ಹುಟ್ಟುಹಬ್ಬದಂದು ಶಂಕ್ರಣ್ಣನನ್ನು ನೆನೆದ ಕನ್ನಡ ಚಿತ್ರರಂಗ ...

Shankar Nag - Final
Published on

ಬೆಂಗಳೂರು: ಇಂದು ಶಂಕರ್​ ನಾಗ್​ ಅವರ ಹುಟ್ಟುಹಬ್ಬ. 1954ರಲ್ಲಿ ಹುಟ್ಟಿದ್ದ ಶಂಕರ್​ ನಾಗ್​ ಇಂದು ಬದುಕಿರುತ್ತಿದ್ದರೆ 66 ವರ್ಷ ಮುಗಿಸಿ, 67ಕ್ಕೆ ಕಾಲಿಡುತ್ತಿದ್ದರು. ಆದರೆ, 30 ವರ್ಷಗಳ ಹಿಂದೆಯೇ ಶಂಕರ್​ ನಾಗ್​ ಅವರು ಕಾರು ಅಪಘಾತದಲ್ಲಿ ದುರ್ಮರಣಕ್ಕೀಡಾದರು. ಅವರು ನಿಧನರಾಗಿ 30 ವರ್ಷಗಳಾದರೂ ಕನ್ನಡ ಚಿತ್ರರಂಗ ಮತ್ತು ಕನ್ನಡಿಗರು ಅವರನ್ನು ಮರೆತಿಲ್ಲ. ಇವತ್ತಿಗೂ ಕನ್ನಡ ಚಿತ್ರರಂಗ ಮತ್ತು ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಯನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುತ್ತಿದೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಮತ್ತು ತಂತ್ರಜ್ಱರು ತಮ್ಮದೇ ರೀತಿಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಶಂಕರ್​ ಅವರನ್ನು ನೆನಪಿಸಿಕೊಂಡಿದ್ದಾರೆ. ಅವರ ಬಗ್ಗೆ ಯಾರು ಏನು ಹೇಳಿದ್ದಾರೆ ನೀವೇ ನೋಡಿ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net