Sanvi Sudeep - ಕಿಚ್ಚ ಸುದೀಪ್ ನಾಯಕನಾಗಿರುವ "ಮಾರ್ಕ್' ಹಲವು ವಿಶೇಷತೆಗಳಿಂದ ಕೂಡಿದೆ. "ಮ್ಯಾಕ್ಸ್' ಯಶಸ್ಸಿನ ಬಳಿಕ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಕಾಂಬಿನೇಷನ್ನಲ್ಲಿ ಬರುತ್ತಿರುವುದು ಒಂದು ಕಾರಣವಾದರೆ ಮಲಯಾಳಂ ನಟ ಟಾಮ್ ಶೈನ್ ಚಾಕೊ, ತೆಲುಗಿನ ನವೀನ್ ಚಂದ್ರ, ತಮಿಳಿನ ಯೋಗಿ ಬಾಬು, ಗುರು ಸೋಮಸುಂದರಂ ಮತ್ತು ದೀಪ್ಶಿಕಾ ಸೇರಿ ಕನ್ನಡದ ಪ್ರತಾಪ್ ನಾರಾಯಣ್, ರೋಷಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ ಸೇರಿ ಬೇರೆ ಬೇರೆ ಚಿತ್ರರಂಗಗಳ ಹಲವು ಕಲಾವಿದರು ತೆರೆ ಹಂಚಿಕೊಂಡಿರುವುದು ಮತ್ತೊಂದು ಕಾರಣ. ಈಗಾಗಲೇ ಚಿತ್ರದ "ಸೈಕೋ ಸೈತಾನ್' ವೈರಲ್ ಆಗಿದ್ದು, ಇತ್ತೀಚೆಗಷ್ಟೆ "ಮಸ್ತ್ ಮಲೈಕಾ' ರಿಲೀಸ್ ಆಗಿದೆ.