Picture Review - ಕೋಸ್ಟಲ್​ವುಡ್​ ದಿಗ್ಗಜರ ಕಾಮಿಡಿ ಡ್ರಾಮಾ

Picture Review
Picture Review
Published on
Picture Review -
ಚಿತ್ರ: ಪಿಚ್ಚರ್​
ನಿರ್ದೇಶನ: ಸಂದೀಪ್​ ಬೆದ್ರ
ನಿರ್ಮಾಣ: ಶಿಲ್ಪಾ ಗಣೇಶ್​
ತಾರಾಗಣ: ನಿತ್ಯಪ್ರಕಾಶ್​, ಅಮೃತಾ, ನವೀನ್​ ಪಡೀಲ್​, ದೇವದಾಸ್​ ಕಾಪಿಕಾಡ್​, ಅರವಿಂದ್​ ಬೋಳಾರ್​, ಪುಷ್ಪರಾಜ್​, ಭೋಜರಾಜ್​ ವಾಮಂಜೂರ್​ ಮತ್ತಿತರರು
ನಟ ಗಣೇಶ್​ ಪತ್ನಿ ಶಿಲ್ಪಾ ಚೊಚ್ಚಲ ಬಾರಿಗೆ ನಿರ್ಮಾಣಕ್ಕಿಳಿದಿರುವ ಕಾರಣ "ಪಿಚ್ಚರ್​' ಬಗ್ಗೆ ಪ್ರಾರಂಭದಿಂದಲೂ ಕುತೂಹಲವಿತ್ತು. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಕೋಸ್ಟಲ್​ವುಡ್​ನ ಟಾನುಟಿ ಸ್ಟಾರ್​ಗಳಿರುವ ಕಾರಣ ಸಿನಿಮಾ ಬಗ್ಗೆ ನಿರೀೆ ಹೆಚ್ಚಿತ್ತು. ಹಾಗಾದರೆ ಹೇಗಿದೆ "ಪಿಚ್ಚರ್​'?
ಒಂದು ಮದುವೆ ಮಾಡಿಸಲು ಸಾವಿರ ಸುಳ್ಳು ಹೇಳಬೇಕು ಎಂಬ ಮಾತಿದೆ. ಆದರೆ, ಕೆಲವರು ಪ್ರೀತಿಸುವಾಗಲೇ ಸಾವಿರ ಸುಳ್ಳು ಹೇಳಿಬಿಡುತ್ತಾರೆ! ಸಿನಿಮಾ ಕನಸು ಹೊತ್ತು ಮಂಗಳೂರಿಗೆ ಆಡಿಷನ್​ ನೀಡಲು ಬರುವ ದೀಪು (ನಿತ್ಯಪ್ರಕಾಶ್​) ಕಣ್ಣಿಗೆ ನಿಧಿ (ಅಮೃತಾ) ಬೀಳುತ್ತಾಳೆ. ದೀಪುಗೆ ನಿಧಿ ಸಿಕ್ಕಷ್ಟೇ ಸಂತೋಷ. ಆದರೆ, ಕೌಟುಂಬಿಕ ಜೀವನದಲ್ಲಿ ಸಂತೋಷ ಕಾಣದ ನಿಧಿಗೆ ಕೂಡು ಕುಟುಂಬದ ಹುಡುಗನ ಜತೆ ಮದುವೆಯಾಗಿ, ಎಲ್ಲ ಸಂಬಂಧಗಳಲ್ಲು ಖುಷಿ ಕಾಣುವ ಆಸೆ. ಇತ್ತ ದೀಪುಗೆ ರಂಗಭೂಮಿ ಕಲಾವಿದ ಅಪ್ಪ (ನವೀನ್​ ಪಡೀಲ್​), ತಂಗಿಯೇ ಜೀವನ. ನಿಧಿ ಆಸೆಯ ಬಗ್ಗೆ ತಿಳಿದು, ಅಪ್ಪನಿಗೆ ವಿಷಯ ತಿಳಿಸುತ್ತಾನೆ. ಅಲ್ಲಿಂದ ಕಲಾವಿದರನ್ನೇ ಸೇರಿಸಿ ಒಂದು ನಕಲಿ ಕೂಡು ಕುಟುಂಬ ಸೃಷ್ಟಿಯಾಗುತ್ತದೆ. ಹಾಗಾದರೆ, ನಿಧಿಗೆ ದೀಪು ನಕಲಿ ಕುಟುಂಬದ ಅಸಲೀಯತ್ತು ಗೊತ್ತಾಗುತ್ತದಾ? ಮುಂದೆ? "ಪಿಚ್ಚರ್​' ನೋಡಿ.
ನಿರ್ದೇಶಕ ಸಂದೀಪ್​ ಬೆದ್ರ ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್​ ನವೀನ್​ ಪಡೀಲ್​, ದೇವದಾಸ್​ ಕಾಪಿಕಾಡ್​, ಅರವಿಂದ್​ ಬೋಳಾರ್​, ಪುಷ್ಪರಾಜ್​, ಭೋಜರಾಜ್​ ವಾಮಂಜೂರ್​... ಹೀಗೆ ಕೋಸ್ಟಲ್​ವುಡ್​ನ ಸ್ಟಾರ್​ಗಳನ್ನು ಒಂದೆಡೆ ಸೇರಿಸಿದ್ದಾರೆ. ಹೀಗಾಗಿ ಬಿಗ್​ಸ್ಕ್ರೀನ್​ ಮೇಲೆ ದಿಗ್ಗಜರ ಜುಗಲ್​ಬಂದಿ ನೋಡುವ ಥ್ರಿಲ್​ ಪ್ರೇಕ್ಷಕರಿಗೆ. ಜತೆಗೆ ಸ್ವಲ್ಪ ಸುದೀರ್ ಅಂತನ್ನಿಸಿದರೂ, ನೋಡಿಸಿಕೊಂಡು ಹೋಗುತ್ತದೆ. ತುಳು ಚಿತ್ರರಂಗ ಕಾಮಿಡಿ ಪ್ರಧಾನ ಚಿತ್ರಗಳಿಂದಲೇ ಹೆಚ್ಚು ಹೆಸರುವಾಸಿ. ಹೀಗಿರುವಾಗ ಈ "ಪಿಚ್ಚರ್​'ನಲ್ಲಿ ಎಲ್ಲ ಎಮೋಷನ್​ಗಳನ್ನೂ ದಾಟಿಸುವ ಪ್ರಯತ್ನ ಮಾಡಿದ್ದಾರೆ ಸಂದೀಪ್​. ದಿಗ್ಗಜರ ನಡುವೆ ನಿತ್ಯಪ್ರಕಾಶ್​, ಅಮೃತಾ ಕೂಡ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಂಗೀತ ಕಥೆಗೆ ಪೂರಕವಾಗಿದೆ. ಹೀಗಾಗಿ ಈ ಫ್ಯಾಮಿಲಿ ಎಂಟರ್​ಟೇನರ್​ "ಪಿಚ್ಚರ್​'ನ ಒಮ್ಮೆ ನೋಡಲಡ್ಡಿಯಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net