ಗೋದ್ರಾಗಾಗಿ ಜಿಮ್​​ನಲ್ಲಿ ಸತೀಶ್​

sathish mar 20
Published on

ಬೆಂಗಳೂರು: ಇತ್ತೀಚೆಗಷ್ಟೇ ನಟ ನೀನಾಸಂ ಸತೀಶ್ ಸಾಮಾಜಿಕ ಜಾಲತಾಣದಲ್ಲಿ ಬೇರ್ ಬಾಡಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಫೋಟೋ ಏತಕ್ಕಾಗಿ ಪೋಸ್ಟ್ ಮಾಡಿರಬಹುದು ಎಂಬ ಸಹಜ ಕುತೂಹಲವೂ ಸೃಷ್ಟಿಯಾಗಿತ್ತು. ಈಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದ್ದು, ‘ಗೋದ್ರಾ’ ಚಿತ್ರದ ಹಾಡೊಂದರ ಸಲುವಾಗಿ ದೇಹವನ್ನು ಹುರಿಗೊಳಿಸಿಕೊಳ್ಳಲು ಮತ್ತೆ ಜಿಮ್ತ್ತ ಮುಖ ಮಾಡಿದ್ದಾರೆ ಸತೀಶ್.

ಅಂದಹಾಗೆ, ಈ ಮೊದಲು ‘ಅಯೋಗ್ಯ’ ಚಿತ್ರಕ್ಕಾಗಿ ದೇಹವನ್ನು ಕಲ್ಲಂತೆ ಮಾಡಿಕೊಂಡಿದ್ದ ಅವರು, ಈ ಬಾರಿ ಗೋದ್ರಾ ಸಲುವಾಗಿ ಕಸರತ್ತು ಆರಂಭಿಸಿದ್ದಾರೆ. ಆ ಕಸರತ್ತು ಹೇಗೆಲ್ಲ ನಡೆದಿದೆ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.

‘ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಜಿಮ್ ಸೇರಿಲ್ಲ. ಆರೋಗ್ಯದ ದೃಷ್ಟಿಯಿಂದ ಮತ್ತು ಒಂದು ವಿಶೇಷ ಹಾಡಿನ ಸಲುವಾಗಿ ಶಾರೀರಿಕ ಬದಲಾವಣೆ ಅಗತ್ಯ. ಶ್ಯಾಮ್ ರಾಬರ್ಟ್ ಟ್ರೇನ್ ಮಾಡುತ್ತಿದ್ದಾರೆ. ದಿನಕ್ಕೆ ಐದು ಕಿಲೋ ಮೀಟರ್ ಓಟ, ಎರಡು ಹೊತ್ತು ಜಿಮ್ ಸತ್ವಯುಕ್ತ ಆಹಾರ ಸೇವನೆ ಆರಂಭಿಸಿದ್ದೇನೆ’ ಎನ್ನುತ್ತಾರೆ ಸತೀಶ್. ಈಗಾಗಲೇ ‘ಗೋದ್ರಾ’ ಚಿತ್ರದ ಬಹುತೇಕ ಕೆಲಸಗಳು ಮುಕ್ತಾಯವಾಗಿದ್ದು, ‘ವೈತರಣಿ’ ಮತ್ತು ‘ಪರಿಮಳ ಲಾಡ್ಜ್’ ಸಿನಿಮಾ ಕೆಲಸಗಳೂ ಚಾಲ್ತಿಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net