ಸಿಂಧೂರ ಲಕ್ಷ್ಮಣನ ಸ್ಕ್ರಿಪ್ಟ್ ಪೂಜೆ ಆಯ್ತು; ಮತ್ತೆ ಒಂದಾದ ರಾಬರ್ಟ್​ ತ್ರಿವಳಿ

Ullasa-1
Published on

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 9ಕ್ಕೆ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ತೆರೆಕಂಡಿರಬೇಕಿತ್ತು. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ನಾಲ್ಕು ತಿಂಗಳು ಗತಿಸಿದರೂ ಸಿನಿಮಾ ಯಾವಾಗ ಬಿಡುಗಡೆ ಎಂಬ ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ. ಈ ನಡುವೆ ಇದೇ ತಂಡ ಮತ್ತೊಮ್ಮೆ ಸುದ್ದಿಯಲ್ಲಿದೆ. ಅದೇ ‘ವೀರ ಸಿಂಧೂರ ಲಕ್ಷ್ಮಣ’ ಸಿನಿಮಾ ಮೂಲಕ!

ಹೌದು, ‘ರಾಬರ್ಟ್’ ಸಿನಿಮಾ ನಿರ್ದೇಶನ ಮಾಡಿದ ತರುಣ್ ಸುಧೀರ್ ಮತ್ತು ನಿರ್ಮಾಣ ಮಾಡಿದ ಉಮಾಪತಿ ಶ್ರೀನಿವಾಸ್, ‘ವೀರ ಸಿಂಧೂರ ಲಕ್ಷ್ಮಣ’ ಸಿನಿಮಾದತ್ತ ಚಿತ್ತ ಹರಿಸಿದ್ದಾರೆ. ದರ್ಶನ್ ನಾಯಕನಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಡೆಯಿತು.

‘ರಾಬರ್ಟ್’ ಚಿತ್ರದ ಮೂಲಕ ಈ ತ್ರಿವಳಿ ಸದ್ದು ಮಾಡುತ್ತಿದ್ದು, ಇದೀಗ ಐತಿಹಾಸಿಕ ಕಥೆಯತ್ತ ಚಿತ್ತ ಹರಿಸಿದೆ. ಸದ್ಯ ಕಥೆ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರಕಥೆೆಯ ಕೆಲಸಗಳು ನಡೆಯಲಿವೆ. ಹಾಗಾದರೆ, ಈ ಚಿತ್ರದ ಶೂಟಿಂಗ್ ಯಾವಾಗ? ಸದ್ಯಕ್ಕೆ ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗಬೇಕಿದೆ. ಅದಾದ ಬಳಿಕ ರಾಜೇಂದ್ರ ಸಿಂಗ್ ಬಾಬು ಜತೆಗಿನ ‘ರಾಜವೀರ ಮದಕರಿ ನಾಯಕ’ ಶೂಟಿಂಗ್​ನಲ್ಲೂ ದರ್ಶನ್ ಭಾಗವಹಿಸಲಿದ್ದಾರೆ. ಈ ಎಲ್ಲ ಕೆಲಸಗಳು ಮುಗಿದ ಬಳಿಕವಷ್ಟೇ ಸಿಂಧೂರ ಲಕ್ಷ್ಮಣ ಸೆಟ್ಟೇರಲಿದೆ. 2021ಕ್ಕೆ ಈ ಚಿತ್ರದ ಶೂಟಿಂಗ್ ನಡೆಯುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net