'ಮಿಸ್ಟರ್ ಶೋ ಆಫ್​'ಎಂದಿದ್ದ ನಟಿ​​ ರಶ್ಮಿಕಾ ಮಂದಣ್ಣ; ಮೌನ ಮುರಿದ ರಾಕಿಂಗ್​ ಸ್ಟಾರ್​ ಯಶ್ ಹೇಳಿದ್ದಿಷ್ಟು..Yash

 Yash Breaks Silence On Rashmika Mandanna’s ‘Show-Off’ Comment
Yash Breaks Silence On Rashmika Mandanna’s ‘Show-Off’ Comment
Published on
 Yash Breaks Silence On Rashmika Mandanna’s ‘Show-Off’ Comment: ರಾಕಿಂಗ್​ ಸ್ಟಾರ್​ ಯಶ್​ ಅವರನ್ನು ಮಿಸ್ಟರ್​ ಶೋ ಆಫ್​ ಎಂದು ಕರೆದು ನಟಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು.  ಸಾರಿ ಕೇಳಲೇ ಬೇಕು ಎಂದು ಯಶ್ ಅಭಿಮಾನಿಗಳು ಪಟ್ಟು ಹಿಡಿದಿದ್ದರು. 2017ರಲ್ಲಿ ನಡೆದಿದ್ದ ಈ ಘಟನೆ ಬಗ್ಗೆ  ಆಪ್​ ಕಿ ಅದಾಲತ್​ ಶೋನಲ್ಲಿ  ಪ್ರತಿಕ್ರಿಯೆ ಕೊಟ್ಟಿದ್ದಾರೆ. 
ರಜತ್​ ಶರ್ಮಾ ಅವರ ಸಂದರ್ಶನದಲ್ಲಿ  ರಶ್ಮಿಕಾ ಮಂದಣ್ಣ ಅವರು ನಿಮ್ಮ ಬಗ್ಗೆ ಶೋ ಆಫ್​ ಎಂದು ಹೇಳಿಕೆ ಕೊಟ್ಟಿದ್ದರು. ಆನಂತರ ನಿಮ್ಮ ಅಭಿಮಾನಿಗಳು ಅವರ ವಿರುದ್ಧ ಸಾಕಷ್ಟು ಟೀಕೆ ಮಾಡಿ, ಟ್ರೋಲ್​ ಮಾಡಿದ್ದರು ಆ ಬಗ್ಗೆ ನೀವು ಏನು ಹೇಳಲು ಬಯಸುತ್ತೀರಾ ಎಂದು ಪ್ರಶ್ನೆ ಮಾಡಿದರು, ಆ ಬಗ್ಗೆ ಯಶ್​ ಹೇಳಿದ್ದು ಹೀಗೆ,

ಮೆಚ್ಯುರ್ಡ್​ ಆಗಿ ಉತ್ತರಿಸಿದ ಯಶ್, ಫ್ಯಾನ್ಸ್​ ಫಿದಾ

'ನನಗೆ ಸಂಪೂರ್ಣವಾಗಿ ಆ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದರೋ  ಎನ್ನುವುದು ನನಗೆ ಗೊತ್ತಿಲ್ಲ. ಆ ಸಮಯದಲ್ಲಿ ಸಿನಿ ಲೋಕಕ್ಕೆ ಅವರು ಹೊಸ ಪರಿಚಯ' ಎಂದು ಮೆಚ್ಯುರ್ಡ್​ ಆಗಿ ಟಾಕ್ಸಿಕ್​ ಹೀರೋ ಯಶ್​ ಉತ್ತರಿಸಿದ್ದಾರೆ.
ಮುಂದುವರೆದು, 'ಕೆಲವೊಂದು ಸಂದರ್ಶನದಲ್ಲಿ ಕೆಲವರು, ಆಪ್ಶನ್​ಗಳನ್ನು ನೀಡುತ್ತಾರೆ. ಮೂರ್ನಾಲ್ಕು ಪದ ಕೊಟ್ಟು ಇದು ಯಾರಿಗೆ ಸೂಟ್ ಆಗುತ್ತದೆ ಎಂದು ಕೇಳುತ್ತಾರೆ.  ಹೀಗಾಗಿ ಅವರ  ಶೋ ಆಪ್​ ಎನ್ನುವ ಪದ ನನಗೆ ಕೊಟ್ಟಿರಬಹುದಷ್ಟೇ. ಆ ಸಂದರ್ಭದಲ್ಲಿ ಹಲವಾರು ನಿರ್ದೇಶಕರು ಅಸಮಾಧಾನಗೊಂಡಿದ್ದರು. ಅವರ ಅಭಿಪ್ರಾಯ ನನ್ನ ವ್ಯಕ್ತಿತ್ವವಾಗೋದಿಲ್ಲ' ಎಂದು ಯಶ್​ ಹೇಳಿದ್ದಾರೆ.

