ರಾವಣನಾಗಿ ರಾಕಿಂಗ್​ಸ್ಟಾರ್​ ಅಬ್ಬರ: 100 ಕೋಟಿ ಕ್ಲಬ್ ಸೇರಿದ ಮೊದಲ ಬಾಲಿವುಡ್ ಸಿನಿಮಾ; ಕರ್ನಾಟದಲ್ಲಿ ನೂತನ ದಾಖಲೆ ಬರೆದ 'ರಾಮಾಯಣ'! Ramayana Collection

Ramayana
ರಾಮಾಯಣ ಚಿತ್ರದಲ್ಲಿ ರಾಮನ ಮೌಲ್ಯಗಳಿಗಿಲ್ಲ ಬೆಲೆ, ರಾವಣನೇ ಹೀರೋ: ಟೀಕಾ ಪ್ರಹಾರ ನಡೆಸಿದ ಖ್ಯಾತ ನಟ
Published on: 

ಬೆಂಗಳೂರು: ನಿತೇಶ್​ ತಿವಾರಿ ನಿರ್ದೇಶನ ಹಾಗೂ ನಮಿತ್ ಮಲೋತ್ರಾ ನಿರ್ಮಾಣದ ಬಹು ನೀರಿಕ್ಷಿತ ಸಿನಿಮಾ ರಾಮಾಯಣ ಬಾಕ್ಸ್ ಆಫೀಸ್​ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ತೆರೆಕಂಡ ದಿನ ಹೇಳಿಕೊಳ್ಳುವಂತ ಕಲೆಕ್ಷನ್​ ಮಾಡಿದ್ದರೂ 8 ನೇ ದಿನಕ್ಕೆ ಸಾವಿರ ಕೋಟಿಗೂ ಮೀರಿದ ಗಳಿಕೆ ಮಾಡಿದ್ದು, ಕರ್ನಾಟಕದಲ್ಲಿ ಕೂಡ ಈ ಸಿನಿಮಾ ಅತ್ಯುತ್ತಮ ಗಳಿಕೆ ಕಾಣುತ್ತಿದೆ.

ನೂರು ಕೋಟಿ ನೀಡಿದ ಕರ್ನಾಟಕ!

ಈ ರಾಮಾಯಣ ಸಿನಿಮಾದಲ್ಲಿ ಕನ್ನಡದ ನಟ, ರಾಕಿಂಗ್​ಸ್ಟಾರ್​ ಯಶ್​ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾರಣ, ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಹಾಗೂ ನಂಬಿಕೆಯನನ್ನು ಪ್ರೇಕ್ಷಕ ಹೊಂದಿದ್ದನು.

ಆ ನಂಬಿಕೆಯನ್ನು ಯಶ್​ ತಮ್ಮ ಅಭಿನಯದ ಮೂಲಕ ಉಳಿಸಿಕೊಂಡಿದ್ದು, ಜನರು ಕೂಡ ಯಶ್​ ಅವರ ರಾವಣನ ಪಾತ್ರವನ್ನು ಮನಸಾರೆ ಮೆಚ್ಚಿಕೊಂಡ ಕಾರಣ ಸಿನಿಮಾ ಬಿಡುಗಡೆಯಾದ 9 ನೇ ದಿನಕ್ಕೆ 'ರಾಮಾಯಣ' ಕರ್ನಾಟಕದಲ್ಲಿ ಭರ್ತಿ 100 ಕೋಟಿಗೂ ಮೀರಿದ ಗಳಿಕೆ ಮಾಡಲು ಸಾಧ್ಯವಾಗಿದೆ. ಅದೇ ರೀತಿ ಕನ್ನಡ ಭಾಷೆಯಲ್ಲಿ ಡಬ್​ ಆದ ವರ್ಷನ್​ ಸುಮಾರು 50 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ.

ನೂತನ ದಾಖಲೆ ಬರೆದ ರಾಮಾಯಣ!

ಬಾಲಿವುಡ್​ನಲ್ಲಿ ತಯಾರಾದ ಸಿನಿಮಾವೊಂದು ಕರ್ನಾಟಕದಲ್ಲಿ ನೂರು ಕೋಟಿ ಗಳಿಕೆ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ರಾಮಾಯಣ ಪಾತ್ರವಾಗಿದೆ. ಈ ಮೈಲಿಗಲ್ಲನ್ನು ದಾಟುವಲ್ಲಿ ಕನ್ನಡಿಗ ರಾಕಿಂಗ್​ಸ್ಟಾರ್​ ಯಶ್​ ಪಾತ್ರ ಬಹುಮುಖ್ಯವಾಗಿದೆ ಎನ್ನುವುದನ್ನು ಅಲ್ಲಗೇಳಿಯುವಂತಿಲ್ಲ.

