

ಕರೊನಾ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ, ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಹೇಳುವುದಕ್ಕೆ ಹಲವು ರಾಜ್ಯಗಳ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆಗಳು ತಾರೆಯರನ್ನಿಟ್ಟುಕೊಂಡು ಜಾಗೃತಿ ಮೂಡಿಸುತ್ತಲೇ ಬಂದಿವೆ.
ಕರ್ನಾಟಕದಲ್ಲೇ, ಪೊಲೀಸ್ ಇಲಾಖೆಯು ಕನ್ನಡದ ಹಲವು ಚಿತ್ರಗಳ ಪೋಸ್ಟರ್ಗಳನ್ನಿಟ್ಟುಕೊಂಡು ಜಾಗೃತಿ ಮೂಡಿಸುವುದಕ್ಕೆ ಪ್ರಯತ್ನ ಪಟ್ಟಿತ್ತು. ಸುದೀಪ್ ಅಭಿನಯದ 'ಪೈಲ್ವಾನ್', ಉಪೇಂದ್ರ ಅಭಿನಯದ 'ಬುದ್ಧಿವಂತ 2' ಚಿತ್ರಗಳ ಪೋಸ್ಟರ್ಗಳನ್ನಿಟ್ಟುಕೊಂಡು, ಕರೊನಾ ವಿರುದ್ಧ ಜಾಗೃತಿ ಮೂಡಿಸಲಾಗಿತ್ತು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಪದೇಪದೇ ಮನೆಯಿಂದ ಹೊರಬರುವುದು ಏಕೆ?
ಈಗ ಅಸ್ಸಾಂ ಪೊಲೀಸ್ ಸಹ ಇಂಥದ್ದೇ ಒಂದು ತಂತ್ರವನ್ನು ಅನುಸರಿಸುತ್ತಿದ್ದಾರೆ. ಕರೊನಾ ಹಾವಳಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅವರು ಬಾಲಿವುಡ್ ಬಾದ್ಷಾ ಶಾರೂಖ್ ಖಾನ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಂ ಶಾರೂಖ್, ಈ ಜಾಗೃತಿ ಜಾಹೀರಾತಿನಲ್ಲಿ ಅಭಿನಯಿಸುತ್ತಿದ್ದಾರಾ ಎಂಬ ಪ್ರಶ್ನೆ ಬರಬಹುದು.
ಹಾಗೇನಿಲ್ಲ, ಶಾರೂಖ್ ಖಾನ್ ಅವರ ಹಳೆಯ ಫೋಟೋವೊಂದನ್ನು ಇಟ್ಟುಕೊಂಡು, 'ಬಾಜಿಗರ್' ಚಿತ್ರದ ಒಂದು ಸಂಭಾಷಣೆಯನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಶಾರೂಖ್ ಅವರ ಸಿಗ್ನೇಚರ್ ಪೋಸ್ ಎಂದರೆ, ತಮ್ಮ ಎರಡೂ ಕೈಗಳನ್ನು ಅಗಲವಾಗಿ ಚಾಚಿ ಪೋಸ್ ಕೊಡುವುದು. ಈ ಫೋಟೋಗೆ ಮಾಸ್ಕ್ ಹಾಕಿ ಬಳಸಿಕೊಂಡಿರುವ ಅಸ್ಸಾಂ ಪೊಲೀಸ್, ಆರಡಿ ಅಂತರ ಕಾಯ್ದುಕೊಳ್ಳಿ ಎಂಬ ಸಂದೇಶವನ್ನು ನೀಡಿದ್ದಾರೆ.
'ಕೆಲವೊಮ್ಮೆ ಹತ್ತಿರ ಬರುವುದಕ್ಕಿಂತ ದೂರ ಹೋಗಬೇಕಾಗುತ್ತದೆ. ದೂರ ಹೋಗಿ ಹತ್ತಿರ ಬರುವವನಿಗೆ ಬಾಜಿಗರ್ ಎಂದು ಕರೆಯುತ್ತಾರೆ' ಎಂದು 'ಬಾಜಿಗರ್' ಚಿತ್ರದ ಜನಪ್ರಿಯ ಸಂಭಾಷಣೆಯನ್ನು ಕ್ಯಾಪ್ಶನ್ ಆಗಿ ಬಳಸಿಕೊಳ್ಳಲಾಗಿದೆ.
ಶಾರೂಖ್ ಅವರನ್ನು ಬಳಸಿಕೊಂಡು ಜಾಗೃತಿ ಮೂಡಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ, ಮುಂಬೈ ಪೊಲೀಸರು, 'ಮೇ ಹೂಂ ನಾ' ಚಿತ್ರದ ಒಂದು ದೃಶ್ಯವನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗಿತ್ತು. ಮುಂಬೈ ನಂತರ ಇದೀಗ ಅಸ್ಸಾಂಗೂ ಶಾರೂಖ್ ಬೇಕಾಗಿದ್ದಾರೆ ಎನ್ನುವುದು ವಿಶೇಷ.