ಹೇಳಿದಂತೆ ಮಾಡಿ ತೋರಿಸಿದ ಸಂಜಯ್​ ದತ್​ ...

Sanjay Dutt - Final
Published on

ಶನಿವಾರವಷ್ಟೇ ಅನಾರೋಗ್ಯದಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಸಂಜಯ್​ ದತ್​, ಸೋಮವಾರ ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಶನಿವಾರ ಮಧ್ಯಾಹ್ನ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಸಂಜಯ್​ ದತ್​ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹಲವು ಚೆಕಪ್​ಗಳನ್ನು ಮಾಡಲಾಗಿತ್ತು. ಅಷ್ಟೇ ಅಲ್ಲ, ಕೋವಿಡ್​-19 ಟೆಸ್ಟ್​ ಸಹ ಮಾಡಲಾಗಿದ್ದು, ವರದಿ ನೆಗೆಟಿವ್​ ಬಂದಿತ್ತು.

ಈ ಕುರಿತು ಟ್ವೀಟ್​ ಮಾಡಿದ್ದ ಸಂಜಯ್​ ದತ್​, 'ನನಗೇನೂ ಆಗಿಲ್ಲ. ಆಸ್ಪತ್ರೆಯ ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇನ್ನೆರೆಡು ದಿನಗಳಲ್ಲಿ ನಾನು ಮನೆಗೆ ವಾಪಸ್ಸಾಗುತ್ತಿದ್ದೇನೆ. ನಾನು ಹುಷಾರಾಗಿ ಬೇಗ ಮನೆಗೆ ಬರಲಿ ಎಂದು ಹಾರೈಸುತ್ತಿರುವ ಎಲ್ಲರಿಗೂ ಧನ್ಯವಾದಗಳು' ಎಂದು ಸಂಜಯ್​ ದತ್​ ಬರೆದುಕೊಂಡಿದ್ದರು.

ಅದರಂತೆ, ಸೋಮವಾರ ಮಧ್ಯಾಹ್ನ ಸಂಜಯ್​ ದತ್​ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ತಮ್ಮ ಮನೆಗೆ ತಲುಪಿದ್ದಾರೆ. ಅಷ್ಟೇ ಅಲ್ಲ, ಮನೆಯ ಹತ್ತಿರ ಬೀಡುಬಿಟ್ಟಿದ್ದ ಪಾಪರಾಝಿಗಳ ಕ್ಯಾಮೆರಾಗಳಿಗೆ ಫೋಸ್​ ನೀಡುವ ಮೂಲಕ, ತಾನು ಗುಣಮುಖನಾಗಿದ್ದೇನೆ ಎಂದು ಅವರು ತೋರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net