ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್ ಆಕ್ಷನ್ ಕಟ್‌ನ 'ಸಿಟಿ ಲೈಟ್ಸ್‌' ಚಿತ್ರ ರಿಲೀಸ್​ಗೆ ಡೇಟ್​ ಫಿಕ್ಸ್ ..City Lights

City Lights set for September release
City Lights set for September release
Published on

City Lights set for September release:

ಕೊಂಚ ನಟನೆಗೆ ಬ್ರೇಕ್ ​ ಕೊಟ್ಟು ಸಿಟಿಲೈಟ್ಸ್​​ ನಿರ್ದೇಶನಕ್ಕೆ ಇಳಿದ್ದಿದ್ದ ಸ್ಯಾಂಡಲ್​ವುಡ್​ನ ಯಶಸ್ವಿ ನಾಯಕ ದುನಿಯಾ ವಿಜಯ್,​ ಸದ್ಯ ಸಿನಿಮಾ ರಿಲೀಸ್​ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವರ್ಷ ಸೆಪ್ಟೆಂಬರ್​ 18ರಂದು ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟರ್​ ಹಂಚಿಕೊಂಡಿದ್ದಾರೆ.

ವಿಜಯ್​ ರಾಘವೇಂದ್ರ ಸಿನಿಮಾ ಕಥಾ ನಾಯಕನಾಗಿದ್ರೆ, ದುನಿಯಾ ವಿಜಯ್​ ಅವರ ಮಗಳು ಮೋನಿಷಾ ನಟಿಯಾಗಿ ಮಿಂಚಲಿದ್ದಾರೆ. ಈ ಹಿಂದೆ ಲ್ಯಾಂಡ್​ಲಾರ್ಡ್​ ಸಿನಿಮಾದಲ್ಲಿ ರಿತನ್ಯಾ ನಟಿಸಿದ್ದರು. ಈಗ ಸಿಟಿ ಲೈಟ್ಸ್​ ಸಿನಿಮಾ ಮೂಲಕ ಮತ್ತೊಬ್ಬ ಪುತ್ರಿಯನ್ನು ಸಿನಿಮಾ ರಂಗಕ್ಕೆ ದುನಿಯಾ ವಿಜಯ್​ ಪರಿಚಯಿಸಿಕೊಡುತ್ತಿದ್ದಾರೆ.

ಸಿನಿಮಾ ಬಗ್ಗೆ

ಅಚಾನಕ್ಕಾಗಿ ಸಿಟಿಗೆ ಕಾಲಿಡುವ ಇಬ್ಬರು...ನಗರದ ಜೀವನಕ್ಕೆ ಒಗ್ಗಿಕೊಳ್ಳುವುದು ಹೇಗೆ. ಯಾವೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ. ಆ ಮಧ್ಯೆ ಜಿನುಗುವ ಪ್ರೀತಿ ಸುತ್ತ ಈ ಸಿನಿಮಾದ ಕತೆ ಸುತ್ತುತ್ತದೆ ಎನ್ನಲಾಗಿದೆ.

ಹಾಡುಗಳು ಹಿಟ್​​

ಈಗಾಗಲೇ ಸಂಚಿತ್​ ಹೆಗ್ಡೆ ಅವರ ದನಿಯಲ್ಲಿ ಮೂಡಿಬಂದಿರುವ ಕಂದಮ್ಮ, ಕಂದಮ್ಮ ಹಾಡು ಸಾಕಷ್ಟು ಹೆಸರು ಮಾಡಿದೆ. ಇನ್ನು ಭಾವ ಭಾವ ಹಾಡಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟು ಈ ಸಿನಿಮಾದಲ್ಲಿ ಐದಾರು ಹಾಡುಗಳು ಇದ್ದು, ಶೀಘ್ರದಲ್ಲೇ ಟ್ರೇಲರ್​ ರಿಲೀಸ್ ಮಾಡಲಾಗುತ್ತದೆ ಎಂದು ಸಿನಿಮಾ ತಂಡ ಹೇಳಿದೆ.

