

ಬಾಲಿವುಡ್ನಲ್ಲಿ ಅತೀ ಹೆಚ್ಚು ಕಲಾವಿದರಿರುವ ಕುಟುಂಬ ಎಂದರೆ ರಾಜ್ ಕಪೂರ್ ಅವರದ್ದು. ಈ ಕುಟುಂಬದ 10ಕ್ಕೂ ಹೆಚ್ಚು ಜನ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಈಗ ಈ ಕಪೂರ್ ಕುಟುಂಬಕ್ಕೆ ಸಡ್ಡು ಹೊಡೆಯುವುದಕ್ಕೆ ಇನ್ನೊಂದು ಕಪೂರ್ ಕುಟುಂಬ ತಯಾರಿ ನಡೆಸುತ್ತಿದೆ. ಹೌದು, ಬಾಲಿವುಡ್ನ ಜನಪ್ರಿಯ ನಟ ಅನಿಲ್ ಕಪೂರ್ ಕುಟುಂಬದಿಂದ ಈಗಾಗಲೇ ನಾಲ್ಕು ಕುಡಿಗಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿವೆ. ಅವರ ಇಬ್ಬರು ಮಕ್ಕಳಲ್ಲದೆ, ಅವರಣ್ಣನ ಇಬ್ಬರು ಮಕ್ಕಳು ಸಹ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾತೆ. ಈಗ ತಮ್ಮನ ಮಗಳೂ ನಟನೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾಳೆ.
ಅನಿಲ್ ಕಪೂರ್ ಮಗಳು ಸಂಜಯ್ ಕಪೂರ್ ನೆನಪಿರಬಹುದು. 1995ರಲ್ಲಿ ಬಿಡುಗಡೆಯಾದ ‘ಪ್ರೇಮ್ ಎಂಬ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ, ಅಣ್ಣನಷ್ಟು ಯಶಸ್ವಿಯಾಗಲಿಲ್ಲ. ಈಗ ಸಂಜಯ್ ಮಗಳು ಶನಾಯಾ ಕಪೂರ್, ‘ದೋನೋ ಮಿಲೇ ಇಸ್ ತರಹ್’ ಎಂಬ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಧರ್ಮ ಪ್ರೊಡಕ್ಷನ್ಸ್ನಡಿ ಕರಣ್ ಜೋಹರ್ ನಿರ್ವಿುಸುತ್ತಿರುವ ಈ ಚಿತ್ರವನ್ನು ಶಶಾಂಕ್ ಕೈತಾನ್ ನಿರ್ದೇಶಿಸುತ್ತಿದ್ದಾರೆ. ‘ದೋನೋ ಮಿಲೇ ಇಸ್ ತರಹ್’ ಚಿತ್ರದಲ್ಲಿ ಶನಾಯಾ ಮಾತ್ರವಲ್ಲ, ಗುರ್ಫತೇಹ್ ಪಿರ್ಜಾದಾ ಮತ್ತು ಲಕ್ಷ್ಯ ಲಾಲ್ವಾನಿ ಎಂಬ ಹೊಸ ಹುಡುಗರು ಬಣ್ಣ ಹಚ್ಚುತ್ತಿದ್ದು, ಅವರಿಗೆ ನಾಯಕಿಯಾಗಿ ಶನಾಯಾ ನಟಿಸುತ್ತಿದ್ದಾರೆ.