Also Read
"ಮೂರೇ ವಾರದಲ್ಲಿ ಟೆಹ್ರಾನ್ ವಶಪಡಿಸಿಕೊಳ್ಳುತ್ತೇವೆ": ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ವಾರ್ನಿಂಗ್! Donald Trump
Ramayana

ರಾಮಾಯಣ ಈ ದಾಖಲೆಯನ್ನು ಮಾಡುವ ಮೊದಲು ಶಾರುಖ್ ಖಾನ್​ ನಟನೆಯ ಜವಾನ್​ ಸಿನಿಮಾ 56 ಕೋಟಿ ಗಳಿಸಿ, ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್​ ಸಿನಿಮಾ ಎಂಬ ದಾಖಲೆ ನಿರ್ಮಿಸಿತ್ತು. ಈಗ ಈ ದಾಖಲೆಯನ್ನು ಕನ್ನಡಿಗ ಯಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ರಾಮಾಯಣ ಮುರಿದಿದೆ.

ರಾಮಾಯಣವನ್ನು ಮೆಚ್ಚಿಕೊಂಡ ಕರ್ನಾಟಕ!

ಕನ್ನಡ ಸಿನಿಮಾಗಳನ್ನು ಹೊರತು ಪಡಿಸಿ, ಕರ್ನಾಟಕದಲ್ಲಿ ಇತರ ಭಾಷೆಗಳ ಅದರಲ್ಲೂ ಬಾಲಿವುಡ್​ ಸಿನಿಮಾಗಳು ಅಷ್ಟೇನು ಗಳಿಕೆ ಮಾಡುತ್ತಿರಲಿಲ್ಲ. ರಾಮಾಯದಲ್ಲಿ ಪ್ರಭು ಶ್ರೀರಾಮನಾಗಿ ಕಾಣಿಕೊಂಡಿರುವ ರಣಬೀರ್​ ಕಪೂರ್​ ನಟನೆಯ ಅನಿಮಲ್​ ಸಿನಿಮಾದ ಕನ್ನಡ ವರ್ಷನ್​ ಕೇವಲ 64 ಲಕ್ಷ ಮಾತ್ರ ಗಳಿಸಿತ್ತು. ಅಷ್ಟೇ ಅಲ್ಲದೇ, ಬಾಲಿವುಡ್​ನ ಇತಿಹಾಸವನ್ನೇ ಬದಲಿಸಿದ ಧುರಂಧರ್​ ಸಿನಿಮಾದ ಕನ್ನಡ ವರ್ಷನ್​ ಕೇವಲ 3.87 ಕೋಟಿ ಮಾತ್ರ ಗಳಿಸಿಕೊಳ್ಳುವಲ್ಲಿ ಸಫಲವಾಗಿತ್ತು.

ಆದರೆ, ಈಗ ರಾಮಾಯಣದ ಕನ್ನಡ ವರ್ಷನ್​ ಭರ್ತಿ 50 ಕೋಟಿ ಗಳಿಸುವ ಮೂಲಕ ಬೇರೆ ಭಾಷೆಯ ಸಿನಿಮಾಗಳಲ್ಲಿ ಕನ್ನಡದ ನಟರಿಗೆ ಸೂಕ್ತ ಸಮ್ಮಾನ ದೊರೆತರೆ ಹಾಗೂ, ಡಬ್ಬಿಂಗ್​ ಅನ್ನು ಅರ್ಥಪೂರ್ಣವಾಗಿ ಮಾಡಿದರೆ ಕನ್ನಡ ಪ್ರೇಕ್ಷಕರು ಸಿನಿಮಾವನ್ನು ಅವರ ಭಾಷೆಯಲ್ಲಿಯೇ ನೋಡಿ, ಚಿತ್ರತಂಡಕ್ಕೆ ಕೋಟ್ಯಾಂತರ ರೂಪಾಯಿ ವ್ಯಾಪರ ನೀಡುತ್ತಾರೆಂದು ರಾಮಾಯಣ ಸಿನಿಮಾ ಸಾಭೀತು ಪಡಿಸಿದೆ, (ಏಜೆನ್ಸೀಸ್​).