರೈಡ್‌ಗೆ ಹೋಗಲಿಲ್ಲ ಎಂದು ಭಾನುವಾರ ಹೇಳಿಕೆ ಕೊಟ್ಟಿದ್ದಾರೆ. ತಮಗೆ ಹೊಟ್ಟೆನೋವು ಹೆಚ್ಚಾದ್ದರಿಂದ ಸ್ನೇಹಿತರ ಜತೆಗೆ ಮಾತ್ರೆ ತರುವುದಕ್ಕೆ ಹೊರಹೋಗಿದ್ದಾಗಿ ಹೇಳಿದ್ದಾರೆ. ಹಾಗೆ ಹೊರಹೋದ ಸಂದರ್ಭದಲ್ಲೇ ಕಾರು ಆಕ್ಸಿಡೆಂಟ್ ಆಗಿದ್ದು, ಅವರ ಕುತ್ತಿಗೆಗೆ ಪೆಟ್ಟು ಬಿದ್ದಿದೆಯಂತೆ.

ಮನೆಯಿಂದ ಹೊರಕ್ಕೆ ಹೋಗಿ ಅಪಘಾತಕ್ಕೀಡಾದ ಶರ್ಮಿಳಾ ಮಾಂಡ್ರೆ, ‘ಸ್ಟೇ ಹೋಮ್, ಸ್ಟೇ ಸೇಫ್​ ...’ ಎಂದು ಮಾರ್ಚ್ 24ಕ್ಕೇ ಟ್ವೀಟ್ ಮಾಡಿದ್ದರು. ‘ರೋಗಿಗಳ ಶುಶ್ರೂಷೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಎಲ್ಲರಿಗೂ ನನ್ನ ಪ್ರಣಾಮಗಳು. ದೈಹಿಕವಾಗಿ ಮತ್ತು ಮಾನಸಿಕವಾಗಿ ನೊಂದಿರುವ ಎಲ್ಲರೂ ಧೈರ್ಯಗೆಡಬೇಡಿ. ಸ್ಟೇ ಹೋಮ್, ಸ್ಟೇ ಸೇಫ್​’ ಎಂದು ಶರ್ಮಿಳಾ ಟ್ವೀಟ್ ಮಾಡಿದ್ದರು.

ಹೀಗೆ ಎಲ್ಲರಿಗೂ ಮನೆಯಲ್ಲಿರುವುದಕ್ಕೆ ಹೇಳಿ, ಶರ್ಮಿಳಾ ತಾವೇ ಸ್ನೇಹಿತರೊಂದಿಗೆ ಅಪಘಾತಕ್ಕೀಡಾಗಿದ್ದು ಮಾತ್ರ ವಿಚಿತ್ರ. ಸದ್ಯಕ್ಕೆ ಶರ್ಮಿಳಾ ಆಸ್ಪತ್ರೆಯೊಂದರಲ್ಲಿ ಶುಶ್ರೂಷೆ ಪಡೆಯುತ್ತಿದ್ದು, ವೈದ್ಯರು ಅವರಿಗೆ ಒಂದು ತಿಂಗಳ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net