ಅಭಿಪ್ರಾಯ ಹೇಳೋದ್ರಲ್ಲಿ ತಪ್ಪೇನಿದೆ

'ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ, ಅದು ಪರವಾಗಿಲ್ಲ; ಅದು ಯಾರದ್ದೋ ಅಭಿಪ್ರಾಯ ಅಷ್ಟೇ.  ಯಾರಾದರೂ ನಿಮ್ಮ ಬಗ್ಗೆ ಅಭಿಪ್ರಾಯ ಹೇಳಬಹುದು. ಆದರೆ ಯಾರದ್ದೋ ಅಭಿಪ್ರಾಯವು ನನ್ನ ವ್ಯಕ್ತಿತ್ವವಾಗಲು ಸಾಧ್ಯವಿಲ್ಲ. ನಾನು ಏನು ಎನ್ನುವುದು ಯಾರ  ದೃಷ್ಟಿಕೋನದಿಂದ ಬದಲಾಗುವುದಿಲ್ಲ. ನಾನು ಹೇಗಿದ್ದೇನೋ ಹಾಗೇ ಇರುತ್ತೇನೆ' ಎಂದು ಸ್ಪಷ್ಟನೆ ಕೊಟ್ಟರು.

ಇಂಥವ್ರು ನನ್ನ ಅಭಿಮಾನಿಗಳೇ ಅಲ್ಲ

ಮುಂದುವರೆ,  'ಅಭಿಪ್ರಾಯಗಳನ್ನು ಹಂಚಿಕೊಳ್ಳುವವರ ವಿರುದ್ಧ ಟೀಕೆ ಮಾಡಿದರೆ ಅಥವಾ ಅವರನ್ನು ಬೈದರೆ ಅವರೆಂದಿಗೂ ನನ್ನ ಅಭಿಮಾನಿಗಳಾಗಲು ಸಾಧ್ಯವಿಲ್ಲ.  ನೀವು ಮತ್ತೊಬ್ಬ ನಟನನ್ನು ಗೌರವಿಸದಿದ್ದರೆ, ಮರ್ಯಾದೆ ಕೊಡದಿದ್ದರೆ ನೀವೆಂದಿಗೂ ನನ್ನ ಅಭಿಮಾನಿಯಲ್ಲ.  ಹಳೆಯ ವಿಚಾರಗಳನ್ನೇ ಇಟ್ಟುಕೊಂಡು ಅವರನ್ನು ದೂಷಿಸುತ್ತಾ ಕೂರುವ ಬದಲು ಮುನ್ನುಗ್ಗಲು ದಾರಿ ಮಾಡಿಕೊಳ್ಳಬೇಕು. ಹಲವರು ನಮ್ಮ ಬಗ್ಗೆ ನಾನಾ ರೀತಿ ಕಾಮೆಂಟ್ ಮಾಡಬಹುದು ಆದರೆ ಅವರ ಅಭಿಪ್ರಾಯ ಮತ್ತು ಕಾಮೆಂಟ್​ಗಳು ಎಂದಿಗೂ ನಮ್ಮ ವ್ಯಕ್ತಿತ್ವವಾಗಲು ಸಾಧ್ಯವಿಲ್ಲ' ಎಂದು ಯಶ್ ಹೇಳಿದರು.

ನೆಟ್ಟಿಗರು ಏನಂದ್ರು?

ಫಿಲ್ಮಿ ದುನಿಯಾ ಎಂಬ ಎಕ್ಸ್​ ಬಳಕೆದಾರರೊಬ್ಬರು ಯಶ್​ ಸಂದರ್ಶನದ ಪೋಸ್ಟ್ ಹಂಚಿಕೊಂಡು ಹೀಗೆ ಬರೆದುಕೊಂಡಿದ್ದಾರೆ. ರಶ್ಮಿಕಾ ಅವರು ನಿಮ್ಮನ್ನು ಶೋ ಆಫ್ ಎಂದಿದ್ದಕ್ಕೆ ನಿಮ್ಮ ಫ್ಯಾನ್ಸ್ ಅವರಿಗೆ ಸಾಕಷ್ಟು ಟೀಕೆ ಮಾಡಿದ್ದರು ಎಂದು ರಜತ್​ ಶರ್ಮಾ ಹೇಳಿದ್ದಕ್ಕೆ ಯಶ್​ ಬೇರೊಬ್ಬರನ್ನು ಗೌರವಿಸದೇ ಇದ್ದರೆ ಅವರೆಂದಿಗೂ ನನ್ನ ಅಭಿಮಾನಿಗಳಲ್ಲ ಎಂದು ನಟ ಹೇಳುತ್ತಿದ್ದಾರೆ ಎಂಥಾ ಒಳ್ಳೆಯ ಮನುಷ್ಯ ಎಂದು ಬರೆದುಕೊಂಡಿದ್ದಾರೆ.
ಕೆಲ ರಶ್ಮಿಕಾ ಅಭಿಮಾನಿಗಳು ಸಹ ಕಾಮೆಂಟ್ ಮಾಡಿದ್ದು, ಈ ಗೊಂದಲದ ವಿಚಾರಗಳು ಟ್ರೋಲ್​ ಆಗುತ್ತಿದ್ದಂತೆ ನಟಿ ರಶ್ಮಿಕಾ ಅವರು ಸ್ಪಷ್ಟನೆ ಕೊಟ್ಟಿದ್ದರು. ಯಶ್​ ಎಷ್ಟು ಶ್ರಮ ಜೀವಿ ಹಾಗೂ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿ ಸಾರಿ ಕೇಳಿದ್ದರು ಎಂದು ರಶ್ಮಿಕಾ ಫ್ಯಾನ್ಸ್​​ ಅವರ ಪರ ನಿಂತಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net