‘ಟಾಕ್ಸಿಕ್’ನಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಇಂತಹ ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ತಮ್ಮ ಪಾತ್ರದ ಸ್ಕ್ರೀನ್ ಸ್ಪೇಸ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಅಂತ ನಯನತಾರಾ ಹೇಳಿದ್ದಾರೆ. ‘ಸೋಲೋ ಸಿನಿಮಾ, ಮಲ್ಟಿಸ್ಟಾರ್ ಸಿನಿಮಾ ಅಂತ ನಾನು ನೋಡಲ್ಲ. ನನ್ನ ಪಾತ್ರಕ್ಕೆ ಕಥೆಯಲ್ಲಿ ಏನಾದ್ರೂ ಅರ್ಥಪೂರ್ಣ ಕೊಡುಗೆ ಇದೆಯಾ ಅನ್ನೋದು ನನಗೆ ಮುಖ್ಯ. ಕಥೆ ಇಷ್ಟ ಆಯ್ತು, ಪಾತ್ರಕ್ಕೆ ಉದ್ದೇಶ ಇದೆ ಅನ್ನಿಸಿದ್ರೆ ಸಾಕು’ ಅನ್ನೋದು ನಯನತಾರಾ ಮಾತು.