ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆವಿಎನ್ ಪ್ರೊಡಕ್ಷನ್ಸ್ ಜಾಲತಾಣದಲ್ಲಿ, ""ಟಾಕ್ಸಿಕ್' ಬಿಡುಗಡೆಗೆ 140 ದಿನಗಳು. ವಿಶ್ವಾದ್ಯಂತ ಮಾರ್ಚ್ 19, 2026ರಂದು ರಿಲೀಸ್' ಎಂದು ಸ್ಪಷ್ಟಪಡಿಸಿದೆ. ಮಾ. 19, 2026 ಗುರುವಾರವಾಗಿದ್ದು, ಅಂದು ದಕ್ಷಿಣ ಭಾರತದಲ್ಲಿ ಉಗಾದಿ ಆಚರಿಸಿದೆ, ಉತ್ತರ ಭಾರತದಲ್ಲಿ ಗುಡಿ ಪಡ್ವ ಆಚರಿಸಲಾಗುತ್ತದೆ. ಹಾಗೇ ಮಾ. 19 ಮತ್ತು 20ರಂದು ವಿಶ್ವಾದ್ಯಂತ ಈದ್ ಆಚರಿಸಲಾಗುತ್ತದೆ. ಹೀಗಾಗಿ ಗುರುವಾರ ಮತ್ತು ಶುಕ್ರವಾರ ರಜೆ ಇರಲಿದ್ದು, ಶನಿವಾರ ಮತ್ತು ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ಸುದೀರ್ಘ ವೀಕೆಂಡ್ ಸಿಗಲಿದೆ. ಇದೇ ಲೆಕ್ಕಾಚಾರದಲ್ಲಿ ಚಿತ್ರತಂಡ ಸಿನಿಮಾ ಘೋಷಿಸಿದ ದಿನವೇ ಬಿಡುಗಡೆ ದಿನಾಂಕವನ್ನೂ ಅನೌನ್ಸ್ ಮಾಡಿತ್ತು.