ಟಾಕ್ಸಿಕ್ ಚಿತ್ರದ ಇಂಟಿಮೇಟ್ ದೃಶ್ಯಗಳ ಬಗ್ಗೆ ಪತ್ನಿ ರಾಧಿಕಾ ಪಂಡಿತ್​ ಪ್ರತಿಕ್ರಿಯೆ ಹೇಗಿತ್ತು? ಕೊನೆಗೂ ಉತ್ತರಿಸಿದ ಯಶ್​! Yash

ಟಾಕ್ಸಿಕ್ ಚಿತ್ರದ ಇಂಟಿಮೇಟ್ ದೃಶ್ಯಗಳ ಬಗ್ಗೆ ಪತ್ನಿ ರಾಧಿಕಾ ಪಂಡಿತ್​ ಪ್ರತಿಕ್ರಿಯೆ ಹೇಗಿತ್ತು? ಕೊನೆಗೂ ಉತ್ತರಿಸಿದ ಯಶ್​! Yash
ಟಾಕ್ಸಿಕ್ ಚಿತ್ರದ ಇಂಟಿಮೇಟ್ ದೃಶ್ಯಗಳ ಬಗ್ಗೆ ಪತ್ನಿ ರಾಧಿಕಾ ಪಂಡಿತ್​ ಪ್ರತಿಕ್ರಿಯೆ ಹೇಗಿತ್ತು? ಕೊನೆಗೂ ಉತ್ತರಿಸಿದ ಯಶ್​! Yash
Published on

ಪ್ರಮುಖ ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾದ ಇಂಟಿಮೇಟ್ ದೃಶ್ಯಗಳ ಬಗ್ಗೆ ಪತ್ನಿ ರಾಧಿಕಾ ಪ್ರತಿಕ್ರಿಯೆ ಬಹಿರಂಗಪಡಿಸಿದ ಯಶ್
  • ಅಂತಹ ದೃಶ್ಯಗಳನ್ನು ಕಂಡು ರಾಧಿಕಾಗೆ ಅಸಮಾಧಾನವಿತ್ತು ಎಂದು ಮುಕ್ತವಾಗಿ ಒಪ್ಪಿಕೊಂಡ ನಟ ಯಶ್
  • ಕಥೆಯ ಬೇಡಿಕೆಯಂತೆ ನಟಿಸುವುದು ಅನಿವಾರ್ಯವಾಗಿತ್ತು ಎಂದು ಸ್ಪಷ್ಟನೆ ನೀಡಿದ ಯಶ್
  • ತಮಗೂ ಕೂಡ ಅಂತಹ ದೃಶ್ಯಗಳಲ್ಲಿ ನಟಿಸುವುದು ಕಂಫರ್ಟ್ ಆಗಿರಲಿಲ್ಲ ಎಂದ ರಾಕಿಂಗ್ ಸ್ಟಾರ್
  • ರಾಧಿಕಾ ಒಬ್ಬ ನಟಿಯಾಗಿರುವುದರಿಂದ ವೃತ್ತಿಪರತೆ ಮತ್ತು ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿ ತಿಳಿಯುತ್ತಾರೆ ಎಂದ ಯಶ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ( Yash ) ತಮ್ಮ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಲ್ಲಿನ ಇಂಟಿಮೇಟ್ ದೃಶ್ಯಗಳ ಕುರಿತು ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಮೊದಲ ಬಾರಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಪ್ರಮುಖ ಸುದ್ದಿ ವಾಹಿನಿ ಇಂಡಿಯಾ ಟಿವಿಯ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ತಾವು ಅಂತಹ ದೃಶ್ಯಗಳಲ್ಲಿ ನಟಿಸುವುದಕ್ಕೆ ಪತ್ನಿ ರಾಧಿಕಾ ಸಂಪೂರ್ಣ ಒಪ್ಪಿಗೆ ನೀಡಿರಲಿಲ್ಲ ಎಂದಿದ್ದಾರೆ. ಸದ್ಯ ಈ ಕುತೂಹಲಕಾರಿ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್​, ಯಾರೇ ಆಗಲಿ ತುಂಬಾ ಹತ್ತಿರದವರು ಅಂತಹ ದೃಶ್ಯಗಳನ್ನು ನೋಡಿ ಅಸಮಾಧಾನಗೊಳ್ಳುವುದು