

ಬೆಂಗಳೂರು: ಕರೊನಾ ಮೊದಲ ಅಲೆ ಮುಗಿಯುತ್ತಿದ್ದಂತೆಯೇ ಪ್ರಾರಂಭವಾಗಿತ್ತು ‘ಶಂಭೋ ಶಿವ ಶಂಕರ’ ಸಿನಿಮಾ. ಈಗ ಚಿತ್ರೀಕರಣ ಮುಗಿದಿದೆ, ಬಿಡುಗಡೆಯಾಗುವುದಕ್ಕೂ ಸಜ್ಜಾಗಿದೆ. ಈ ಮಧ್ಯೆ, ಹಾಡುಗಳು ಹೊರಬಂದಿವೆ. ಕಲಾವಿದರ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆಂದು ವಸಿಷ್ಠ ಸಿಂಹ ಮತ್ತು ನಿರ್ವಪಕ ಉಮಾಪತಿ ಶ್ರೀನಿವಾಸ ಗೌಡ ಬಂದಿದ್ದರು. ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿ ಬೆನ್ನುತಟ್ಟಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿರುವುದು ಶಂಕರ್ ಕೋನಮಾನಹಳ್ಳಿ. ಅವರು ಈ ಹಿಂದೆ ಕಿರುತೆರೆಯಲ್ಲಿ ಒಂದಿಷ್ಟು ಧಾರಾವಾಹಿಗಳನ್ನು ನಿರ್ದೇಶಿಸಿದ್ದರಂತೆ. ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶಿಸಿದ್ದಾರೆ. ಇದೇ ವೇಳೆ ತಮ್ಮ ಕನಸಿಗೆ ಜೀವ ತುಂಬಿದ ನಿರ್ವಪಕರಿಗೆ ಮತ್ತು ಚಿತ್ರತಂಡದವರಿಗೆ ಥ್ಯಾಂಕ್ಸ್ ಸಹ ಹೇಳಿದರು.
ನಾಯಕ ಅಭಯ್ ಪುನೀತ್ಗೆ ನಟನೆ ಏನು ಎಂದು ಗೊತ್ತಿರಲಿಲ್ಲವಂತೆ. ತಮಗೆ ನಟನೆ ಕಲಿಸಿಕೊಟ್ಟ ನಿರ್ದೇಶಕರು ಮತ್ತು ಚಿತ್ರತಂಡದವರಿಗೆ ಅವರೂ ಧನ್ಯವಾದ ಸಲ್ಲಿಸಿದರು. ನಾಯಕಿ ಸೋನಲ್ ಮಾಂತೆರೋ ಮತ್ತು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರೋಹಿತ್ ಹಾಗೂ ರಕ್ಷಕ್ ತಮ್ಮ ಪಾತ್ರಗಳ ಬಗ್ಗೆ ಪರಿಚಯ ಮಾಡಿಕೊಂಡರು. ವರ್ತರು ಮಂಜು ನಿರ್ವಣದ ಈ ಚಿತ್ರಕ್ಕೆ ಹಿತನ್ ಹಾಸನ್ ಸಂಗೀತ ಸಂಯೋಜಿಸಿದರೆ, ನಟರಾಜು ಮದ್ದಾಲ ಛಾಯಾಗ್ರಹಣ ಮಾಡಿದ್ದಾರೆ.