

ಬಾಲಿವುಡ್ನ ಘಟಾನುಘಟಿ ಕಲಾವಿದರಿಗೆ ಕರೊನಾ ಅಂಟಿಕೊಂಡಿದೆ. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾಗೂ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಹಲವು ಕಿರುತೆರೆ ನಟರಲ್ಲಿಯೂ ಕರೊನಾ ಕಾಣಿಸಿಕೊಂಡು, ಶೂಟಿಂಗ್ ನಿಲ್ಲಿಸಲಾಗಿತ್ತು. ಇದೀಗ ಸೈಫ್ ಅಲಿಖಾನ್ ಕುಟುಂಬಕ್ಕೂ ಕರೊನಾ ಆತಂಕ ಎದುರಾಗಿದೆ.
ಅಂದರೆ, ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಕಾರ್ ಚಾಲಕನಿಗೆ ಕರೊನಾ ಇರುವುದು ದೃಢಪಟ್ಟಿದೆ. ಹೀಗಾಗಿ ಸೈಫ್ ಅಲಿಖಾನ್ ಕುಟುಂಬ ಆತಂಕದಲ್ಲಿಯೇ ಕೋವಿಡ್ ಪರೀಕ್ಷೆಗೆ ಮುಂದಾಗಿತ್ತು. ಖುಷಿಯ ವಿಚಾರ ಏನೆಂದರೆ, ಪರೀಕ್ಷೆಯಲ್ಲಿ ಎಲ್ಲರ ವರದಿ ನೆಗೆಟಿವ್ ಬಂದಿದೆ.
ಇದನ್ನೂ ಓದಿ: ನಾಲ್ಕು ಭಾಷೆಗಳಲ್ಲಿ ಡಬ್ ಆಗುತ್ತಿದೆ ಕನ್ನಡ್ ಗೊತ್ತಿಲ್ಲ
ಅಂದಹಾಗೆ, ಸದ್ಯ ಕರೊನಾ ಹಿನ್ನೆಲೆಯಲ್ಲಿ ತಾಯಿ ಅಮೃತಾ ಸಿಂಗ್ ಜತೆಯಲ್ಲಿಯೇ ಸಾರಾ ಮತ್ತು ಇಬ್ರಾಹಿಂ ಉಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವಿಟರ್ನಲ್ಲಿ ಬರೆದುಕೊಂಡಿರುವ ಸಾರಾ, ‘ನಮ್ಮ ಮನೆಯ ಕಾರು ಚಾಲಕನಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನುಳಿದಂತೆ ನಮ್ಮ ಮನೆಯವರೆಲ್ಲರ ವರದಿ ನೆಗೆಟಿವ್ ಬಂದಿದೆ. ಬಿಎಂಸಿಗೆ ನಮ್ಮ ಕೃತಜ್ಞತೆ’ ಎಂದಿದ್ದಾರೆ
ಇತ್ತೀಚಿನ ಕೆಲ ದಿನಗಳಿಂದ ಆಮಿರ್ ಖಾನ್, ಕರಣ್ ಜೋಹರ್ ಮತ್ತು ಬೋನಿ ಕಪೂರ್ ಮನೆ ಕೆಲಸದವರಲ್ಲಿ ಕರೊನಾ ಇರುವುದು ದೃಢಪಟ್ಟಿತ್ತು. ಇದೀಗ ಸಾರಾ ಅಲಿಖಾನ್ ಕಾರ್ ಚಾಲಕನಲ್ಲಿ ಕರೊನಾ ಕಾಣಿಸಿಕೊಂಡಿದೆ. (ಏಜೆನ್ಸೀಸ್)