ಮಿದುಳು ಇದ್ದವರಿಗೆ ಮಾತ್ರ ಟಾಕ್ಸಿಕ್​ ಸಿನಿಮಾ ಇಷ್ಟವಾಗುತ್ತೆ: ಮಲಯಾಳಂ ನಟಿಯ ಬೋಲ್ಡ್​ ಹೇಳಿಕೆ ವೈರಲ್​...Toxic

ಮಿದುಳು ಇದ್ದವರಿಗೆ ಮಾತ್ರ ಟಾಕ್ಸಿಕ್​ ಸಿನಿಮಾ ಇಷ್ಟವಾಗುತ್ತೆ: ಮಲಯಾಳಂ ನಟಿಯ ಬೋಲ್ಡ್​ ಹೇಳಿಕೆ ವೈರಲ್​...Toxic
ಮಿದುಳು ಇದ್ದವರಿಗೆ ಮಾತ್ರ ಟಾಕ್ಸಿಕ್​ ಸಿನಿಮಾ ಇಷ್ಟವಾಗುತ್ತೆ: ಮಲಯಾಳಂ ನಟಿಯ ಬೋಲ್ಡ್​ ಹೇಳಿಕೆ ವೈರಲ್​...Toxic
Published on

ಪ್ರಮುಖ ಮುಖ್ಯಾಂಶಗಳು

  • ಯಶ್ ನಟನೆಯ ಟಾಕ್ಸಿಕ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ
  • ಮಲಯಾಳಂ ನಟಿ ಹರ್ಷಿತಾ ಪಿಶಾರೊಡಿಯಿಂದ ಟೀಕಾಕಾರರಿಗೆ ಖಡಕ್ ತಿರುಗೇಟು
  • ಬುದ್ಧಿವಂತರಿಗೆ ಮಾತ್ರ ಈ ಸಿನಿಮಾ ಅರ್ಥವಾಗುತ್ತದೆ ಎಂದ ಹರ್ಷಿತಾ
  • ಮೂರು ಸೆಕೆಂಡುಗಳ ರೀಲ್ಸ್ ನೋಡಿ ಸಿನಿಮಾವನ್ನು ಜಡ್ಜ್ ಮಾಡಬೇಡಿ ಎಂದ ನಟಿ
Toxic : ರಾಕಿಂಗ್​ ಸ್ಟಾರ್​ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಆಗಸ್ಟ್​​ 26ರಂದು ಬಿಡುಗಡೆಯಾಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಿನಿಮಾದಲ್ಲಿ ಅತಿಯಾದ ಹಿಂಸಾಚಾರ ಮತ್ತು ಅಶ್ಲೀಲತೆ ಇದೆ. ಅಲ್ಲದೆ, ಕಥೆ ಕೂಡ ಇಲ್ಲ ಎಂದು ಕೆಲವರು ಹೇಳಿದರೆ, ಬುದ್ಧಿವಂತರಿಗೆ ಮಾತ್ರ ಈ ಸಿನಿಮಾ ಎಂದು ಕೆಲವರು ವಾದಿಸುತ್ತಿದ್ದಾರೆ. ಈ ಚಿತ್ರದ ವಿರುದ್ಧ ನೆಗೆಟಿವ್ ಕ್ಯಾಂಪೇನ್‌ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಮಲಯಾಳಂ ನಟಿ ಹರ್ಷಿತಾ ಪಿಶಾರೊಡಿ ಅವರು ಖಡಕ್ ತಿರುಗೇಟು ನೀಡಿದ್ದಾರೆ. ಈ ಸಿನಿಮಾ ಮಿದುಳು ಇದ್ದವರಿಗೆ ಅಥವಾ ಪ್ರಬುದ್ಧರ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಂದಹಾಗೆ, ಹರ್ಷಿತಾ ಅವರು 'ಮೂನ್‌ವಾಕ್' ಹಾಗೂ 'ಡೊಮಿನಿಕ್ ಅಂಡ್ ದಿ ಲೇಡೀಸ್ ಪರ್ಸ್' ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ತಾಯಿ ಜತೆ ಟಾಕ್ಸಿಕ್​ ಸಿನಿಮಾ ವೀಕ್ಷಣೆ ಮಾಡಿರುವ ಹರ್ಷಿತಾ, ಸಿನಿಮಾ ಬಗ್ಗೆ ಹರಡುತ್ತಿರುವ ನೆಗೆಟಿವ್ ಪ್ರಚಾರಗಳನ್ನು ಮುಕ್ತವಾಗಿ ಖಂಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮೂಲಕ ಮಾತನಾಡಿರುವ ಹರ್ಷಿತಾ, ನಾನು ನನ್ನ ತಾಯಿಯೊಂದಿಗೆ ಈ ಸಿನಿಮಾ ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ಸಿನಿಮಾ ಮುಗಿದ ಬಳಿಕ ನಮ್ಮ ತಾಯಿ ಚಿತ್ರವನ್ನು ಬಹಳವಾಗಿ ಮೆಚ್ಚಿಕೊಂಡರು. ಜ್ಞಾನ ಮತ್ತು ಬೌದ್ಧಿಕ ಮಟ್ಟವಿರುವ ಪ್ರೇಕ್ಷಕರಿಗೆ ಮಾತ್ರ ಈ ಚಿತ್ರದ ಆಳ ಅರ್ಥವಾಗುತ್ತದೆ ಎಂದಿರುವ ಹರ್ಷಿತಾ, ಸಿನಿಮಾವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲದವರೇ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ನಿರರ್ಥಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚಿತ್ರದಲ್ಲಿ ಸ್ತ್ರೀ ಮತ್ತು ಪುರುಷ ಶಕ್ತಿಯ ಅತಿ ಸುಂದರವಾದ ಸಮತೋಲನವಿದೆಯೇ ಹೊರತು ಯಾವುದೇ ಅಸಭ್ಯತೆಯಿಲ್ಲ ಎಂದು ಮಹಿಳಾ ನಟಿಯಾಗಿ ಹರ್ಷಿತಾ ಸ್ಪಷ್ಟಪಡಿಸಿದ್ದಾರೆ. ಸಿನಿಮಾವು ಪ್ರೌಢ ಮನಸುಗಳಿಗಾಗಿಯೇ ರೂಪಿಸಲ್ಪಟ್ಟಿದೆಯೇ ಹೊರತು ಭಾವನೆಗಳ ಅರಿವಿಲ್ಲದವರಿಗಲ್ಲ ಎಂದಿರುವ ಹರ್ಷಿಕಾ, ಕೇವಲ ಮೂರು ಸೆಕೆಂಡುಗಳ ರೀಲ್ಸ್ ನೋಡಿ ಇಡೀ ಸಿನಿಮಾವನ್ನು ಜಡ್ಜ್ ಮಾಡುವವರ ಬಗ್ಗೆ ತಮಗೆ ಅಸಹ್ಯ ಹುಟ್ಟುತ್ತದೆ ಎಂದು ತೀವ್ರವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಚಿತ್ರದಲ್ಲಿನ ಲಿಂಗ ತಾರತಮ್ಯ ಅಥವಾ ಅಶ್ಲೀಲ ದೃಶ್ಯಗಳೆಂದು ಟೀಕಿಸುವವರು ಮೊದಲು '365 ಡೇಸ್' ಅಥವಾ '50 ಶೇಡ್ಸ್' ನಂತಹ ಸಿನಿಮಾಗಳನ್ನು ನೋಡಲಿ ಎಂದು ಹರ್ಷಿತಾ ಸವಾಲು ಹಾಕಿದ್ದಾರೆ. ಚಿತ್ರತಂಡವೇ ಇದು ವಯಸ್ಕರಿಗಾಗಿ ನಿರ್ಮಿಸಿದ ಸಿನಿಮಾ ಎಂದು ಸ್ಪಷ್ಟಪಡಿಸಿದ್ದರೂ, ಅದನ್ನು ಗ್ರಹಿಸದೆ ಸುಮ್ಮನೆ ಕೆಟ್ಟದಾಗಿ ಮಾತನಾಡುವವರನ್ನು 'ಜ್ಞಾನವಿಲ್ಲದವರು' ಎಂದು ಜರೆದಿದ್ದು, ಸದ್ಯ ಇವರ ಈ ದಿಟ್ಟ ಹೇಳಿಕೆ ಸಿನಿಮಾ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net