Sanju Samson: ಪ್ರಸಕ್ತ 19ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿ ಆಡುತ್ತಿರುವ ಸಂಜು ಸ್ಯಾಮ್ಸನ್, ತಂಡವನ್ನು ಹೇಗಾದರೂ ಮಾಡಿ ಪ್ಲೇಆಫ್ಗೆ ಕೊಂಡೊಯ್ಯಲು ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಈ ಮಧ್ಯೆ, ತಮ್ಮ ಸ್ನೇಹಿತ, ಮಲಯಾಳಂ ನಟರಾದ ಬಸಿಲ್ ಜೋಸೆಫ್ ಅವರ ಚಿತ್ರದ ಇತ್ತೀಚಿಗಿನ ಈವೆಂಟ್ನಲ್ಲಿ ಭಾಗವಹಿಸಿದ ಸಂಜು, ಸಿನಿಪ್ರಿಯರ ಕುತೂಹಲ ಕೆರಳಿಸುವಂತ ವಿಷಯಗಳನ್ನು ಹಂಚಿಕೊಂಡಿದ್ದಾರೆ.