

ಬೆಂಗಳೂರು: ಸಂಜಯ್ ದತ್ ಹುಟ್ಟುಹಬ್ಬದ ಪ್ರಯುಕ್ತ ಕ್ರೌರ್ಯದ ಕರಾಳ ಮುಖವನ್ನು ಬಿಡುಗಡೆ ಮಾಡಲಾಗುವುದು ಎಂದು ಯಶ್ ಅಭಿನಯದ ‘ಕೆ.ಜಿ.ಎಫ್ - ಚಾಪ್ಟರ್ 2’ ಚಿತ್ರತಂಡವು ಮೊದಲೇ ಘೋಷಿಸಿತ್ತು. ಅದರಂತೆ ಬುಧವಾರ, ದತ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ದತ್ ಅವರ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ, ಅವರ ಲುಕ್ ವೈಕಿಂಗ್ ಸರಣಿಯನ್ನು ಹೋಲುತ್ತದೆ ಎಂಬ ಚರ್ಚೆ ಪ್ರಾರಂಭವಾಯಿತು. ಈ ಕುರಿತು ಅಧಿಕೃತವಾಗಿ ಟ್ವೀಟ್ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್, ವೈಕಿಂಗ್ಗಳ ಕ್ರೌರ್ಯದಿಂದ ಸ್ಪೂರ್ತಿ ಪಡೆದು ಪಾತ್ರವನ್ನು ರೂಪಿಸಿರುವುದಾಗಿ ಹೇಳಿಕೊಂಡಿದ್ದಾರೆ.