

ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿರುವ ಚಿತ್ರರಂಗದ ಮಂದಿಯ ಪೈಕಿ ಸಂಜನಾ ಗಲ್ರಾನಿ ಸಹ ಒಬ್ಬರು. ಕಳೆದ 24 ದಿನಗಳಿಂದ ಸಂಜನಾ, ತಮ್ಮ ಸಂಜನಾ ಗಲ್ರಾನಿ ೌಂಡೇಶನ್ ಮೂಲಕ ಚಿತ್ರರಂಗದವರಷ್ಟೇ ಅಲ್ಲ, ಕಷ್ಟದಲ್ಲಿರುವವರಿಗೆ ರೇಷನ್ ಕಿಟ್ ವಿತರಿಸುವ ಮೂಲಕ, ಹಸಿದವರಿಗೆ ಅನ್ನದಾನ ಮಾಡುವ ಮೂಲಕ ಸ್ಪಂದಿಸುತ್ತಿದ್ದಾರೆ.
ಈ ಕುರಿತು "ವಿಜಯವಾಣಿ' ಜತೆಗೆ ಮಾತನಾಡಿದ ಅವರು, "ನನಗೆ ಮದುವೆ ಗ್ರಾಂಡ್ ಆಗಿ ಮಾಡಿಕೊಳ್ಳಬೇಕು ಎಂಬ ಆಸೆ ಇತ್ತು. ಎಲ್ಲರನ್ನೂ ಕರೆಯಬೇಕು ಅಂತ ಕನಸಿತ್ತು. ಆದರೆ, ಮೊದಲ ಲಾಕ್ಡೌನ್ನಿಂದ ಅದು ಸಾಧ್ಯವಾಗಲಿಲ್ಲ. ಚಿತ್ರರಂಗದವರನ್ನೆಲ್ಲ ಕರೆದು ಊಟ ಹಾಕಿಸಬೇಕು ಎಂಬ ಕನಸು ನನಸಾಗಲಿಲ್ಲ. ಈಗ ಚಿತ್ರರಂಗದ ಹಲವರು ಕಷ್ಟದಲ್ಲಿದ್ದಾರೆ. ಮದುವೆಗೆ ಅಂತ ಇಟ್ಟಿದ್ದ ದುಡ್ಡಿನಲ್ಲಿ ಇದೀಗ ಕಿಟ್ಗಳನ್ನು ವಿತರಿಸುತ್ತಿದ್ದೇನೆ. ಸಂಭ್ರಮಕ್ಕಿಂತ ಜನರ ನೋವಿಗೆ ಸ್ಪಂದಿಸುವುದು ಬಹಳ ಮುಖ್ಯ. ಈಗಾಗಲೇ, ಚಿತ್ರರಂಗದ ವಿವಿಧ ವಲಯಗಳ 500ಕ್ಕೂ ಹೆಚ್ಚು ಜನರಿಗೆ ಕಿಟ್ ವಿತರಿಸಲಾಗಿದೆ' ಎನ್ನುತ್ತಾರೆ ಸಂಜನಾ.
ಇನ್ನು, ಕಳೆದ 24 ದಿನಗಳಿಂದ ಅವರು ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ಆಹಾರ ವಿತರಿಸುತ್ತಿದ್ದಾರೆ. "ಮೊದಲ 12 ದಿನಗಳ ಕಾಲ ಶ್ರೀಕೃಷ್ಣ ಪರಮಾತ್ಮ ೌಂಡೇಶನ್ ಅವರು ಅಡುಗೆ ಮಾಡಿ ಕೊಡುತ್ತಿದ್ದರು. ಅದನ್ನು ಹಂಚುವ ಕೆಲಸ ನಮ್ಮದಾಗಿತ್ತು. ಮೂರು ಪ್ರದೇಶಗಳಲ್ಲಿ ವಾಟ್ಸಪ್ ಗ್ರೂಪ್ ಮಾಡಿ, ಅವರಿಗೆ ಇಂತಿಷ್ಟು ಸಮಯಕ್ಕೆ ಬರುತ್ತೇವೆ ಎಂದು ಹೇಳಿ, ಆ ಸಮಯಕ್ಕೆ ಹೋಗಿ ಹಂಚುತ್ತಿದ್ದೆವು. ಅವರು ನಿಲ್ಲಿಸಿದ ನಂತರ, ನಾವೇ ನಮ್ಮ ಮನೆಯ ಕಾರ್ ಪಾರ್ಕಿಂಗ್ನಲ್ಲೇ ಅಡುಗೆ ಮಾಡಿ, ಕಷ್ಟದಲ್ಲಿರುವವರಿಗೆ ಹಂಚಿದೆವು. ಜನ ಬರುತ್ತಾರೋ ಇಲ್ಲವೋ ಎಂಬ ಭಯವಿತ್ತು. ಸ್ವಲ್ಪ ಹೊತ್ತಿನಲ್ಲೇ ಮಾಡಿದ ಅಷ್ಟೂ ಅಡುಗೆ ಖಾಲಿಯಾಯಿತು. ಹೀಗೆ ಪ್ರತಿ ದಿನ 500ಕ್ಕೂ ಹೆಚ್ಚು ಜನರಿಗೆ ಊಟ ಹಾಕುತ್ತಿದ್ದೇವೆ' ಎನ್ನುತ್ತಾರೆ ಸಂಜನಾ. ಕಿಟ್ ವಿತರಣೆ ಮತ್ತು ಅನ್ನದಾನ ಮಾಡುವುದರ ಜತೆಗೆ, ತರಕಾರಿ ಸಹ ಹಂಚಿದ್ದಾರಂತೆ ಸಂಜನಾ. "ನಾನು ಯಾರ ಬಳಿಯೂ ದುಡ್ಡು ಕೇಳಲಿಲ್ಲ. ಕೆಲವರು ತಾವೇ ಮುಂದೆ ಬಂದು, ಆಹಾರ ಸಾಮಗ್ರಿ ಮತ್ತು ತರಕಾರಿಗಳನ್ನು ಕೊಟ್ಟಿದ್ದಾರೆ. ಅದನ್ನು ೌಂಡೇಶನ್ ಮೂಲಕ ಹಂಚಿದ್ದೇನೆ' ಎನ್ನುವ ಸಂಜನಾ, ಲಾಕ್ಡೌನ್ ಮುಗಿಯುವವರೆಗೂ ಸಹಾಯವನ್ನು ಮುಂದುವರೆಸುವುದಕ್ಕೆ ಯೋಚಿಸುತ್ತಿದ್ದಾರೆ.