ಗರ್ಭಿಣಿ ಕಿಯಾರಾಗೆ ಬೌನ್ಸರ್ ಆಗಿದ್ದ ಯಶ್! 'ಟಾಕ್ಸಿಕ್' ಸೆಟ್‌ನ ರೋಚಕ ಸತ್ಯ ಬಿಚ್ಚಿಟ್ಟ ರಾಕಿ ಭಾಯ್! Yash

Yash  ಚಿತ್ರ Instagram
Yash ಚಿತ್ರ Instagram
Published on

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್​ ಚಲನಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ (Yash), ಚಿತ್ರೀಕರಣದ ಸಮಯದಲ್ಲಿ ತಮ್ಮ ಸಹನಟಿ ಕಿಯಾರಾ ಅಡ್ವಾಣಿ ಅವರನ್ನು ಒಬ್ಬ ಬಾಡಿಗಾರ್ಡ್​ ರೀತಿಯಲ್ಲಿ ಹೇಗೆ ರಕ್ಷಿಸಲಾಯಿತು ಎಂಬುದರ ಕುರಿತು ಹಂಚಿಕೊಂಡಿದ್ದಾರೆ.

ಚಿತ್ರೀಕರಣದ ಸಮಯದಲ್ಲಿ ಕಿಯಾರಾ ಅಡ್ವಾಣಿ ಗರ್ಭಿಣಿಯಾಗಿದ್ದರು. ಆದಾಗ್ಯೂ, ಅವರು ತೋರಿದ ವೃತ್ತಿಪರತೆ ಮತ್ತು ಶ್ರದ್ಧೆಯನ್ನು ಯಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನಾವಿಬ್ಬರೂ ಸೆಟ್‌ನಲ್ಲಿ ಬೌನ್ಸರ್‌ಗಳಂತೆ ಇದ್ದೆವು!

ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್​, ಕಿಯಾರಾ ಅತ್ಯಂತ ವೃತ್ತಿಪರ ನಟಿ. ಈ ಸಿನಿಮಾ ತುಂಬಾ ಶ್ರಮ ಮತ್ತು ಸವಾಲುಗಳನ್ನು ಎದುರಿಸುತ್ತಿರುವುದರಿಂದ ನನಗೆ ಸ್ವಲ್ಪ ಭಯವಿತ್ತು. ಮೊದಲ ಬಾರಿ ಮಾತನಾಡುವಾಗ ಮಳೆ ಸೀಕ್ಷೆನ್ಸ್​ ಬಗ್ಗೆ ಕೇಳಿದ್ದರು. ಆದರೆ, ಅವರು ತಮ್ಮ ಗರ್ಭಿಣಿ ಹಂತದಲ್ಲೂ ಶೇ.100 ರಷ್ಟು ಶ್ರಮಹಾಕಿ ನಟಿಸಿದ್ದಾರೆ.

ಆದಾಗ್ಯೂ, ನನಗಿಂತಲೂ ಹೆಚ್ಚು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರಿಗೆ ಕಿಯಾರಾ ಬಗ್ಗೆ ಹೆಚ್ಚಿನ ಕಾಳಜಿ ಇತ್ತು. ನಾವು ಸೆಟ್‌ನಲ್ಲಿ ಕೆಲಸ ಮಾಡುತ್ತಿರುವಾಗ ಅವರ ರಕ್ಷಣೆಗಾಗಿ ಬೌನ್ಸರ್ ಅಥವಾ ಬಾಡಿಗಾರ್ಡ್‌ಗಳಂತೆ ಇದ್ದು ಅವರನ್ನು ನೋಡಿಕೊಂಡೆವು ಎಂದು ಹೇಳಿದ್ದಾರೆ.

ನನ್ನಲ್ಲಿದ್ದ ಭಯ ರಹಿತ ನಟಿಯನ್ನು ಹೊರತಂದರು: ಕಿಯಾರಾ

ಈ ಕುರಿತು ಮಾತನಾಡಿದ ಕಿಯಾರಾ ಅಡ್ವಾಣಿ, ಟಾಕ್ಸಿಕ್ ಚಿತ್ರದಲ್ಲಿ ತಾವು ಪೋಷಿಸಿರುವ 'ನಾಡಿಯಾ' ಎಂಬ ಪಾತ್ರವು ತಮ್ಮ ನಟನಾ ವೃತ್ತಿಜೀವನದಲ್ಲಿಯೇ ಮೈಲಿಗಲ್ಲಾಗಿದೆ. ಆದಾಗ್ಯೂ, ಗೀತು ಮೋಹನ್‌ದಾಸ್ ಮತ್ತು ಯಶ್ ನನ್ನಲ್ಲಿ ನನಗೇ ತಿಳಿಯದಿದ್ದ ನಟನಾ ಸಾಮರ್ಥ್ಯವನ್ನು ಗುರುತಿಸಿ ನಂಬಿಕೆ ಇಟ್ಟಿದ್ದರು. ನಾಡಿಯಾ ಪಾತ್ರಕ್ಕಾಗಿ ನಾನು ತೆಗೆದುಕೊಂಡ ಆ ಧೈರ್ಯದ ಹೆಜ್ಜೆ ನನ್ನ ಅಭಿನಯದ ಕಲ್ಪನೆಯನ್ನೇ ಬದಲಾಯಿಸಿದೆ. ಇಂತಹ ಅದ್ಭುತ ವಾತಾವರಣ ಮತ್ತು ಅನುಭವ ನೀಡಿ ಅವರಿಬ್ಬರೂ ನನ್ನ ನಟನಾ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವು ನಟರ ಅಭಿನಯ ಮತ್ತು ಮೇಕಿಂಗ್‌ನಿಂದಾಗಿ ಈಗಾಗಲೇ ಸಿನಿರಂಗದಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಪ್ರೇಕ್ಷಕರು ತೆರೆಯ ಮೇಲೆ ಈ ಕಾವ್ಯಮಯ ವಿಸ್ಮಯವನ್ನು ನೋಡಲು ಕಾತರರಾಗಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net