ಜಗತ್ತಿನ ಅತ್ಯಂತ ಸುಂದರಿ ತಂಗಿಯಾಗಿದ್ದು ಬೇಸರ ... ತಾನೊಬ್ಬ ನತದೃಷ್ಟ ಎಂದು ಶಾರೂಖ್ ಹೇಳಿದ್ದು ಯಾಕೆ ಗೊತ್ತಾ?

Shahrukh Khan - Aishwarya Rai Final
Published on

ಬಾಲಿವುಡ್‌ನ ಟಾಪ್ ಸ್ಟಾರ್‌ಗಳಾದ ಶಾರೂಖ್ ಖಾನ್ ಮತ್ತು ಐಶ್ವರ್ಯ ಹಲವು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಆದರೆ, ತಾವು ನಟಿಸಿದ ಒಂದೇ ಒಂದು ಲವ್‌ಸ್ಟೋರಿಯಲ್ಲೂ ಹ್ಯಾಪಿ ಎಂಡಿಂಗ್ ಇಲ್ಲ ಎಂಬ ವಿಷಯ ಶಾರೂಖ್ ಖಾನ್ ಅವರನ್ನು ಯಾವಾಗಲೂ ಕಾಡುತ್ತದಂತೆ. ಅಷ್ಟೇ ಅಲ್ಲ, ಚಿತ್ರವೊಂದರಲ್ಲಿ ಐಶ್ವರ್ಯ ಅಣ್ಣನಾಗಿ ನಟಿಸಿದ್ದರ ಬಗ್ಗೆ ಶಾರೂಖ್ ಯಾವಾಗಲೂ ತಮಾಷೆ ಮಾಡುತ್ತಿರುತ್ತಾರೆ.

ಪ್ರಶಸ್ತಿ ಪ್ರದಾನ ಸಮಾರಂಭವೊಂದರದಲ್ಲಿ ಈ ವಿಷಯವನ್ನು ಶಾರೂಖ್ ತಮಾಷೆಯಾಗಿ ಹೇಳಿದ್ದರು. ತಾನು ಮತ್ತು ಐಶ್ವರ್ಯ ಜೋಡಿಯಾಗಿ ನಟಿಸುವುದಕ್ಕೆ ಸಾಧ್ಯವಾಗಲೇ ಇಲ್ಲ ಎಂದು ಹೇಳಿ ಎಲ್ಲರನ್ನೂ ನಗಿಸಿದ್ದರು.

‘ಈ ವಿಷಯದಲ್ಲಿ ನಾನು ಬಹಳ ನತದೃಷ್ಟ. ನಾನು ಮತ್ತು ಐಶ್ವರ್ಯ ರೈ ಕೆಲವು ಚಿತ್ರಗಳಲ್ಲಿ ನಟಿಸಿದ್ದೀವಿ. ಮೊದಲ ಚಿತ್ರ ‘ಜೋಶ್’ನಲ್ಲಿ ನಾವಿಬ್ಬರೂ ಅಣ್ಣ-ತಂಗಿ. ‘ದೇವದಾಸ್’ನಲ್ಲಿ ನಾವಿಬ್ಬರೂ ಜೋಡಿಯಾಗಿ ನಟಿಸಿದ್ದರೂ, ನಾವಿಬ್ಬರು ಒಂದಾಗುವುದೇ ಇಲ್ಲ. ನಾವಿಬ್ಬರು ಜತೆಯಾಗಿ ನಟಿಸಿದ ಇನ್ನೊಂದು ಚಿತ್ರ ‘ಮೊಹಬ್ಬತೇ’. ಆ ಚಿತ್ರದಲ್ಲಿ ಅವರು ದೆವ್ವ. ಒಂದು ನಾರ್ಮಲ್ ಲವ್‌ಸ್ಟೋರಿ ಚಿತ್ರದಲ್ಲಿ ಅವರ ಜತೆ ನಟಿಸಬೇಕು ಎಂಬ ಆಸೆ ಇತ್ತು. ಆ ಆಸೆ ಕೈಗೂಡಲೇ ಇಲ್ಲ’ ಎಂದು ತಮಾಷೆ ಮಾಡಿದ್ದಾರೆ ಶಾರೂಖ್ ಖಾನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net