'ಟಾಕ್ಸಿಕ್’ಗೆ ನೆಗೆಟಿವ್ ರಿವ್ಯೂ ಬರೆದವರಿಗೆ ಲೀಗಲ್ ನೋಟಿಸ್: ಋಣಾತ್ಮಕ ವಿಮರ್ಶೆಗೆ ಬ್ರೇಕ್​ ಹಾಕಲು ಮುಂದಾದ ಸಿನಿತಂಡ! Toxic Legal Notice

'ಟಾಕ್ಸಿಕ್' ಸಿನಿಮಾಗೆ ನೆಗೆಟಿವ್ ರಿವ್ಯೂ ಬರೆದವರಿಗೆ ಲೀಗಲ್ ನೋಟಿಸ್
'ಟಾಕ್ಸಿಕ್' ಸಿನಿಮಾಗೆ ನೆಗೆಟಿವ್ ರಿವ್ಯೂ ಬರೆದವರಿಗೆ ಲೀಗಲ್ ನೋಟಿಸ್
Published on

ಪ್ರಮುಖ ಮುಖ್ಯಾಂಶಗಳು

  • ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಗೆ ನೆಗೆಟಿವ್ ರಿವ್ಯೂ
  • ನೃಣಾತ್ಮಕ ವಿಮರ್ಶೆಗಳಿಗೆ ತಡೆ ಹಾಕಲು ಚಿತ್ರತಂಡದ
  • 'ಟಾಕ್ಸಿಕ್' ಸಿನಿಮಾಗೆ ನೆಗೆಟಿವ್ ರಿವ್ಯೂ ಬರೆದವರಿಗೆ ಲೀಗಲ್ ನೋಟಿಸ್
ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ, ಗೀತು ಮೋಹನ್​ ದಾಸ್​ ನಿರ್ದೇಶನದ ಬಹು ನೀರಿಕ್ಷಿತ ಸಿನಿಮಾ ಟಾಕ್ಸಿಕ್​: ಎ ಫೇರಿ ಟೇಲ್​ ಫಾರ್​​ ಗ್ರೋನಪ್ಸ್​ ಸಿನಿಮಾ ಆಗಸ್ಟ್​​ 26 ರಂದು ತೆರೆಕಂಡಿದೆ.
ಆದರೆ, ಈ ಸಿನಿಮಾ ಬಿಡುಗಡೆಯಾದ ದಿನದಿಂದ ಸೋಷಿಯಲ್​ ಮೀಡಿಯಾಗಳಲ್ಲಿ, ಟ್ರೋಲ್​ ಪೇಜ್​ಗಳಲ್ಲಿ ಹಾಗೂ ಯೂಟ್ಯೂಬ್​ಗಳಲ್ಲಿ ಋಣಾತ್ಮಕ ವಿಮರ್ಶೆ ಕೇಳಿ ಬರುತ್ತಿರುವ ಹಿನ್ನಲೆ ಇದಕ್ಕೆ ಮೂಗುದಾರ (Toxic Legal Notice) ಹಾಕಲು ಟಾಕ್ಸಿಕ್​ ತಂಡ ಮುಂದಾಗಿದೆ.

ನೆಗೆಟಿವ್​ ರಿವ್ಯೂ ಹಾಕಿದವರಿಗೆ ನೋಟಿಸ್​!

ಟಾಕ್ಸಿಕ್​ ಸಿನಿಮಾ ಒಂದು 'ಎ' ರೇಟೆಡ್, ವಯಸ್ಕರು ಮಾತ್ರ ವೀಕ್ಷಿಸಬಹುದಾದ ಸಿನಿಮಾವಾಗಿದ್ದು, ಇದರಲ್ಲಿ ಅ್ಯಕ್ಷನ್​​ ಜೊತೆಗೆ ಮಡಿವಂತರಿಗೆ ಮುಜುಗರ ತರಿಸುವ ದೃಶ್ಯಗಳು ಇರುವ ಕಾರಣ ಈ ಸಿನಿಮಾವನ್ನು ಟ್ರೋಲ್​ ಮಾಡಲಾಗುತ್ತದೆ.
ಆದರೆ, ಸಿನಿಮಾದಲ್ಲಿರುವ ದೃಶ್ಯಗಳು ಬೇರೆ ಸಿನಿಮಾದಲ್ಲಿ ಕೂಡ ಇದ್ದವು, ಆದರೆ ಟಾಕ್ಸಿಕ್​ ಸಿನಿಮಾವನ್ನು ಬೇಕಂತಲೇ ಗುರಿಯಾಗಿಸಿಕೊಂಡು ನೆಗೆಟಿವ್​ ರಿವ್ಯೂ ಕೊಡುವ ಮೂಲಕ ಸಿನಿಮಾ ಯಶಸ್ಸನ್ನು ಕಾಣದಂತೆ ಮಾಡಲಾಗುತ್ತಿದೆ ಎಂದು ಸಿನಿಮಾ ತಂಡ, ಋಣಾತ್ಮಕ ವಿಮರ್ಶೆ ಮಾಡಿದವರಿಗೆ ಲೀಗಲ್​ ನೋಟಿಸ್​ ನೀಡಲು ಪ್ರಾರಂಭಿಸಿದೆ. 

