ಮದುವೆ ಸಂಭ್ರಮದ ನಡುವೆಯೇ ನಂದಿನಿಗೆ ಸರ್ಕಾರಿ ಕೆಲಸ ಸಿಗುತ್ತದೆ. ಆದರೆ, ಅತ್ತೆ ಭಾಗ್ಯಮ್ಮಗೆ (ಅರುಣ) ಸೊಸೆ ಮೊಮ್ಮಕ್ಕಳನ್ನು ಯಾವಾಗ ಕೊಡುತ್ತಾಳೋ ಎಂಬ ಕಾತುರ. ಅದರ ನಡುವೆಯೇ ತಾನೂ ಕೆಲಸ ಮಾಡದೇ, ಅಮ್ಮನ ದುಡಿಮೆಯನ್ನೇ ಅವಲಂಬಿಸಿರುವ ಸಿದ್ದನ ಮೇಲೆ ಬೇಸರಗೊಂಡು ನಂದಿನಿ, ಮದುವೆಯಾದ ಮೂರೇ ದಿನಕ್ಕೆ "ಸಂತಾನಕ್ಕಿಂತ ವರಮಾನ ಮುಖ್ಯ' ಅಂತ ಮನೆ ತೊರೆದು, ಕೆಲಸಕ್ಕೆ ಸೇರುತ್ತಾಳೆ. ಮತ್ತೊಂದೆಡೆ ಬಚ್ಚೇಗೌಡ (ರವಿಶಂಕರ್) ಸಿದ್ದನ ಮೇಲೆ ಸೇಡು ತೀರಿಸಿಕೊಳ್ಳಲು, ಗ್ರಾಮ ಪಂಚಾಯ್ತಿ ಸದಸ್ಯನಾದರೇನು? ಅಧ್ಯಕ್ಷನಾಗಲು ಬಿಡಲ್ಲ ಅಂತ ಪಣ ತೊಡುತ್ತಾನೆ. ಆದರೆ, ಸಿದ್ದ ಬೆಣ್ಣೆ (ಗಿರಿ), ಮಟನ್ (ಶಿವರಾಜ್) ಜತೆ ಸೇರಿ ಊರಲ್ಲಿ ಜಿಮ್ ತೆರೆದು, ಸದಸ್ಯರನ್ನು ಗೋವಾಗೆ ಕರೆದೊಯ್ದು ಅಧ್ಯಕ್ಷನಾಗಲು ಪ್ರಯತ್ನ ಮುಂದುವರಿಸುತ್ತಾನೆ. ಅದೇ ಸಮಯದಲ್ಲಿ ಊರ ಮಧ್ಯೆ ಹೈವೇ ನಿರ್ಮಿಸಲು, ಸರ್ವೇಗೆಂದು ಅಧಿಕಾರಿಗಳು ಬರುತ್ತಾರೆ. ಹೀಗೆ ಒಂದರ ಹಿಂದೊಂದರಂತೆ ಸಿದ್ದನಿಗೆ ವಯಕ್ತಿಕ ಸಮಸ್ಯೆಗಳ ಜತೆಗೆ ಊರ ಸಮಸ್ಯೆಗಳೂ ಹೆಚ್ಚಾಗುತ್ತವೆ. ಅದೆಲ್ಲವನ್ನು ಆತ ಹೇಗೆ ಬಗೆಹರಿಸುತ್ತಾನೆ? "ಅಯೋಗ್ಯ 2' ನೋಡಿ.