ಮಿಷನ್ ಫ್ರಂಟ್​ಲೈನ್​: ಕಮಾಂಡೊ ಆಗಿ ಸಾರಾ ಅಲಿ ಖಾನ್​

Sara
Published on

ಸಾರಾ ಅಲಿ ಖಾನ್ ಮೊದಲ ಬಾರಿಗೆ ರಫ್ ಆಂಡ್ ಟಫ್ ಪಾತ್ರ ಮಾಡಿದ್ದಾರೆ. ಕಮಾಂಡೊ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇದು ಯಾವುದೋ ಹೊಸ ಚಿತ್ರಕ್ಕಲ್ಲ, ‘ಮಿಷನ್ ಫ್ರಂಟ್​ಲೈನ್’ ಎಂಬ ಕಾರ್ಯಕ್ರಮಕ್ಕೆ. ಡಿಸ್ಕವರಿ ಪ್ಲಸ್ ಒಟಿಟಿಯಲ್ಲಿ ಈ ಹಿಂದೆ ‘ಮಿಷನ್ ಫ್ರಂಟ್​ಲೈನ್ ವಿಥ್ ರಾಣಾ ದಗ್ಗುಬಾಟಿ’ ಎಂಬ ಕಾರ್ಯಕ್ರಮ ಪ್ರಸಾರವಾಗಿದ್ದು ನೆನಪಿರಬಹುದು. ಈಗ ‘ಮಿಷನ್ ಫ್ರಂಟ್​ಲೈನ್ ವಿಥ್ ಸಾರಾ’ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದರಲ್ಲಿ ಸಾರಾ, ಅಸ್ಸಾಂನ ವೀರಾಂಗಣ ಮಹಿಳಾ ಪಡೆಯ ಜತೆಗೆ ಸೇರಿಕೊಂಡು ಹಲವು ಅಭ್ಯಾಸಗಳಲ್ಲಿ ಭಾಗಿಯಾಗಿ ಕಮಾಂಡೊ ಆಗಿ ರೂಪಾಂತರಗೊಳ್ಳುವುದನ್ನು ನೋಡಬಹುದು.

‘ಬರೀ ಕಮಾಂಡೊ ಆಗುವುದಕ್ಕಷ್ಟೇ ಅಲ್ಲ, ಪ್ರತಿಯೊಬ್ಬ ಮಹಿಳೆಗೂ ಈ ತರಬೇತಿ ಸಿಗುವಂತಾಗಬೇಕು. ಏಕೆಂದರೆ, ಸಮಸ್ಯೆ ಯಾವಾಗ ಮತ್ತು ಎಲ್ಲಿ ಉದ್ಭವವಾಗುತ್ತದೆ ಎಂದು ಹೇಳುವುದು ಕಷ್ಟ. ಹಾಗಾಗಿ, ಎಂಥದ್ದೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವ ಶಕ್ತಿ ಮತ್ತು ವಿಶ್ವಾಸ ಇರಬೇಕು. ಆ ವಿಶ್ವಾಸ ಬರಬೇಕು ಎಂದರೆ, ಇಂತಹ ಕಠಿಣ ತರಬೇತಿ ಪಡೆದಿರಬೇಕು’ ಎನ್ನುತ್ತಾರೆ. ಈ ಕಾರ್ಯಕ್ರಮವು ಇದೀಗ ಡಿಸ್ಕವರಿ ಪ್ಲಸ್​ನಲ್ಲಿ ಸ್ಟ್ರೀಮ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net