ಸಹಜ. ಹಾಗಾಗಿ ರಾಧಿಕಾಗೂ ಸಹ ಈ ವಿಚಾರದಲ್ಲಿ ಆರಂಭದಲ್ಲಿ ಮುಜುಗರ ಅಥವಾ ಅಸಮಾಧಾನವಿತ್ತು ಎಂದು ಯಶ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ವೃತ್ತಿಪರತೆಯ ನಡುವೆಯೂ ಸಂಗಾತಿಯ ಮೇಲಿನ ಪ್ರೀತಿ ಮತ್ತು ಕಾಳಜಿಯಿಂದಾಗಿ ಇಂತಹ ವಿಷಯಗಳು ಸಹಜವಾಗಿಯೇ ಕೆಲವೊಮ್ಮೆ ಯೋಚನೆಗೆ ಹಚ್ಚುತ್ತವೆ ಎಂಬುದನ್ನು ಯಶ್​ ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, ಕಥೆಯು ಅಂತಹ ದೃಶ್ಯಗಳನ್ನು ಬೇಡಿದ್ದರಿಂದ ಚಿತ್ರದಲ್ಲಿ ಅವುಗಳನ್ನು ಅನಿವಾರ್ಯವಾಗಿ ಮಾಡಬೇಕಾಯಿತು ಎಂದು ಯಶ್ ವಿವರಿಸಿದ್ದಾರೆ. ಕೆಲವು ವಿಷಯಗಳನ್ನು ಜನರ ನಂಬಿಕೆಗಾಗಿ ಮಾಡಿದರೆ, ಇನ್ನು ಕೆಲವು ದೃಶ್ಯಗಳು ಮುಂದಿನ ಪೀಳಿಗೆಗೆ ಕಥೆಯ ನೈಜತೆಯನ್ನು ತಿಳಿಸಲು ಅಥವಾ ಒಂದು ರೆಫರೆನ್ಸ್ ಆಗಿ ಮಾಡಲು ಅನಿವಾರ್ಯವಾಗುತ್ತವೆ ಎಂಬ ಆಳವಾದ ದೃಷ್ಟಿಕೋನವನ್ನು ಯಶ್​ ಅವರು ಹಂಚಿಕೊಂಡಿದ್ದಾರೆ.
ಈ ರೀತಿಯ ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸುವುದು ತಮಗೂ ಕೂಡ ಸಂಪೂರ್ಣವಾಗಿ ಕಂಫರ್ಟ್ ಆಗಿರಲಿಲ್ಲ ಎಂದು ಯಶ್ ಬಹಿರಂಗಪಡಿಸಿದ್ದಾರೆ. ಕಥೆಯ ದೃಷ್ಟಿಯಿಂದ ಇದು ಪ್ರಮುಖ ಭಾಗವಾಗಿದ್ದರೂ, ಪತ್ನಿ ಖುಷಿಯಾಗಿಲ್ಲ ಎಂದ ಮಾತ್ರಕ್ಕೆ ಅವಳಿಗೆ ತಮ್ಮ ಮೇಲೆ ಕೋಪವಿದೆ ಎಂದರ್ಥವಲ್ಲ ಎಂದು ಯಶ್​ ಸ್ಪಷ್ಟಪಡಿಸಿದ್ದಾರೆ. ವೃತ್ತಿಪರತೆಯ ಮಿತಿಗಳು ಮತ್ತು ವೈಯಕ್ತಿಕ ಭಾವನೆಗಳ ನಡುವಿನ ಸೂಕ್ಷ್ಮ ರೇಖೆಯನ್ನು ಯಶ್​ ಅವರು ಇಲ್ಲಿ ಎಳೆದು ತೋರಿಸಿದ್ದಾರೆ.
ಪತ್ನಿ ರಾಧಿಕಾ ಪಂಡಿತ್ ಕೂಡ ಒಬ್ಬ ನಟಿಯಾಗಿರುವುದರಿಂದ, ಅವರು ತಮ್ಮ ನಟನಾ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿ ನೋಡಬಲ್ಲ ಪ್ರಬುದ್ಧತೆ ಹೊಂದಿದ್ದಾರೆ ಎಂದು ಯಶ್ ಪ್ರಶಂಸಿಸಿದ್ದಾರೆ. ಅವರಿಗೆ ನನ್ನ ಮೇಲೆ ಅಪಾರ ನಂಬಿಕೆಯಿದೆ. ನಾನು ಅಂತಹ ದೃಶ್ಯಗಳಲ್ಲಿ ನಟಿಸುವಾಗ ಅಲ್ಲಿ ಅವಳ ಪತಿಯ ಬದಲಿಗೆ ಕೇವಲ ಒಬ್ಬ ವೃತ್ತಿಪರ ನಟ ಮಾತ್ರ ಇರುತ್ತಾನೆ ಎಂಬುದು ರಾಧಿಕಾಗೆ ಚೆನ್ನಾಗಿ ತಿಳಿದಿದೆ ಎಂದು ಯಶ್ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net