Krishnan Lovestory 2 - ಮುಂದುವರಿಯಲಿದೆ ಕೃಷ್ಣನ್​ ಲವ್​ಸ್ಟೋರಿ

Krishnan Lovestory 2 -
Krishnan Lovestory 2 -
Published on
Krishnan Lovestory 2 -
ಶಶಾಂಕ್​ ನಿರ್ದೇಶನದಲ್ಲಿ ಕೃಷ್ಣ ಅಜೇಯ್​ ರಾವ್​ ಮತ್ತು ರಾಧಿಕಾ ಪಂಡಿತ್​ ನಟಿಸಿದ್ದ "ಕೃಷ್ಣನ್​ ಲವ್​ಸ್ಟೋರಿ' 2010ರಲ್ಲಿ ರಿಲೀಸ್​ ಆಗಿ ಯಶಸ್ಸು ಕಂಡಿತ್ತು. ಇದೀಗ 16 ವರ್ಷಗಳ ಬಳಿಕ ಶಶಾಂಕ್​ ಮತ್ತು ಅಜೇಯ್​ ರಾವ್​ ಸೀಕ್ವೆಲ್​ನೊಂದಿಗೆ ವಾಪಸ್ಸಾಗಿದ್ದಾರೆ. ಶುಕ್ರವಾರ "ಕೃಷ್ಣನ್​ ಲವ್​ಸ್ಟೋರಿ 2' ಘೋಷಿಸಿರುವ ನಿರ್ದೇಶಕ ಶಶಾಂಕ್​, "ಗೀತಾಳನ್ನು (ರಾಧಿಕಾ) ಕಳೆದುಕೊಂಡ ನಾಯಕ ಕೃಷ್ಣನ (ಅಜೇಯ್​) ಜೀವನದಲ್ಲಿ ಈ 16 ವರ್ಷಗಳಲ್ಲಿ ಏನಾಯಿತು? ಮುಂದೆ ಏನಾಗಲಿದೆ? ಆತನ ಜೀವನ ಹೇಗೆಲ್ಲಾ ತಿರುವುಗಳನ್ನು ಪಡೆಯುತ್ತದೆ? ಎಂಬ ಕಥೆಯಿದು. ಹೀಗಾಗಿಯೇ ಈ ಗ್ಯಾಪ್​ ಬೇಕಿತ್ತು. ನಾಲ್ಕೆ$ದು ವರ್ಷಗಳ ಹಿಂದೆಯೇ ಈ ಸೀಕ್ವೆಲ್​ ಬಗ್ಗೆ ಪ್ಲಾ$್ಯನ್​ ಮಾಡಿದ್ದೆ. ಆದರೆ, ನಾನು ಫ್ರೀ ಇದ್ದಾಗ ಅಜೇಯ್​ ಬಿಜಿಯಿದ್ದರು, ಅವರು ಫ್ರೀ ಇದ್ದಾಗ ನಾನು ಬಿಜಿಯಿರುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ಸದ್ಯ ಪ್ರಿ&ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ನವೆಂಬರ್​ನಿಂದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ. ಅಜೇಯ್​ ರಾವ್​ ಜತೆಗೆ ಉಮಾಶ್ರೀ, ಅಚ್ಯುತ್​ ಕುಮಾರ್​ ಸೇರಿ ಕೆಲವರು ಎರಡನೇ ಭಾಗದಲ್ಲೂ ಇರಲಿದ್ದಾರೆ. ಹಾಗೇ ಹೊಸ ಪಾತ್ರಗಳು ಸಹ ಸೇರಿಕೊಳ್ಳಲಿವೆ. ಇನ್ನು ತಾಂತ್ರಿಕ ಬಳಗದಲ್ಲಿ ಬದಲಾವಣೆಗಳಾಗಿದ್ದು, ಸೀಕ್ವೆಲ್​ಗೆ ಅರ್ಜುನ್​ ಜನ್ಯ ಸಂಗೀತ, ಅಭಿಲಾಷ್​ ಕಳತ್ತಿ ಛಾಯಾಗ್ರಹಣ ಹಾಗೂ ಮಹಾದೇವಯ್ಯ ಹಿರೇಮಠ ಸಂಕಲನವಿರಲಿದೆ.

ಕೆಲವು ನೋವುಗಳು ಮರೆಯಾಗುವುದಿಲ್ಲ

"ಸೀಕ್ವೆಲ್​ ಯಾವಾಗಲೂ ಕಷ್ಟವೇ' ಎನ್ನುವ "ಕೃಷ್ಣನ್​ ಲವ್​ಸ್ಟೋರಿ'ಯ ಮುಂದುವರಿದ ಭಾಗ ಕೈಗೆತ್ತಿಕೊಂಡಿರುವ ಶಶಾಂಕ್​, "ದೊಡ್ಡ ಸ್ಟಾರ್​ ಇಲ್ಲದಿರುವ ಹೊಸ ಚಿತ್ರಗಳು, ಶೀರ್ಷಿಕೆಗಳನ್ನು ಜನರಿಗೆ ಗೊತ್ತಾಗಿಸಲು ತುಂಬ ಸಮಯ ಬೇಕು. ಆ ವಿಷಯದಲ್ಲಿ ಸೀಕ್ವೆಲ್​ಗಳು ಹಗುರಾಗಿಸುತ್ತವೆ. ಹಾಗಂತ ಸೀಕ್ವೆಲ್​ ಅಂದಾಕ್ಷಣ ಸಿನಿಮಾ ಗೆಲ್ಲುವುದಿಲ್ಲ. ಮೊದಲ ಭಾಗಕ್ಕೆ ಪೂರಕವಾಗಿ ಎರಡನೇ ಭಾಗದ ಕಥೆಯಿರಬೇಕು. ಅದು ಜನರಿಗೆ ಇನ್ನೂ ಚೆನ್ನಾಗಿ ಕನೆಕ್ಟ್​ ಆಗಬೇಕು. ಮೊದಲ ಭಾಗದಲ್ಲಿ ಕೃಷ್ಣನ ಕಥೆ ಮುಗಿದಿರಲಿಲ್ಲ. ಹೇಳಲೇಬೇಕಾದ ಇನ್ನೊಂದು ಅದ್ಭುತ ಕಥೆ ಇದೆ ಅಂತ ಅನ್ನಿಸಿಯೇ ಈ ಕಥೆ ಮಾಡುತ್ತಿದ್ದೇನೆ. ಏಕೆಂದರೆ ಕೆಲವು ಪ್ರೇಮಗಳು ಮುಗಿಯುವುದಿಲ್ಲ, ಕೆಲವು ನೋವುಗಳು ಮರೆಯಾಗುವುದಿಲ್ಲ' ಎನ್ನುತ್ತಾರೆ ಶಶಾಂಕ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net