ಅಭಿಮಾನಿಯನ್ನು ತಡೆದ ಬಾಡಿಗಾರ್ಡ್​ಗೆ ಯಶ್ ಕೊಟ್ಟ ರಿಯಾಕ್ಷನ್​ ವೈರಲ್​; 'ಚಿನ್ನದಂತ ಮನಸ್ಸು' ಎಂದ ನೆಟ್ಟಿಗರು..Yash Toxic

Yash stops bodyguard from pulling fan away
Yash stops bodyguard from pulling fan away
Published on

ಪ್ರಮುಖ ಮುಖ್ಯಾಂಶಗಳು

  • ಟಾಕ್ಸಿಕ್​ ಪ್ರೀ ರಿಲೀಸ್ ಇವೆಂಟ್​ನಲ್ಲಿ ಹೆಚ್ಚು ಗಮನ ಸೆಳೆದ ಸ್ಯಾಂಡಲ್​​ವುಡ್ ನಟ ಯಶ್
  • ಸೆಲ್ಫಿಗಾಗಿ ಯಶ್​ನತ್ತ ಧಾವಿಸಿದ ಫ್ಯಾನ್ಸ್​ನ ಎಳೆದ ಬಾಡಿಗಾರ್ಡ್​
  • ಬಾಡಿಗಾರ್ಡ್​ರನ್ನು ತಡೆದು ಫ್ಯಾನ್ಸ್​ ಜೊತೆ ಸೆಲ್ಫಿ ಕ್ಲಕ್ಕಿಸಿಕೊಂಡ ನಟ ಯಶ್
Yash stops bodyguard from pulling fan away: ಟಾಕ್ಸಿಕ್​ ರಿಲೀಸ್​ಗೆ ಇನ್ನೇನು ಕ್ಷಣಗಣನೇ ಶುರುವಾಗಿದೆ. ಈಗಾಗಲೇ ಸಿನಿಮಾ ವೀಕ್ಷಣೆಗಾಗಿ ಮುಂಗಡವಾಗಿ ಟಿಕೆಟ್​ಗಳು ಬುಕ್​ ಆಗಿವೆ. ಈ ಹೊತ್ತಲ್ಲೇ ಯಶ್​ ಬಗ್ಗೆ ಕೆಲವು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಗಮನ ಸೆಳೆಯುವಂತೆ ಮಾಡುತ್ತಿದೆ. ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯನ್ನು ಬಾಡಿಗಾರ್ಡ್​ ಅಡ್ಡ ಹಾಕಿದಾಗ, ಅದನ್ನು ತಡೆದ ಪರಿ ಸದ್ಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಹೈದರಾಬಾದ್‌ನ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದಲ್ಲಿ ಟಾಕ್ಸಿಕ್​ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅಭಿಮಾನಿಯೊಬ್ಬ ಯಶ್​ ಅವರ ಬಳಿ ಸೆಲ್ಫಿ ತೆಗೆಸಿಕೊಳ್ಳಲು ಬಂದಾಗ ಅವರು ನಡೆಸಿಕೊಂಡ ರೀತಿ ಹಾಗೂ ವಿದ್ಯಾರ್ಥಿಗಳ ಮೇಲೆ ಫ್ಲಡ್‌ಲೈಟ್ ಕಂಬ ಬಿದ್ದಾಗ ಭಾಷಣ ನಿಲ್ಲಿಸಿ ಕ್ಷೇಮ ವಿಚಾರಿಸಿದ ಪರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಏನಾಯ್ತು?

ಪ್ರೀ ರಿಲೀಸ್ ಇವೆಂಟ್​ ವೇಳೆ ಒಬ್ಬ ಅಭಿಮಾನಿ ಯಶ್​ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಅವರಿದ್ದ ಕಡೆ ಧಾವಿಸುತ್ತಿದ್ದ ಕಡೆ ಧಾವಿಸಿದ, ಫೋಟೋಗೂ ಯಶ್ ಒಪ್ಪಿಕೊಂಡಿದ್ದರು. ಆದರೆ ಅವರ ಬಾಡಿಗಾರ್ಡ್​ ಆತನನ್ನು ತಡೆದು ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ. ಇದನ್ನು ಕಂಡ ಯಶ್ ಅವರು ಮಧ್ಯಪ್ರವೇಸಿಇಸ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ಘಟನೆಯನ್ನು ನೋಡುತ್ತಿದ್ದ ನಟಿ ಹುಮಾ ಖರೇಷಿ ನಕ್ಕಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಮತ್ತೊಂದು ವಿಡಿಯೋದಲ್ಲಿ ಅಭಿಮಾನಿಯೊಬ್ಬ ಯಶ್ ಅವರ ಚಿತ್ರ ಬಿಡಿಸಿ, ಅವರತ್ತ ತೋರಿಸುತ್ತಿದ್ದ. ಕೆಲವೇ ಕ್ಷಣದಲ್ಲಿ ಅವರ ಬಳೀ ಆಟೋಗ್ರಾಫ್​ ಹಾಕಿಸಿಕೊಂಡು ನಾನೇ ಬರೆದಿದ್ದು ಎಂದು ಹೇಳಿದ. ಈ ವೇಳೆ ಅವರು ಆತನಿಗೆ ತುಂಬಾ ಚೆನ್ನಾಗಿದೆ ಧನ್ಯವಾದ ಎಂದು ಹೇಳಿರುವುದು ಮತ್ತೊಂದು ವಿಡಿಯೋದಲ್ಲಿ ಇದೆ.

ನೆಟ್ಟಿಗರು ಏನಂದ್ರು?

ಬಂಗಾರದಂತಹ ಮನಸ್ಸು ಹೊಂದಿರುವ ವ್ಯಕ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಯಶ್​​ ಅವರ ಈ ನಡವಳಿಕೆ ನಟಿ ಹುಮಾ ಖುರೇಷಿ ಮನಸೋತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
‘ಇನ್ನೂ ಕೆಲವರು ಎಂಥ ಒಳ್ಳೆ ಮನುಷ್ಯ ಎಂದು ಹೇಳಿದರೆ ಮತ್ತೊಬ್ಬರು..ಅವರ ಈ ನಡವಳಿಕೆಯೇ ಅವರಿಗೆ ಯಶಸ್ಸನ್ನು ತಂದುಕೊಡುವಂತೆ ಮಾಡುತ್ತಿದೆ.."ನಿಜವಾದ ನಾಯಕರು ತಮ್ಮ ಅಭಿಮಾನಿಗಳನ್ನು ಎಂದಿಗೂ ದ್ವೇಷಿಸುವುದಿಲ್ಲ. ಅವರು ಅವರನ್ನು ತಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net