ಯೂಟ್ಯೂಬರ್​ಗಳಿಗೆ ಲೀಗಲ್​ ನೋಟಿಸ್​!

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೂರಜ್​ ಕುಮಾರ್ ಎಂಬ ಯೂಟ್ಯೂಬರ್​, ತಮ್ಮ ಟಾಕ್ಸಿಕ್​ ಸಿನಿಮಾ ವಿಮರ್ಶೆಗೆ ಸಿನಿ ತಂಡದಿಂದ ಲೀಗಲ್​ ನೋಟಿಸ್​ ಬಂದಿದೆ ಎಂದು ಸ್ಕ್ರೀನ್​ಶಾಟ್​ವೊಂದನ್ನು ಹಂಚಿಕೊಂಡಿದ್ದಾರೆ. 

ಬೆಂಗಳೂರು ಮೂಲದ ಐಪ್ಲೆಕ್ಸ್​ ಸಾಫ್ಟ್​ವೇರ್​ ಪ್ರೈವೆಟ್​ ಲಿಮಿಟೆಡ್​ ಸಂಸ್ಥೆ, ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್​​ ಪ್ರೊಡಕ್ಷನ್​ ಹಾಗೂ ಮಾನ್​ಸ್ಟರ್​​ ಮೈಂಡ್​​ ಕ್ರಿಯೇಷನ್ಸ್​​ ಪರವಾಗಿ ಈ ಲೀಗಲ್​ ನೋಟಿಸ್​ ನೀಡಿದೆ. 

ನಮ್ಮ ಕಕ್ಷಿದಾರರ ಹಕ್ಕುಸ್ವಾಮ್ಯ ಹೊಂದಿರುವ ಟಾಕ್ಸಿಕ್​ ಸಿನಿಮಾ ಬಗ್ಗೆ ನೀವು ಡಿಜಿಟಲ್​ ಕಂಟೆಂಟ್​ಅನ್ನು ಹಂಚಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಈ ಕುರಿತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಇ-ಮೇಲ್​ನಲ್ಲಿ ತಿಳಿಸಲಾಗಿದೆ. 

ಜುಲೈ 13 ರಿಂದ ಸೆಪ್ಟೆಂಬರ್​ 26 ರ ವರೆಗೆ ಕಾಪಿರೈಟ್​ ಉಲ್ಲಂಘನೆ, ನಿಂದಾತ್ಮಕ ವಿಮರ್ಶೆ ಹಾಗೂ ಸುಳ್ಳು ಸುದ್ದಿ ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿನಿಮಾ ತಂಡ ನ್ಯಾಯಾಲಯದ ಅನುಮತಿ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಈ ಲೀಗಲ್​ ನೋಟಿಸ್​ ಪಡೆದಿರುವ ಸೂರಜ್​ ಕುಮಾರ್​, ನನಗೆ ಲೀಗಲ್​ ನೋಟಿಸ್​ ನೀಡಿದ್ದಕ್ಕಾಗಿ ಟಾಕ್ಸಿಕ್​ ತಂಡಕ್ಕೆ ಧನ್ಯವಾದ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.


ಮೊದಲ ದಿನವೇ 100 ಕೋಟಿ ಕ್ಲಬ್​ ಸೇರಿದ ಟಾಕ್ಸಿಕ್!

ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ದೊರೆಯುತ್ತಿದ್ದರೂ ಸಿನಿಮಾ ಮಾತ್ರ ಮೊದಲ ದಿನವೇ ಪ್ರಪಂಚದಾದ್ಯಂತ ಸುಮಾರು 140 ಕೋಟಿ ಕಲೆಕ್ಷನ್​ ಮಾಡಿದೆ. ಭಾರತದಲ್ಲಿ ಸುಮಾರು 120 ಕೋಟಿ ಗಳಿಸಿದರೆ, ವಿದೇಶಗಳಿಂದ ಸುಮಾರು 20 ಕೋಟಿಯನ್ನು ಬಾಚಿಕೊಂಡಿದೆ. ಇನ್ನು ಶನಿವಾರ ಹಾಗೂ ಭಾನುವಾರದ ಗಳಿಕೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net