

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ಕತ್ತಲೆ ಕೋಣೆ' ಮತ್ತು "ಇನಾಮ್ದಾರ್' ಖ್ಯಾತಿಯ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರ "ಗುಂಮ್ಟಿ'. ಇದೊಂದು ಕಲಾತ್ಮಕ ಚಿತ್ರವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಯ ಮೇಲೆ ತರುವ ಪ್ರಯತ್ನ ಚಿತ್ರತಂಡದ್ದವು. ಈಗಾಗಲೇ ಚಿತ್ರದ ಪೋಸ್ಟ್- ಪ್ರೊಡಕ್ಷನ್ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೆ ಟ್ರೇಲರ್ ರಿಲಿಸ್ ಮಾಡಲಾಯಿತು.
ಚಿತ್ರದ ಬಗ್ಗೆ ನಾಯಕ, ನಿರ್ದೇಶಕ ಸಂದೇಶ್, ""ಗುಂಮ್ಟಿ' ಎಂಬುದು ಕುಡುಬಿ ಸಮುದಾಯದ ಕಲಾಪ್ರಕಾರಾದ ಸಾಂಪ್ರದಾಯಿಯ ವಾದ್ಯ. ಅದನ್ನೇ ಸಿನಿಮಾ ಟೈಟಲ್ ಮಾಡಿಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ಸಂರ್ಷದ ಮೇಲೆ ಈ ಚಿತ್ರದಲ್ಲಿ ಬೆಳಕು ಚೆಲ್ಲಿದ್ದೇವೆ. ರಿಲೀಸ್ಗೂ ಮುನ್ನವೇ ಚಿತ್ರದ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದ್ದು, ಈಗಾಗಲೇ ಉಡುಪಿ ಸುತ್ತಮುತ್ತ 24 ಪ್ರದರ್ಶನಗಳು ಮುಂಗಡವಾಗಿ ಬುಕ್ಕಿಂಗ್ ಆಗಿವೆ' ಎಂದು ಸಂತಸ ಹಂಚಿಕೊಂಡರು.
ಚಿತ್ರದಲ್ಲಿ ಸಂದೇಶ್ಗೆ ವೈಷ್ಣವಿ ನಾಡಿಗ್ ನಾಯಕಿಯಾಗಿದ್ದು, ಮಲ್ಲಿ ಎಂಬ ಕುಡುಬಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ, ರು ಪಾಂಡೇಶ್ವರ, ಚೇತನ, ಚಿತ್ರಕಲಾ ಪ್ರಮುಖ ತಾರಾಗಣದಲ್ಲಿದ್ದಾರೆ. ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೊಲ್ಹಾಪುರ ಸೇರಿ ಕರಾವಳಿ&ಮಲೆನಾಡು ಮತ್ತಯ ಪಶ್ಚಿಮ ಟ್ಟದ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಸದ್ಯ ಸಿನಿಮಾ ಸೆನ್ಸಾರ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ರಿಲೀಸ್ ಡೇಟ್ ಘೋಷಣೆ ಮಾಡುವ ಯೋಜನೆ ಚಿತ್ರತಂಡದ್ದು.