ಸೆ.18 ರಂದು ಸಿಟಿಲೈಟ್ಸ್

ಸಿಟಿ ಲೈಟ್ಸ್ ಚಿತ್ರವು ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಬಿಡುಗಡೆ ಎಂದು ಕೆವಿಎನ್​ ಪ್ರೊಡಕ್ಷನ್​ ಹಾಗೂ ನಟ ವಿಜಯ್​ ಅವರು ಪೋಸ್ಟರ್​ ಹಂಚಿಕೊಂಡಿದ್ದಾರೆ. ಸಿನಿಮಾಗಾಗಿ ಕಾಯುತ್ತಿದ್ದೇನೆ. ಚರಣ್​ ರಾಜ್​ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಈ ಸಿನಿಮಾವನ್ನು ನೋಡಲೇಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಮೋನಿಷಾ ಹೇಳಿದ್ದೇನು?

ನಾನು ಸಿನಿಮಾದಲ್ಲಿ ನಟಿಸಲು ಲಂಡನ್​ನಲ್ಲಿ ತರಬೇತಿ ಪಡೆದುಕೊಂಡೆ. ನನ್ನ ತಂದೆ ನನ್ನನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಆ ಪಾತ್ರಕ್ಕೆ ಬೇಕಾದ ಜೀವಂತಿಕೆ ಕೊಟ್ಟಿದ್ದೇನೆ. ಶ್ರಮ ಹಾಕಿದ್ದೇನೆ ಎಂದು ಮೋನಿಷಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.

ನಟನೆಗೆ ಮಾತ್ರವಲ್ಲ ನಿರ್ದೇಶನಕ್ಕೂ ಸೈ

ದುನಿಯಾ ವಿಜಯ್​ ಅವರು ನಟನೆಗೆ ಮಾತ್ರವಲ್ಲ ನಿರ್ದೇಶನಕ್ಕೂ ಸೈ ಎನಿಸಿಕೊಂಡಿದ್ದಾರೆ. 2021ರಲ್ಲಿ ಆಕ್ಷನ್​ ಥ್ರಿಲ್ಲರ್​ ಸಿನಿಮಾ ಸಲಗ ನಿರ್ದೇಶಿಸಿ ನಟಿಸಿದ್ದರು. ಇದರಲ್ಲಿ ಸಂಜನಾ ಆನಂದ್​, ಡಾಲಿ ಧನಂಜಯ್​ ಹಾಗೂ ನಾಗಭೂಷಣ್​ ಅವರು ನಟಿಸಿದ್ದರು. 2024ರಲ್ಲಿ ಭೀಮಾ ಸಿನಿಮಾ ನಿರ್ದೇಶಿಸಿ ನಟಿಸಿದ್ದರು. ದುನಿಯಾ ವಿಜಯ್, ಅಚ್ಯುತ್ ಕುಮಾರ್ ಮತ್ತು ಪ್ರಿಯಾ ನಾಗರಾಜ್ ನಟಿಸಿದ್ದಾರೆ. ಬೆಂಗಳೂರಿನ ರೌಡಿಸಮ್​ ಹಾಗೂ ಡ್ರಗ್​ ಮಾಫಿಯಾದ ಬಗ್ಗೆ ಕತೆ ಸುತ್ತುತ್ತದೆ.

ನಟಿ ಉಮಾಶ್ರಿ ನಟನೆ

ಸಿನಿಮಾ ಮತ್ತೊಂದು ಕೇಂದ್ರ ಬಿಂದು ಎಂದರೆ, ನಟಿ ಉಮಾಶ್ರೀ ಹಾಗೂ ಚರಣ್​ ರಾಜ್​ ಸಂಗೀತ. ಈ ಸಿನಿಮಾದಲ್ಲಿ ಸಾದಾ ಸೀದಾ ಹುಡುಗ ಹಾಗೂ ಮಾಸ್​ ಲುಕ್​ನಲ್ಲಿ ವಿನಯ್​ ರಾಜ್​ಕುಮಾರ್​​ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಾಡು, ದುನಿಯಾ ವಿಜಯ್​ ಅವರ ನಿರ್ದೇಶನದ ಪರಿಯು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಹೆಚ್ಚಿಸುತ್ತಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net