

ಬೆಂಗಳೂರು: ಕಳೆದ ಜುಲೈ 28ರಂದು ಪಂಚ ಭಾಷೆಗಳಲ್ಲಿ ತೆರೆಗೆ ಬಂದಿತ್ತು ಪ್ಯಾನ್ ಇಂಡಿಯಾ ಚಿತ್ರ "ವಿಕ್ರಾಂತ್ ರೋಣ'. ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ಈ ್ಯಾಂಟಸಿ ಲೋಕವನ್ನು ಥ್ರೀಡಿಯಲ್ಲಿ ನೋಡಿ ಪ್ರೇಕ್ಷಕರು ಸಂಭ್ರಮಿಸಿದ್ದರು. ಈಗ ಥಿಯೇಟರ್ಗಳಲ್ಲಿ ನೋಡಲು ಸಾಧ್ಯವಾಗದಿದ್ದವರಿಗೆ ಓಟಿಟಿಯಲ್ಲಿ ನೋಡುವ ಅವಕಾಶ.
ಹೌದು, ಇದೇ ಸೆ. 2ರಂದು ಜೀ 5 ಕನ್ನಡ ಓಟಿಟಿಯಲ್ಲಿ "ವಿಕ್ರಾಂತ್ ರೋಣ' ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಗೆ ಉಡುಗೊರೆಯಾಗಿ ಅಂದೇ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿರುವುದು ವಿಶೇಷ. ಸದ್ಯಕ್ಕೆ ಕನ್ನಡ ಅವತರಿಣಿಕೆ ಮಾತ್ರ ಬಿಡುಗಡೆ ಆಗುತ್ತಿದ್ದು, ಉಳಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಯಾವಾಗ ? ಓಟಿಟಿ ಯಾವುದು? ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.